Viral Video: ಜವಾನ್ ಜಮಾನಾ: ‘ಚಲೇಯಾ’ಗೆ ಥಿಯೇಟರ್​ನಲ್ಲಿ ಡ್ಯಾನ್ಸ್ ಮಾಡಿದ ರೀಲಿಗ

Shahrukh Khan: ಜವಾನ ಸಿನೆಮಾ ತೆರೆಗೆ ಬಂದು ಎರಡು ವಾರಗಳಾದವು. ಈ ಸಿನೆಮಾದ ಚಲೇಯಾ ಹಾಡು ಭರಪೂರ ಟ್ರೆಂಡಿಂಗ್​ನಲ್ಲಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೀಲಿಗನೊಬ್ಬ ಥಿಯೇಟರಿನಲ್ಲಿ ಸಿನೆಮಾ ಪ್ರದರ್ಶನದ ವೇಳೆ ಈ ಹಾಡು ತೆರೆಯ ಮೇಲೆ ಬರುತ್ತಿದ್ದಂತೆ ಡ್ಯಾನ್ಸ್ ಮಾಡಿದ್ದಾನೆ. ನೆಟ್ಟಿಗರು ಈತನ ಧೈರ್ಯವನ್ನು ಮೆಚ್ಚಿ ಶ್ಲಾಘಿಸುತ್ತಿದ್ದಾರೆ. ನೋಡಿ ಈ ವಿಡಿಯೋ .

Viral Video: ಜವಾನ್ ಜಮಾನಾ: 'ಚಲೇಯಾ'ಗೆ ಥಿಯೇಟರ್​ನಲ್ಲಿ ಡ್ಯಾನ್ಸ್ ಮಾಡಿದ ರೀಲಿಗ
ಥಿಯೇಟರಿನಲ್ಲಿ ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡಿದ ರೀಲಿಗ.
Follow us
ಶ್ರೀದೇವಿ ಕಳಸದ
|

Updated on: Sep 20, 2023 | 11:25 AM

Jawan : ಶಾರುಖ್​ಖಾನ್​ (Shahrukh Khan) ಅಭಿನಯದ ಜವಾನ್​ ಬಿಡುಗಡೆಯಾಗಿ ಎರಡು ವಾರಗಳು ಕಳೆದಿವೆ. ಎಲ್ಲೆಡೆಯೂ ‘ಚಲೇಯಾ’ ಹಾಡಿನ ಜ್ವರ. ಇದೀಗ ವೈರಲ್ ಆಗಿರುವ ವಿಡಿಯೋ ವಿಶೇಷವಾಗಿದೆ. ಥಿಯೇಟರಿನಲ್ಲಿ ಜವಾನ್​ ಪ್ರದರ್ಶನಗೊಳ್ಳುತ್ತಿರುವಾಗ ಚಲೇಯಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈತನಕ 5.1 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಅಂಶ್ ಕುಕ್ರೇಜಾ ಎನ್ನುವ ವ್ಯಕ್ತಿಯೇ ಹೀಗೆ ಚಲೇಯಾಗೆ ಡ್ಯಾನ್ಸ್ ಮಾಡಿದ್ದು. ಅನೇಕರು ಪ್ರತಿಕ್ರಿಯಿಸಿ ಇವನ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಶಾರುಖ್​ ಖಾನ್​ ಸ್ಟೆಪ್​ಗಳನ್ನು ಅನುಕರಿಸಿದ ರೀತಿ ಅದ್ಭುತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : Viral Video: ಪೆನ್​ಪ್ರಿಯ ಬೆಕ್ಕು; ಕೊಟ್ಟಂತೆ ಮಾಡುವುದು ಆದರೆ ಕೊಡುವುದಿಲ್ಲ; ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅದ್ಭುತವಾಗಿದೆ! ಹೀಗೆ ಡ್ಯಾನ್ಸ್ ಮಾಡಲು ಸಾಕಷ್ಟು ಧೈರ್ಯಬೇಕು ಎಂದಿದ್ದಾರೆ ಒಬ್ಬರು. ಇವರ ಉತ್ಸಾಹದಿಂದ ಉಳಿದ ಪ್ರೇಕ್ಷಕರಿಗೆ ಕಿರಿಕಿರಿ ಉಂಟಾಗುವುದಿಲ್ಲವೆ? ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ಇವನಿಗೆ ಇಷ್ಟೊಂದು ಹುಚ್ಚು ಹಿಡಿಸಿದೆ ಎಂದರ್ಥ. ಥಿಯೇಟರಿಗೆ ಬರುವುದೇ ಮನೋರಂಜನೆಗೆ, ಇವನ ಡ್ಯಾನ್ಸ್ ಬೋನಸ್​ ಅಲ್ಲವೆ ?ಎಂದಿದ್ದಾರೆ ಮತ್ತೊಬ್ಬರು. ನನಗಂತೂ ಇದು ಇಷ್ಟವಾಯಿತು, ತನಗೆ ಅನ್ನಿಸಿದ್ದನ್ನು ಅಭಿವ್ಯಕ್ತಪಡಿಸಿದ್ದಾನೆ ಎಂದಿದ್ದಾರೆ ಒಬ್ಬರು.

ಚಲೇಯಾ ಹಾಡಿಗೆ ಥಿಯೇಟರ್​ನಲ್ಲಿಯೇ ಡ್ಯಾನ್ಸ್​

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್​ನಡಿಯಲ್ಲಿ ಅಟ್ಲೀ ನಿರ್ದೇಶನದ ಶಾರುಖ್ ಖಾನ್ ಅಭಿನಯದ ಚಲೇಯಾ ಸೆ. 7 ರಂದು ಬಿಡುಗಡೆಯಾಯಿತು. ಚಲೇಯಾ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯಿಸಿದ್ದಾರೆ. ಈ ಹಾಡು ದಿನೇದಿನೆ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಸಲಿಂಗವಿವಾಹ: ‘ಲೋಣಾವಳದ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದೆವು’ ಅವಿನಾಶ ವರುಣ

ಫರಾ ಖಾನ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡನ್ನು ಅರಿಜೀತ್ ಸಿಂಗ್ ಮತ್ತು ಶಿಲ್ಪಾ ರಾವ್ ಹಾಡಿದ್ದಾರೆ. ಕುಮಾರ್ ಸಾಹಿತ್ಯ ರಚಿಸಿದ್ದಾರೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ಧಾರೆ. ಜೈಲರ್ ಕಾವಾಲಾ ಹಾಡಿನ ನಂತರ ಟ್ರೆಂಡಿಂಗ್​ನಲ್ಲಿರುವ ಹಾಡು ಚಲೇಯಾ. ರೀಲಿಗರನ್ನು ಈ ಹಾಡು ಸದ್ಯಕ್ಕೆ ಹಿಡಿದಿಟ್ಟಿದೆ. ಮುಂದಿನ ಹಾಡು ಯಾವುದೋ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?