Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion : ಈ ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತದೆಯೇ?

Optical Illusion: ಇಲ್ಲಿ ನೀಲಾಕಾಶದ ಹಿನ್ನೆಲೆಯಿದೆ. ಇದರ ಮೇಲೆ ಒಂದು ವೃತ್ತ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಚಲಿಸುತ್ತಿದೆ. ಅದು ಚಲಿಸುವಾಗ ಬಣ್ಣಗಳನ್ನು ಬದಲಿಸುತ್ತದೆ ಎನ್ನಿಸುತ್ತದೆ. ಆದರೆ ಅದು ವಾಸ್ತವ ಅಲ್ಲ. ವಾರಾಂತ್ಯದ ಮೂಡ್​ನಲ್ಲಿರುವ ನಿಮಗೆ ಕೆಲಸ ಮಾಡಲು ಬೇಸರವಾಗುತ್ತಿರಬಹುದು. ಸ್ವಲ್ಪ ಉತ್ಸಾಹ ತುಂಬಲೆಂದೇ ಈ ಭ್ರಮಾತ್ಮಕ ವಿಡಿಯೋ ನಿಮಗಾಗಿ ಪ್ರಸ್ತುತಪಡಿಸಲಾಗಿದೆ.

Viral Optical Illusion : ಈ ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತದೆಯೇ?
ಈ ವೃತ್ತವು ಚಲಿಸುವಾಗ ಬಣ್ಣ ಬದಲಾಯಿಸುತ್ತಿದೆಯೇ?
Follow us
ಶ್ರೀದೇವಿ ಕಳಸದ
|

Updated on:Sep 22, 2023 | 11:05 AM

Optical Illusion: ಭ್ರಮಾತ್ಮಕ ಚಿತ್ರಗಳು ನಿಮ್ಮ ಮೆದುಳಿನೊಂದಿಗೆ ಆಟವಾಡುತ್ತಾ ವಾಸ್ತವದ ಗ್ರಹಿಕೆಗೆ ಸವಾಲನ್ನು ಒಡ್ಡುತ್ತವೆ. ವಾಸ್ತವ ಮತ್ತು ಭ್ರಮೆಯ ನಡುವಿನ ತೆಳುಗೆರೆಯನ್ನು ಮಸುಕುಗೊಳಿಸುತ್ತವೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಇಂಥದೊಂದು ಸವಾಲು ಇದೆ. ರೆಡ್ಡಿಟ್​​ನಲ್ಲಿರುವ ಈ ವಿಡಿಯೋ ಅನ್ನು ಅನೇಕರು ನೋಡಿ ಸೂಕ್ತ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಈವತ್ತೊಂದು ದಿನ ಕಳೆದರೆ ಸಾಕು ವಾರಾಂತ್ಯದ ವಿಶ್ರಾಂತಿ, ಮೋಜು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಅದಕ್ಕಿಂತ ಮೊದಲು ಕೆಲಸ ಬಿಡುವಿನ ವೇಳೆ ಈ ಭ್ರಮಾತ್ಮಕ ಚಿತ್ರದಲ್ಲಿರುವ ಸವಾಲನ್ನು ಖಂಡಿತ ಕಂಡುಹಿಡಿಯುತ್ತೀರಿ ಎನ್ನುವ ಭರವಸೆ ನಮ್ಮದು.

ಇದನ್ನೂ ಓದಿ : Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು

ನೀಲಿ ಬಣ್ಣದ ಬೇರೆಬೇರೆ ಛಾಯೆಗಳನ್ನು ಹೊಂದಿದ ಹಿನ್ನೆಲೆಯಲ್ಲಿ ಈ ವೃತ್ತವು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಚಲಿಸುತ್ತದೆ. ಈ ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತಿದೆಯೇನೋ ಎಂಬಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅದು ಸತ್ಯವಲ್ಲ. ಹಾಗಿದ್ದರೆ ಸತ್ಯವೇನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿದೆ ಆ ಬಣ್ಣ ಬದಲಿಸುವ ವೃತ್ತದ ವಿಡಿಯೋ

We have created the below colour saturation optical illusion to show how this tricks our eyes. Does the circle change colour for you? byu/Lenstore inlenstore

ಇಂಥ ಭ್ರಮಾತ್ಮಕ ಚಿತ್ರಗಳು ನಮ್ಮ ಕಣ್ಣುಗಳನ್ನು ನಾವೇ ನಂಬದಂತೆ ಮಾಡುತ್ತವೆ. ಅಂಥ ತಂತ್ರಗಾರಿಕೆ ಇವುಗಳ ಸೃಷ್ಟಿಯಲ್ಲಿ ಅಡಗಿರುತ್ತದೆ. ಹೇಳಿ, ವೃತ್ತವು ಚಲಿಸುವಾಗ ಬಣ್ಣವನ್ನು ಬದಲಾಯಿಸುತ್ತಿತ್ತೆ? ಅನೇಕರಿಗೆ ಅದು ಹೌದು ಎನ್ನಿಸಬಹುದು. ವಾಸ್ತವದಲ್ಲಿ ವೃತ್ತದ ಬಣ್ಣವು ಸ್ಥಿರವಾಗಿದೆ. ಆದರೆ ಈ ವಿಡಿಯೋ ನೋಡುತ್ತಿದ್ದಾಗ ಖಂಡಿತ ಭ್ರಮೆ ಉಂಟಾಗಿ ಗೊಂದಲವುಂಟಾಗುತ್ತದೆ. ಏಕೆಂದರೆ ಒಂದು ವಸ್ತುವು ಬೇರೆ ರೀತಿಯ ಪರಿಸರದಲ್ಲಿದ್ದಾಗ  ನಮ್ಮ ಮೆದುಳು ಗ್ರಹಿಸುವ ರೀತಿ ಬೇರೆಯಾಗಿರುತ್ತದೆ.

ಇದನ್ನೂ ಓದಿ : Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ

ಈ ವಿಡಿಯೋ ನೋಡಿದಾಗ ನಿಮಗೆ ಏನೆನ್ನಿಸಿತು? ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತಿತ್ತು ಎನ್ನಿಸಿತೆ ಅಥವಾ ಸ್ಥಿರವಾಗಿತ್ತೆ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:03 am, Fri, 22 September 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ