Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು

Girls Fight: ಈ ವಿಡಿಯೋ ದೆಹಲಿಯ ಮೂಲದ್ದು ಎಂದು ಹೇಳಲಾಗುತ್ತಿದೆ. ಅನೇಕರು ಈ ವಿಡಿಯೋಗೆ ತಮಾಷೆಯಿಂದ ಪ್ರತಿಕ್ರಿಯಿಸಿದ್ಧಾರೆ. ಆದರೆ ಈ ಶಾಲಾಬಾಲಕಿಯರನ್ನು ಈ ಮಟ್ಟಕ್ಕೆ ಪ್ರಚೋದಿಸಿದ ವಿಷಯವೇನು? ಬೀದಿಯಲ್ಲಿ ರಣರಂಪಮಾಡುವ ಮಟ್ಟಿಗೆ ಅವರು ಕೋಪಗೊಂಡಿದ್ದು ಯಾಕೆ? ನಿಜಕ್ಕೂ ಈ ವಿಡಿಯೋ ಆತಂಕಕಾರಿಯಾಗಿದೆ. ಮಕ್ಕಳ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.

Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು
ದೆಹಲಿಯ ಶಾಲಾಬಾಲಕಿಯರ ಗುಂಪುಗಳ ನಡುವೆ ಜಗಳ
Follow us
ಶ್ರೀದೇವಿ ಕಳಸದ
|

Updated on:Sep 21, 2023 | 5:02 PM

School Girls: ಇದು ತುಂಬಾ ಮುದ್ದಾದ ಹೊಡೆದಾಟ. ಸ್ವಲ್ಪ ಬ್ರೇಕ್​ ತಗೊಂಡು ಹೊಡೆದಾಡಿ. ಮತ್ತೆ ಬ್ರೇಕ್​ ತಗೊಳ್ಳಿ ಮತ್ತೆ ಹೊಡೆದಾಡಿ. ಹೀಗೆ ಹೊಡೆದಾಡುತ್ತ ಒಂದು ದಿನ ಎಲ್ಲವನ್ನೂ ಸತ್ಯಾನಾಶ ಆಗುವ ಹಾಗೆ ಮಾಡಿ. ಹೌದು, ಇದೇ ಬೇಕಾಗಿದ್ದದ್ದು. ಬೆಕ್ಕುಗಳು ರಸ್ತೆಯ ಮೇಲೆ ಜಗಳಾಡುತ್ತಿವೆ. ನೀವು ಇನ್ನೂ ಚೆನ್ನಾಗಿ ಜಗಳಾಡಬೇಕು. ನನ್ನ ಮೊಹಲ್ಲಾದ ಮಕ್ಕಳು ಇದಕ್ಕಿಂತ ಚೆನ್ನಾಗಿ ಜಗಳಾಡುತ್ತಾರೆ. ಕ್ಯಾಮೆರಾಮೆನ್​ಗೆ ಗೊಂದಲ ಉಂಟಾಗಿದೆ, ಯಾವ ಗುಂಪು ಚೆನ್ನಾಗಿ ಹೊಡೆದಾಡುತ್ತಿದೆ ಮತ್ತು ಹೆಚ್ಚು ಮನೋರಂಜನೆ (Entertainment) ಕೊಡುತ್ತಿದೆ ಎನ್ನುವ ಬಗ್ಗೆ. ಸ್ನೇಹಿತರೇ ಇದು ಕೇವಲ ಮನರಂಜನೆಗಾಗಿ ಮಾತ್ರ… ಹೀಗೆ ನೂರಾರು ಜನರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪಾಪ್​ಕಾರ್ನ್​ ಮಿಸ್ಸಿಂಗ್, ಅಷ್ಟಕ್ಕೂ ಈ ಗುಂಪುಗಳ ನಡುವೆ ಜಗಳ ಶುರುವಾಗಿದ್ದಾದರೂ ಹೇಗೆ? ಮತ್ತು ಏಕೆ? ಇದು ಆಧುನಿಕ ಭಾರತವೋ? ಉತ್ತರ ಭಾರತದಲ್ಲಿ ಯಾಕೆ ಇಂಥ ಅಸಭ್ಯತನ ಪುನರಾವರ್ತನೆಯಾಗುತ್ತದೆ? ಆಹಾ ಇದು ನನ್ನ ದೇಶ, ನನ್ನ ದೇಶ ಮುಂದುವರಿಯುತ್ತಿದೆ! ಇವರು ದೆಹಲಿಯ ರಾಜಕುಮಾರಿಯರು. ದೆಹಲಿಯಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳು ಅಚ್ಚರಿಯನ್ನು ಮೂಡಿಸಲಾರವು. ಇವರಿಗೆ ಹೀಗೆಲ್ಲ ಜಗಳಾಡಬೇಕೆಂದು ಕಲಿಸುವವರು ಯಾರು? ಹೀಗೆ ಪ್ರತಿಕ್ರಿಯೆಗಳ ಸುರಿಮಳೆಯೇ ಸುರಿಯುತ್ತಿದೆ.

ಶಾಲಾಬಾಲಕಿಯರ ಬೀದಿಜಗಳ

ಸೆ. 20 ರಂದು ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಶಾಲಾಬಾಲಕಿಯರ ಎರಡು ಗುಂಪುಗಳು ಬೀದಿಜಗಳಕ್ಕೆ ಇಳಿದಿವೆ. ಕೆಲವರು ಈ ವಿಡಿಯೋ ನೋಡಿ ಗಾಬರಿಗೆ ಒಳಗಾಗಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ನನ್ನ ಮಗಳು ಬಹಳ ಒಳ್ಳೆಯ ಅಂಕ ಗಳಿಸುತ್ತಾಳೆ ಎಂದು ಹೇಳುವ ಪೋಷಕರು ಎಲ್ಲಿದ್ದೀರಿ ಎಂದು ಕೇಳಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್​ ಕೂಡ ನಡೆಸುವ ಧ್ರುವಿ ಪಂಚಾಲ್​ 

ನಿಜಕ್ಕೂ ಈ ವಿಡಿಯೋ ನೋಡಿದರೆ ಆತಂಕವಾಗುತ್ತದೆ. ಮಕ್ಕಳು ಎಲ್ಲಿ ಯಾವ ಕಾರಣಕ್ಕಾಗಿ ಒತ್ತಡಕ್ಕೆ ಒಳಗಾಗುತ್ತಿವೆ? ಎಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿವೆ? ಯಾವ ವಿಷಯಗಳು ಇವರನ್ನು ಹೀಗೆ ಪ್ರಚೋದಿಸುತ್ತಿವೆ? ನಿಜಕ್ಕೂ ಈ ವಿಡಿಯೋ ನೋಡಿದರೆ ಕಳವಳ ಉಂಟಾಗುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:01 pm, Thu, 21 September 23

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ