Viral Video: ತನ್ನ ಮದುವೆಯಾಯಿತು ಎಂದು ಈತ ಯಾರಿಗೆಲ್ಲ ಹೇಳುತ್ತಿದ್ದಾನೆ, ಈತನ ಸ್ನೇಹಿತರು ಯಾರೆಲ್ಲ ನೋಡಿ

Cat Lover: ಮನುಷ್ಯರಿಗಿಂತ ಪ್ರಾಣಿಗಳನ್ನೇ ನೆಚ್ಚಿಕೊಂಡಿರುವ ಅನೇಕರು ನಮ್ಮ ಮಧ್ಯೆ ಇದ್ಧಾರೆ. ಸಂಬಂಧಿಕರು, ಸ್ನೇಹಿತರಿಗಿಂತ ಬೆಕ್ಕುಗಳೇ ಹೆಚ್ಚು ಎನ್ನುವ ರೀತಿಯಲ್ಲಿ ಅವರು ಅವುಗಳೊಂದಿಗೆ ಒಡನಾಡುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಏರಿಯಾದಲ್ಲಿರುವ ಬೆಕ್ಕುಗಳಿಗೆ, ತನ್ನ ಮದುವೆಯ ವಿಷಯವನ್ನು ತಿಳಿಸುತ್ತಿದ್ದಾನೆ. ನೋಡಿ ಅವುಗಳ ಪ್ರತಿಕ್ರಿಯೆ.

Viral Video: ತನ್ನ ಮದುವೆಯಾಯಿತು ಎಂದು ಈತ ಯಾರಿಗೆಲ್ಲ ಹೇಳುತ್ತಿದ್ದಾನೆ, ಈತನ ಸ್ನೇಹಿತರು ಯಾರೆಲ್ಲ ನೋಡಿ
ನನ್ನ ಮದುವೆಯಾಯಿತು ಎಂದು ಬೆಕ್ಕುಗಳಿಗೆ ಹೇಳುತ್ತಿರುವ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on: Sep 21, 2023 | 11:44 AM

Friends : ನೀವು ಮದುವೆಯಾಗುತ್ತೀರಿ. ಆ ವಿಷಯವನ್ನು ನೀವು ಯಾರಿಗೆಲ್ಲ ಹೇಳುತ್ತೀರಿ? ನಿಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ, ಪರಿಚಿತರಿಗೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಅರೆ, ಸ್ನೇಹಿತರಿಗೆ ಹೇಳಿದರೆ ಆತ ಈಗ ಯಾಕೆ ಸುದ್ದಿಯಾಗುತ್ತಿದ್ದಾನೆ? ಏಕೆಂದರೆ ಅವನ ಸ್ನೇಹಿತರು ಒಬ್ಬಿಬ್ಬರಲ್ಲ. ನೂರು ಜನರು ಇರಲಿ ಅದಕ್ಕೇನಂತೆ? ಏಕೆಂದರೆ, ಇಲ್ಲಿ ಆತನ ಸ್ನೇಹಿತರೆಲ್ಲ ನಾಲ್ಕು ಕಾಲಿನವರು! ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಈತ ಅನೇಕ ಬೆಕ್ಕುಗಳಿಗೆ (Cats) ಮದುವೆಯ ಉಂಗುರ ತೋರಿಸುತ್ತ ತಾನು ಮದುವೆಯಾದ ಸುದ್ದಿಯನ್ನು ಹೇಳುತ್ತಾನೆ, ಅವುಗಳು ಅವನನ್ನು ನೋಡಿ ಪ್ರತಿಕ್ರಿಯಿಸುವ ರೀತಿಯನ್ನು ನೋಡಿಯೇ ಅನುಭವಿಸಬೇಕು.

ಇದನ್ನೂ ಓದಿ : Viral Video: ಜವಾನ್ ಜಮಾನಾ; ರೈಲಿನಲ್ಲಿ ಓಡಾಡಿದ ನಕಲಿ ‘ಆಝಾದ’ನನ್ನು ಮೆಚ್ಚದ ನೆಟ್ಟಿಗರು

ಪ್ರಾಣಿಪ್ರಿಯರು ಪ್ರಾಣಿಗಳೊಂದಿಗೆ ನಡೆಸುವ ಸಂವಹನ ಆಪ್ತವೂ ಮತ್ತು ವಿಭಿನ್ನವೂ ಆಗಿರುತ್ತದೆ. ಅದು ಪರಸ್ಪರ ಮಾತ್ರ ಅರ್ಥವಾಗುವಂತಿರುತ್ತದೆ. ಅವುಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ರೀತಿ ಇರಬಹುದು, ತಿಂಡಿತಿನಿಸು ಕೊಟ್ಟು ಪೋಷಿಸುವುದು ಇರಬಹುದು. ಒಟ್ಟಾರೆಯಾಗಿ ಒಂದು ಬಂಧ ಪರಸ್ಪರರಲ್ಲಿ ರೂಪುಗೊಂಡಿರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನನ್ನ ಮದುವೆಯಾಯಿತು ಗೊತ್ತಾ?

telling my friends I got married [OC] byu/Parking-Program-9602 inaww

ನಿನ್ನೆ ಹಂಚಿಕೊಂಡ ಈ ವಿಡಿಯೋವನ್ನು 11,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಹೃದಯಸ್ಪರ್ಶಿಯಾದ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಮುದ್ದಾದ ವಿಡಿಯೋ, ಅಭಿನಂದನೆಗಳು ಎಂದಿದ್ದಾರೆ ಒಬ್ಬರು. ಉಂಗುವನ್ನು ಅವರೆಲ್ಲ ಪ್ರೀತಿಸುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಬದುಕಿನಲ್ಲಿ ಶಾಶ್ವತವಾಗಿ ಶಾಂತಿ ಸಂತೋಷ ನೆಲೆಸಲಿ ಶುಭಾಶಯಗಳು ಎಂದಿದ್ದಾರೆ ಮತ್ತೊಬ್ಬರು. ಈ ದಿನ ಅಂತರ್ಜಾಲದಲ್ಲಿ ನೋಡಿದ ಅತ್ಯಂತ ಮಧುವರವಾದ ಸಂಗತಿ ಇದು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್​ ಕೂಡ ನಡೆಸುವ ಧ್ರುವಿ ಪಂಚಾಲ್​

ಈ ಬೆಕ್ಕುಗಳು ಇರದಿದ್ದರೆ ಜಗತ್ತಿನಲ್ಲಿ ಅದೆಷ್ಟು ಜನ ಖಿನ್ನತೆಗೆ ಜಾರುತ್ತಿದ್ದರೋ ಎಂದಿದ್ದಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ನನ್ನ ಮನಸ್ಸು ತುಂಬಿಬಂದಿತು. ಒಂದೋ ಎರಡೋ ಸರಿ, ಆದರೆ ನಿಮ್ಮ ಏರಿಯಾನಲ್ಲಿರುವ ಇಷ್ಟೊಂದು ಬೆಕ್ಕುಗಳೊಂದಿಗೆ ನೀವು ಭಾವನಾತ್ಮಕವಾಗಿ ಒಡನಾಡಿಕೊಂಡಿದ್ದು ನಿಜಕ್ಕೂ ಅದ್ಭುತ, ಅಚ್ಚರಿ ಮತ್ತು ಅಷ್ಟೇ ಆಪ್ತ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್