Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ
Railway Crossing: ಕೆಲವರಿಗೆ ಯಾವ ನಿಯಮಗಳೂ ಅನ್ವಯಿಸುವುದಿಲ್ಲ. ಏನು ಶಿಕ್ಷೆ ವಿಧಿಸಿದರೂ ಅವರಿಗೆ ಬಚಾವಾಗುವುದು ಮತ್ತೆ ಮತ್ತೆ ನಿಯಮಗಳನ್ನು ಮುರಿದು ಪೊಲೀಸ್ ಸ್ಟೇಷನ್ಗೆ ಹೋಗಿಬರುವುದು ತೀರಾ ಸಾಮಾನ್ಯ ವಿಷಯವಾಗಿರುತ್ತದೆ. ಅಂಥವರ ಸಾಲಿಗೆ ಈ ಕಾರಿನ ಡ್ರೈವರ್ ಕೂಡ ಸೇರುತ್ತಾನಾ? ನೆಟ್ಟಿಗರು ಬಗೆಬಗೆಯಲ್ಲಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ಧಾರೆ. ನೀವು?
Crossing: ಕೆಲ ಕ್ಷಣಗಳು ತಡವಾಗಿದ್ದರೂ ಈ ಕಾರಿನಲ್ಲಿರುವ ಎಲ್ಲರೂ ಈ ಭೂಮಿಯ ಮೇಲೆಯೇ ಇರುತ್ತಿರಲಿಲ್ಲ. ರೈಲ್ವೇ ಕ್ರಾಸಿಂಗ್ನಲ್ಲಿ ನಿಮಿಷಗಳ ಕಾಲ ಕಾಯದೇ ಅವನು ಹೀಗೆ ನುಸುಳಿದ್ದು ಮತ್ತು ಗೇಟ್ನಿಂದ ಆಚೆ ನುಸುಳಲು ಪ್ರಯತ್ನಿಸಿದ್ದನ್ನು ನೋಡಿದರೆ ಎಂಥವರಿಗೂ ಕೋಪ ನೆತ್ತಿಗೇರುತ್ತದೆ. ಈ ವಿಡಿಯೋ ರೆಡ್ಡಿಟ್ನಲ್ಲಿ (Reddit) 6 ಗಂಟೆಗಳ ಹಿಂದೆಯಷ್ಟೇ ಅಪ್ಲೋಡ್ ಮಾಡಲಾಗಿದ್ದು 750ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ಮನಬಂದಂತೆ ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿ ಹೀಗೆ ನಿಯಮವನ್ನು ಉಲ್ಲಂಘಿಸಿರುವುದು ಖಂಡಿತ ಮೊದಲ ಸಲವಲ್ಲ. ಇವನ ಕಾರಿನ ಮೌಲ್ಯಕ್ಕಿಂತಲೂ ಹೆಚ್ಚು ಮೊತ್ತದ ದಂಡ ಮತ್ತು ಶಿಕ್ಷೆ ಇವನಿಗಾಗಿ ಕಾಯುತ್ತಿರುತ್ತದೆ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ
ಈ ವ್ಯಕ್ತಿಯನ್ನು ಕೇಂದ್ರ ಸರ್ಕಾರ ನ್ಯಾಯಾಂಗ ಬಂಧನದಲ್ಲಿರಿಸುವ ಸಾಧ್ಯತೆ ಇದೆ. ಏಕೆಂದರೆ ಸರ್ಕಾರಿ ಆಸ್ತಿಯನ್ನು ಇವನು ನಾಶಮಾಡಿದ್ದಾನೆ ಎಂದಿದ್ದಾರೆ ಒಬ್ಬರು. ನನ್ನ ಸ್ನೇಹಿತನೊಬ್ಬ ಗೇಟ್ ಮುಚ್ಚುತ್ತಿರುವಾಗ ದಾಟಲು ಪ್ರಯತ್ನಿಸಿದ್ದರಿಂದ ಅವನು ರಾತ್ರಿಯಿಡೀ ಕಸ್ಟಡಿಯಲ್ಲಿ ಉಳಿಯಬೇಕಾಯಿತು ಮತ್ತು ರೂ. 35 ಸಾವಿರ ದಂಡ ಪಾವತಿಸಬೇಕಾಯಿತು. ಅವನನ್ನು ಬಿಡಿಸಿಕೊಂಡು ಬರಲು ಅವನ ತಂದೆ ಆರು ತಿಂಗಳ ಕಾಲ ತಮ್ಮ ಜಮೀನನ್ನು ಒತ್ತೆ ಇಡಬೇಕಾಯಿತು ಎಂದಿದ್ದಾರೆ ಇನ್ನೊಬ್ಬರು.
ಹೀಗೆ ಎಂದೂ ಕ್ರಾಸ್ ಮಾಡಬಾರದು
ಅನೇಕರು ಈ ದೃಶ್ಯವನ್ನು ತಮಾಷೆ ಮಾಡಿದ್ದಾರೆ. ಅವನ ತಂದೆಯಿಂದ 13 ಮಿಸ್ಡ್ ಕಾಲ್ಗಳಿದ್ದವು ಎಂದಿದ್ದಾರೆ ಒಬ್ಬರು. ಅವನ ತಮ್ಮ ಅವನ ಲ್ಯಾಪ್ಟಾಪ್ ಓಪನ್ ಮಾಡಿದ್ದಾನೆ ಎಂದ ಅವನ ತಾಯಿ ಫೋನ್ ಮಾಡಿ ಹೇಳಿರಬೇಕು, ಅದಕ್ಕೇ ಅವನು ಅವಸರದಲ್ಲಿ ಮನೆಗೆ ಹೊರಟಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ಈಗ ಇವನು ಈ ರೀಲ್ ಅನ್ನು ಹ್ಯಾಷ್ಟ್ಯಾಗ್ ಇಲ್ಲದೆಯೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾನೆ ಎಂದಿದ್ಧಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?
ಇವರು ದರೋಡೆಕೋರರು ಇರಬೇಕು, ಕಾರನ್ನು ಕದ್ದು ವೇಗದಲ್ಲಿ ಓಡಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ ಎಂದಿದ್ಧಾರೆ ಒಬ್ಬರು. ಇವನು ಪೊಲೀಸರಿಗೆ ಸಿಕ್ಕಿಬಿದ್ದನೆ? ಇವನ ಲೈಸನ್ಸ್ ರದ್ದಾಯಿತೆ? ಎಂದಿದ್ದಾರೆ ಇನ್ನೊಬ್ಬರು. ಅದಕ್ಕೆ ಪ್ರತಿಯಾಗಿ ಒಬ್ಬರು, ಭಾರತದಲ್ಲಿ ಇದೆಲ್ಲವೂ ನಿಯಮಬದ್ಧವಾಗಿ ಆಗುವುದೆ? ಎಂದಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ