Viral Video: ಜವಾನ್ ಜಮಾನಾ; ರೈಲಿನಲ್ಲಿ ಓಡಾಡಿದ ನಕಲಿ ‘ಆಝಾದ’ನನ್ನು ಮೆಚ್ಚದ ನೆಟ್ಟಿಗರು

Shahrukh Khan: ಶಾರುಖ್ ಖಾನ್​ ಅಭಿಮಾನಿಗಳಿಗೆ ಸುಗ್ಗಿಯೋ ಸುಗ್ಗಿ. ಜವಾನ್​ನನ್ನು ತಲೆಮೇಲಿರಿಸಿಕೊಂಡು ಕುಣಿಸುತ್ತಿದ್ದಾರೆ. ಆಝಾದ ಪಾತ್ರವೇ ತಾವಾಗಿ ಮೈತಳೆಯುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವ್ಯಕ್ತಿಯೊಬ್ಬ ಶಾರುಖ್​ನಂತೆ ಬ್ಯಾಂಡೇಜ್​ ಸುತ್ತಿಕೊಂಡು ರೈಲಿನಲ್ಲಿ ಓಡಾಡಿದ್ದಾನೆ. ನೆಟ್ಟಿಗರು ಮಾತ್ರ ಇವನನ್ನು ನೋಡಿ ವ್ಯಂಗ್ಯವಾಡಿದ್ದಾರೆ.

Viral Video: ಜವಾನ್ ಜಮಾನಾ; ರೈಲಿನಲ್ಲಿ ಓಡಾಡಿದ ನಕಲಿ 'ಆಝಾದ'ನನ್ನು ಮೆಚ್ಚದ ನೆಟ್ಟಿಗರು
ಜವಾನನ ಆಝಾದ್​ ಪಾತ್ರದಂತೆ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ರೈಲಿನಲ್ಲಿ ಓಡಾಡಿದ ಯುವಕ
Follow us
ಶ್ರೀದೇವಿ ಕಳಸದ
|

Updated on:Sep 21, 2023 | 10:34 AM

Jawan: ಜವಾನ್​ ಸಿನೆಮಾದ ಹವಾ ದಿನೇ ದಿನೇ ಹೆಚ್ಚುತ್ತಿದೆ. ಚಲೇಯಾ ಹಾಡಿನ ರೀಲ್​ಗಳಿಗಂತೂ ಲೆಕ್ಕವೇ ಇಲ್ಲ. ನಿನ್ನೆಯಷ್ಟೇ ಶಾರುಖ್​ ಖಾನ್​ನ ಕಟ್ಟಾ ಅಭಿಮಾನಿಯಾದ ದಿವ್ಯಾಂಗ ವ್ಯಕ್ತಿಯೊಬ್ಬ ವೆಂಟಿಲೇಟರ್​ನೊಂದಿಗೆ ಥಿಯೇಟರ್​ಗೆ ಬಂದು ಸಿನೆಮಾ ನೋಡಿ ಹೋದನು. ಅಲ್ಲದೇ, ಥಿಯೇಟರಿನಲ್ಲಿ ಜವಾನ್​ ಸಿನೆಮಾ ಪ್ರದರ್ಶನ ನಡೆಯುತ್ತಿದ್ದ ವೇಳೆ ಚಲೇಯಾ (Chaleya) ಹಾಡಿಗೆ ಡ್ಯಾನ್ಸ್​ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್ ಆಯಿತು. ಇದೀಗ ಶಾರುಖ್ ಖಾನ್​ನ ಪಾತ್ರದಂತೆ (ಆಝಾದ್​) ತಲೆಗೆ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ರೈಲುನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಓಡಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರದಿಂದ ಪ್ರತಿಕ್ರಿಯಿಸುತ್ತಿದ್ಧಾರೆ.

ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್​ ಕೂಡ ನಡೆಸುವ ಧ್ರುವಿ ಪಂಚಾಲ್​ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 8ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 2 ಮಿಲಿಯನ್​ ಜನರು ನೋಡಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ವಿಡಿಯೋ ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ.

ರೈಲಿನಲ್ಲಿ ಜವಾನ್

View this post on Instagram

A post shared by Ak arbaz 01 (@_ak_arbaz_01)

@_ak_arbaz_01 ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಣ್ಣಾ ನೀವು ಬಹಳ ಒಳ್ಳೆಯ ವಿಡಿಯೋಗಳನ್ನು ಮಾಡುತ್ತೀರಿ, ಆದರೆ ದಯವಿಟ್ಟು ಅವುಗಳನ್ನು ಪೋಸ್ಟ್ ಮಾಡಬೇಡಿ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ ಇನ್ನೊಬ್ಬರು. ಅದ್ಭುತವಾಗಿ ಕಾಣುತ್ತಿದ್ದೀರಿ! ಹೀಗೆಯೇ ರಸ್ತೆಯಲ್ಲೆಲ್ಲ ಓಡಾಡಿ, ಆದರೆ ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ

ರೀಲ್​ಗೋಸ್ಕರ ಹೀಗೆ ಮಾಡಲು ಹೋಗಿ ರಿಯಲ್​ ಲೈಫ್​ನಲ್ಲಿ ನಿಜವಾಗಲೂ ಏಟು ತಿಂದರೆ ಏನು ಗತಿ ಎಂದಿದ್ದಾರೆ ಒಬ್ಬರು. ನಿನಗೆ ಆಸ್ಕರ್​ ಅವಾರ್ಡ್​ ಕೊಡಬೇಕು ಎಂದಿದ್ದಾರೆ ಇನ್ನೊಬ್ಬರು. ಮಕ್ಕಳು ವಯಸ್ಸಾದವರು ನಿನ್ನ ಅವತಾರ ನೋಡಿ ಭಯಪಡುತ್ತಾರೆ ಮಾರಾಯಾ, ಇಂಥದೆಲ್ಲ ಸಾಕುಮಾಡು. ಒಂದು ಹೋಗಿ ಇನ್ನೊಂದು ಆದರೆ ಏನು ಮಾಡುತ್ತೀ? ಎಂದಿದ್ದಾರೆ ಮತ್ತೊಬ್ಬರು. ರೈಲ್ವೇ ಪೊಲೀಸರು ಈ ವ್ಯಕ್ತಿಯನ್ನು ಯಾಕೆ ವಿಚಾರಿಸಿಕೊಳ್ಳುತ್ತಿಲ್ಲ? ಎಂದು ಒಂದಿಷ್ಟು ಜನ ಕೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:34 am, Thu, 21 September 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್