Viral Video: ಬೋಲ್ಪುರ: ರೈಲ್ವೇ ಟಿಕೆಟ್ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸಿದ ಮಿಸ್ಟರ್ ಮಾರುತಿ
Bangla: ಎಷ್ಟು ದಿನ ಅಂತ ಮರದಿಂದ ಮರಕ್ಕೆ ಜಿಗಿಯುವುದು, ನೇತಾಡುವುದು, ಸಿಕ್ಕ ಕಾಯಿಗಳನ್ನು ಹರಿದು ತಿನ್ನುವುದು. ದೇವಸ್ಥಾನಕ್ಕೆ ಬಂದ ಭಕ್ತರ ಚೀಲದಿಂದ ಹಣ್ಣುಕಾಯಿ ಕದಿಯುವುದು. ಮನುಷ್ಯರು ಆಟವಾಡಿಸಿದಂತೆ ಆಡುವುದು. ಮಕ್ಕಳಂತೆ ಮುದ್ದು ಮಾಡಿಸಿಕೊಂಡು ಇರುವುದು. ನಮಗೂ ಕಚೇರಿಗೆ ಹೋಗಿ ಕೆಲಸ ಮಾಡಬೇಕು ಎನ್ನಿಸುತ್ತದೆ ಎನ್ನುತ್ತಿದ್ದಾರೆ ಮಿಸ್ಟರ್ ಮಾರುತಿ.
Bolpur: ಹನುಮಂತನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ಕೋತಿಗೆ (Monkey) ಆಟವಾಡಿಸಿ ಹೊಟ್ಟೆ ಹೊರೆಯುತ್ತಾರೆ. ಕೋತಿಯನ್ನು ಸಾಕಿ ಮನೆಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಬೋಲ್ಪುರ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರಿನಲ್ಲಿ ಈ ಮಾರುತಿಗೆ ಉದ್ಯೋಗ ಕೊಟ್ಟವರು ಯಾರು? ಕೌಂಟರಿನ ಹೊರಗೆ ನೂರಾರು ಜನರು ಸರದಿಯಲ್ಲಿ ನಿಂತಿದ್ದಾರೆ. ಇನ್ನು ಯಾವಾಗ ಟಿಕೆಟ್ ಸಿಗುತ್ತದೆಯೋ ಎಂದು ಚಡಪಡಿಸುತ್ತಿದ್ದಾರೆ. ಆದರೆ, ಕೌಂಟರಿನೊಳಗಿನ ಮಾರುತಿ ಮಾತ್ರ ಯಾವುದೋ ಪುಸ್ತಕವನ್ನು ನೋಡುತ್ತ, ಕೀಬೋರ್ಡ್ನಲ್ಲಿ ಟೈಪ್ ಮಾಡುತ್ತ ಕೆಲಸದಲ್ಲಿ ಮುಳುಗಿದ್ದಾನೆ. ರೈಲ್ವೇ ಇಲಾಖೆಯು ಇಂಥ ನಿಷ್ಠಾವಂತ ಉದ್ಯೋಗಿಯನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲವೇನೋ.
ಇದನ್ನೂ ಓದಿ : Viral Video : ಜವಾನ್ ಜಮಾನಾ; ಬ್ರೂಕ್ಲಿನ್ ಸೇತುವೆಯ ಮೇಲೆ ಚಲೇಯಾ ಡ್ಯಾನ್ಸ್; ಕೃತಜ್ಞತೆ ಸಲ್ಲಿಸಿದ ಶಾರುಖ್
ಮಂಗಗಳ ಈ ಆಟಗಳನ್ನು ನೋಡದವರು ಯಾರಿದ್ದಾರೆ? ಆದರೆ ಮನುಷ್ಯರಂತೆ ಕೆಲಸದಲ್ಲಿ ತೊಡಗಿಕೊಂಡರೆ ಗಾಬರಿ ಉಂಟಾಗುವುದಲ್ಲವೆ? ಅದರಲ್ಲಿಯೂ ಕಚೇರಿಯಲ್ಲಿ ಕುಳಿತು ಹೀಗೆ ಗಂಭೀರವಾಗಿ ಕುಳಿತು ಕಂಪ್ಯೂಟರ್ ಬಳಸತೊಡಗಿದರೆ? ಆತಂಕ ಸಹಜವಾಗಿಯೇ ಉಂಟಾಗುತ್ತದೆ.
বাঁদর-হনুমানদের অদ্ভুত কাণ্ডকারখানার কথা আমরা প্রায়ই দেখি বা শুনি। এখনও গ্রামে গ্রামে বাঁদরের খেলা দেখিয়ে উপার্জনও করেন অনেকে। কিন্তু, তাই বলে একেবারে রেলকর্মীর বেশে রেলের অফিসে দেখতে পাওয়া যাবে হনুমানকে!
সব খবর: https://t.co/Z9cGg0kjDs#Bolpur | #IndianRailways | #Viral pic.twitter.com/LaUCxQzMWQ
— TV9 Bangla (@Tv9_Bangla) September 20, 2023
ಟಿಕೆಟ್ ಕೌಂಟರಿನ ಹೊರಗೆ ನಿಂತವರು ಟಿಕೆಟ್ಗಾಗಿಯಷ್ಟೇ ನಿಲ್ಲದೇ, ಕೌಂಟರಿನೊಳಗಿನ ಕೌತುಕವನ್ನು ನೋಡಲು ಸಾಲುಗಟ್ಟಿದ್ದರು. ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಕೆಲ ಮೂಲಗಳ ಪ್ರಕಾರ ಮಿಸ್ಟರ್ ಮಾರುತಿಯವರು ಅರ್ಧಗಂಟೆಗೂ ಹೆಚ್ಚು ಸಮಯ ಹೀಗೆ ಕಚೇರಿ ಕೆಲಸದಲ್ಲಿ ಮುಳುಗಿದ್ದರು. ಕೊನೆಗೆ ಅವರಿಗೆ ಪ್ರಿಯವಾದ ಬಿಸ್ಕೆಟ್, ಬಾಳೆಹಣ್ಣು ತೋರಿಸಿ ಅವರನ್ನು ಹೊರಕರೆತರಲಾಯಿತು.
ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?
ಅಂತೂ ಗಿಡದಿಂದ ಗಿಡಕ್ಕೆ ನೆಗೆಯುವುದನ್ನು, ಗಿಡದಲ್ಲಿರುವ ಕಾಯಿಗಳನ್ನು ಕೀಳುವುದನ್ನು ಬಿಟ್ಟು ನಾಗರಿಕನಾಗಲು ಈ ಮಾರುತಿ ತಯಾರಿ ನಡೆಸಿರುವ ಹಾಗಿದೆ. ಈ ಘಟನೆಯ ಕುರಿತು ಟಿವಿ9 ಬಾಂಗ್ಲಾ ರೈಲ್ವೇ ಅಧಿಕಾರಿಗಳಿಗೆ ಸಂಪರ್ಕಿಸಿದಾಗ, ಅವರು ನಕ್ಕು ಸುಮ್ಮನಾದರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ