Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

English Teacher: ರಂಗೂನ್​ನಿಂದ ಗಂಡನ ಜೊತೆಗೆ ಭಾರತಕ್ಕೆ ಬಂದ ಈ ಮರ್ಲಿನಜ್ಜಿ ತನ್ನವರನ್ನೆಲ್ಲ ಕಳೆದುಕೊಂಡು ಭಿಕ್ಷಾಟನೆಗೆ ತೊಡಗಿದ್ದರು. ಇದೀಗ ಆಶಿಕ್ ಎಂಬ ಯುವಕನ ಕಣ್ಣಿಗೆ ಬಿದ್ದ ಈಕೆ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಸಿಂಪಲ್​ ಇಂಗ್ಲಿಷ್ ಕಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. 81 ವರ್ಷದ ಈ ಅಜ್ಜಿಯ ಗಟ್ಟಿತನ, ಉತ್ಸಾಹವನ್ನು ನೀವು ಸ್ವತಃ ಅನುಭವಿಸಬೇಕು.

Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್
ಬರ್ಮಾದ ಇಂಗ್ಲಿಷ್​ ಟೀಚರ್​ ಮರ್ಲಿನ್​ ಚೆನ್ನೈನಲ್ಲಿ ಆಶಿಕ್​ ಜೊತೆಗೆ.
Follow us
ಶ್ರೀದೇವಿ ಕಳಸದ
|

Updated on:Sep 19, 2023 | 10:44 AM

Chennai: ಒಮ್ಮೊಮ್ಮೆ ಈ ಇಂಟರ್​ನೆಟ್​ ಎಂಬ ಮಹಾಜಾಲದಲ್ಲಿ ದೇಶಕಾಲಗಳನ್ನು ಮೀರಿದ ಬೇರೆಯದೇ ವಿಶ್ವ ಎಂಬ ಭಾವನೆ ಬರುವಂಥ ಘಟನೆಗಳು ನಡೆಯುವುದುಂಟು. ಸಾಮಾಜಿಕ ಜಾಲತಾಣಗಳ ಮಾಹಿತಿಯ ಮಹಾಪೂರದಿಂದಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳು ಈ ಕಾಲದಲ್ಲಿ ನಡೆಯುತ್ತಿವೆ. ಆದರೂ ಒಮ್ಮೊಮ್ಮೆ ಅವುಗಳು ಮಾತ್ರವೇ ಆಗಮಾಡಬಹುದೆನ್ನಿಸುವ ವಿದ್ಯಮಾನಗಳು ನಮ್ಮೆದುರಿಗೆ ಧುತ್ತನೇ ಬಂದು ನಿಂತು ನಮ್ಮನ್ನು ಬೆರಗಿಗೆ ತಳ್ಳುತ್ತವೆ. ಎದೆ ಬೆಚ್ಚಗೆ ಮಾಡುತ್ತವೆ, ಧನ್ಯತೆಯ ಭಾವದ ಅನುಭೂತಿ ಕೊಡುತ್ತವೆ. ಅಂಥದೇ ಒಂದು ಸಂಗತಿಯನ್ನು ಮೊಹಮ್ಮದ್ ಆಶಿಕ್ ಎಂಬ Instagram content creator ಒಬ್ಬರು ಹಂಚಿಕೊಂಡಿದ್ದು ನಿರೀಕ್ಷೆಯಂತೆ ಅದು ವೈರಲ್ ಆಗಿದೆ, 4.3 ಮಿಲಿಯನ್​ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಮೈಸುತ್ತ ಎಂಟು ಬೆಂಕಿಯ ಬಳೆಗಳನ್ನು ತಿರುಗಿಸಿ ವಿಶ್ವದಾಖಲೆಗೈದ ಗ್ರೇಸ್ ಗುಡ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಿಮ್ಮ ಹೆಸರೇನು, ಅಜ್ಜಿ? ನೀವು ಎಲ್ಲಿಂದ ಬಂದಿರಿ?’ ಎಂದು ಆಶಿಕ್ ಬೊಚ್ಚುಬಾಯಿಯ 81 ವರ್ಷದ ಈ ಬಡಮುದುಕಿಯನ್ನು ಕೇಳುವುದರ ಮೂಲಕ ಶುರುವಾಗುವ ಈ ವಿಡಿಯೋ ಮರುಕ್ಷಣವೇ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ. ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತ ತನ್ನ ಚರಿತ್ರೆಯನ್ನು ಹೇಳುವ ಮರ್ಲಿನ್ ಎಂಬ ಹೆಸರಿನ ಈ ಅಜ್ಜಿ, ಬರ್ಮಾದ ರಂಗೂನ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದವರು.

ಬರ್ಮಾದ ಮರ್ಲಿನ್​ ಚೆನ್ನೈಗೆ ಬಂದಿದ್ದು ಹೀಗೆ

ಮರ್ಲಿನ್​ ಮದುವೆಯಾಗಿ ಗಂಡನ ಜೊತೆ ಚೆನ್ನೈ ತಲುಪಿದರು. ಮುಂದೆ ಏನೇನೋ ಕಾರಣಗಳಿಂದ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿ ಭಿಕ್ಷೆ ಬೇಡುತ್ತ ಹೊಟ್ಟೆಹೊರೆಯುತ್ತಿದ್ದರು. ಇದೀಗ ‘A broke college kid’ ಹೆಸರಿನ Instagram ಖಾತೆಯುಳ್ಳ ಆಶಿಕ್ ಕಣ್ಣಿಗೆ ಬಿದ್ದು ತಮ್ಮ ಕತೆ ಹೇಳಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಇವರ ಪುನರ್ವಸತಿಗೆ ಅನುಕೂಲವಾಗಲೆಂದು ಆಶಿಕ್ Englishwithmerlin ಎಂಬ Instagram ಖಾತೆ ತೆರೆದಿದ್ದಾರೆ.

ಇಂಗ್ಲಿಷ್​ ಟೀಚರ್ ಬಂದರು!

View this post on Instagram

A post shared by Merlin (@englishwithmerlin)

ಹೀಗೆ ಈ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮರ್ಲಿನ್ ಇಂಗ್ಲಿಷ್ ಕಲಿಸಲು ಶುರು ಮಾಡಿದ್ದಾರೆ. ಈಗಾಗಲೇ ಸುಮಾರು 6 ಲಕ್ಷ ಫಾಲೋವರ್ಸ್​ ಇವರಿಗಿದ್ಧಾರೆ. ಮೊದಲಿಗೆ ಹೇಳಿದಂತೆ ಅಂತರ್ಜಾಲದ ಮಹಿಮೆ ಹೇಗಿದೆಯೆಂದರೆ ಈ ವಿಡಿಯೋ ನೋಡಿದ ಮರ್ಲಿನ್ ಅವರ ಹಳೆಯ ಶಿಷ್ಯನೊಬ್ಬ ಅವರನ್ನು ಗುರುತಿಸಿ ಸಂಪರ್ಕಿಸಿದನಂತೆ. ಮರ್ಲಿನ್ ಈಗ ವೃದ್ಧಾಶ್ರಮದಲ್ಲಿ ನೆಲೆಸಿದ್ದು ಅವರ ದಿನನಿತ್ಯದ ಸಮಸ್ಯೆಗಳು ಬಗೆಹರಿದಿವೆ.

ಮರ್ಲಿನ್​ ವೃದ್ಧಾಶ್ರಮಕ್ಕೆ ತೆರಳಿದ್ದು ಹೀಗೆ

ಆಶಿಕ್​, ನೀವು ಅಜ್ಜಿಯನ್ನು ಮಾತನಾಡಿಸುವಾಗ ಆಕೆ ಅಳಲೇ ಇಲ್ಲ ನೋಡಿ, ಆಕೆ ಬಹಳ ಗಟ್ಟಿಹೆಣ್ಣುಮಗಳು. ನಾನೂ ಈ ಅಜ್ಜಿಗೆ ಸಹಾಯ ಮಾಡಬೇಕು. ಇಷ್ಟು ವರ್ಷ ನೋಡಿದ ವಿಡಿಯೋಗಳಲ್ಲಿ ಇದು ಅತ್ಯುತ್ತಮ ವಿಡಿಯೋ, ನಾನೂ ಅವಳಿಗೆ ಸಹಾಯ ಮಾಡಬೇಕು ಮಾಹಿತಿ ಕೊಡಿ. ಸರ್ಕಾರವು ಇಂಥ ಅನೇಕ ಜ್ಞಾನವಂತ ಹಿರಿಯ ನಾಗರಿಕರಿಗೆ ಅನಾಥ ಮಕ್ಕಳ ಆಶ್ರಮದಲ್ಲಿ ಕೆಲಸ ಮತ್ತು ಆಶ್ರಯ ಕೊಡಬೇಕು, ಇದರಿಂದ ಪರಸ್ಪರ ಸಹಾಯವಾಗುತ್ತದೆ… ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:40 am, Tue, 19 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ