Viral Video: ಸಮುದ್ರದೊಳಗೊಬ್ಬ ಡೆಂಟಿಸ್ಟ್​; ಇವರ ಕಾರ್ಯಕ್ಷಮತೆಯನ್ನು ಮೆಚ್ಚಿದ ನೆಟ್ಟಿಗರು

Dentist: ಇವರು ಡಾ. ಫಿಷ್​. ಹೆಸರೇ ಹೇಳುವಂತೆ ಇವರು ನೀರಿನಾಳದೊಳಗಷ್ಟೇ ಟ್ರೀಟ್​ಮೆಂಟ್ ಕೊಡುತ್ತಾರೆ. ನೀವು ಇವರ ಬಳಿ ನಿಮ್ಮ ಹಲ್ಲುಗಳನ್ನು ತೋರಿಸಬೇಕೆಂದರೆ ಇವರಿದ್ದಲ್ಲಿಗೇ ಹೋಗಬೇಕು. ಹಾಗಿದ್ದರೆ ನಿಮಗೆ ಈಜುವುದು ಗೊತ್ತಿರಬೇಕು, ನಿರ್ಭಯವಾಗಿ ಡಾಕ್ಟರ್ ಎದುರು ಬಾಯಿ ತೆರೆದು ಟ್ರೀಟ್​ಮೆಂಟ್​ ತೆಗೆದುಕೊಳ್ಳುವ ತಾಳ್ಮೆ ಇರಬೇಕು. ಇಲ್ಲೊಂದು ಪ್ರಾತ್ಯಕ್ಷಿಕೆ ಇದೆ, ನೋಡಿ ಧೈರ್ಯ ತಂದಕೊಳ್ಳಿ.

Viral Video: ಸಮುದ್ರದೊಳಗೊಬ್ಬ ಡೆಂಟಿಸ್ಟ್​; ಇವರ ಕಾರ್ಯಕ್ಷಮತೆಯನ್ನು ಮೆಚ್ಚಿದ ನೆಟ್ಟಿಗರು
ಬಾಯಿಯನ್ನೇ ಈಜುಗೊಳ ಮಾಡಿಕೊಂಡ ಮೀನು
Follow us
ಶ್ರೀದೇವಿ ಕಳಸದ
|

Updated on: Sep 20, 2023 | 10:18 AM

Fish: ಇವನು ನೀರಿನೊಳಗೆ ಧುಮುಕುತ್ತಿದ್ದಂತೆ ಬಾಯಿ ತೆರೆಯುತ್ತಾನೆ. ಪುಟ್ಟ ಮೀನೊಂದು ಇವನ ಬಾಯೊಳಗೆ ಹೋಗಿ ಬರುತ್ತದೆ. ಹೀಗೆ ಅವನು ಬಾಯಿ ತೆರೆದಿಡುವುದು ಅದು ಒಳಹೋಗಿ ಹೊರರುವುದು ಒಂದಿಷ್ಟು ಸಲ ನಡೆದು ಅದಕ್ಕೂ ಅವನಿಗೆ ಅದೊಂದು ರೀತಿಯ ಆಟವಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ನೀವು ಎಲ್ಲೀತನಕ ಸುಮ್ಮನಿರುತ್ತೀರೋ ಅಲ್ಲೀತನಕ ಮೀನುಗಳು ನಿಮ್ಮ ಹಲ್ಲುಗಳನ್ನು (Teeth) ಸ್ವಚ್ಛಗೊಳಿಸುತ್ತಿರುತ್ತವೆ ಎಂಬ ಶೀರ್ಷಿಕೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋಗಿದೆ. ಜು. 7ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು 62 ಮಿಲಿಯನ್ ಜನರನ್ನು ತಲುಪಿ ಗಮನ ಸೆಳೆದಿದೆ.

ಇದನ್ನೂ ಓದಿ : Viral Video: ಅಮೆರಿಕಾ ಮತ್ತು ಜಪಾನ್​ ಇನ್​ಫ್ಯೂಯೆನ್ಸರ್ಸ್​ ಹಿಂದಿಯಲ್ಲಿ ನಡೆಸಿದ ಸಂಭಾಷಣೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಪರೂಪದ ಈ ವಿಡಿಯೋ ಅನ್ನು ಈತನಕ 3.8 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಈ ಡಾಕ್ಟರ್ ಫಿಶ್ ತುಂಬಾ ಮುದ್ದಾಗಿದ್ದಾರೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ತುಂಬಾ ಉಲ್ಲಾಸಮಯವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಬ್ರೋ ನಿನಗೆ ಹುಚ್ಚಾ? ಎಂದು ಕೇಳಿದ್ಧಾರೆ ಮತ್ತೊಬ್ಬರು. ಈ ವಿಡಿಯೋಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಮಗದೊಬ್ಬರು.

ಸಾಗರದೊಳಗೊಬ್ಬ ಡೆಂಟಿಸ್ಟ್ ಫಿಷ್​

ಅದು ಹಾಗೇ ಅವನ ಹೊಟ್ಟೆ ಸೇರಿದರೆ ಏನು ಗತಿ? ಎಂದಿದ್ದಾರೆ ಒಬ್ಬರು. ನನಗಂತೂ ಇದು ಭಯಾನಕ ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಇದು ಸ್ವಲ್ಪ ಅಪಾಯಕಾರಿ ಎನ್ನಿಸುವುದಿಲ್ಲವೆ ಎಂದಿದ್ದಾರೆ ಮತ್ತೊಬ್ಬರು. ಈ ವಿಡಿಯೋ ನೋಡಿ ನನಗೆ ಹೊಟ್ಟೆಯಲ್ಲಿ ಒಂಥರಾ ಆಗುತ್ತಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬಾದಲ್ ಬರ್ಸಾ ಬಿಜುಲಿ; ಬೆಂಗಳೂರು ಅಜ್ಜಿಯರ ಡ್ಯಾನ್ಸ್​ಗೆ ಮನಸೋತ ನೆಟ್ಟಿಗರು

ಅದು ಮೊಟ್ಟೆ ಇಡಲು ಜಾಗ ಹುಡುಕುತ್ತಿರಬೇಕು ಎಂದಿದ್ದಾರೆ ಒಬ್ಬರು. ನಿಮ್ಮ ಬಾಯಿಯ ಮೂಲಕ ಉಪ್ಪು ನೀರು ಒಳಸೇರುತ್ತಿಲ್ಲವೆ? ಎಂದಿದ್ದಾರೆ ಇನ್ನೊಬ್ಬರು. ಡಾಕ್ಟರ್ ಫಿಷ್​ ತುಂಬಾ ಮುದ್ದಾಗಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅದು ಯಾವ ರೀತಿಯ ಮೀನು, ವಿಷಕಾರಿ ಅಲ್ಲ ತಾನೆ? ಎಂದು ಕೇಳಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ