Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮರಳಲ್ಲಿ ಗೆರೆ ಎಳೆಯುತ್ತ ಕುಣಿಯುವ ಆಟ ಗೊತ್ತಾ ನಿಮಗೆ? ಬನ್ನಿ ಇವರು ಕಲಿಸ್ತಾರೆ

Dog: ಈ ವಿಡಿಯೋ ನೋಡಿದ ತಕ್ಷಣ ಈ ವಾರಾಂತ್ಯದಲ್ಲಿ ಹತ್ತಿರದ ಬೀಚಿಗೆ ಹೋಗಿ ಈ ನಾಯಿಯಂತೆಯೇ ಮನಸಾರೆ ಆಟವಾಡಬೇಕೆನ್ನಿಸುವುದು ಗ್ಯಾರಂಟೀ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಮನಸೋತಿದ್ದಾರೆ. ಹೀಗೆ ಉಲ್ಲಾಸಮಯವಾಗಿ ಸಮಯ ಕಳೆಯಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ನೀವೇನಂತೀರಿ? ನಿಮ್ಮ ನಾಯಿಯನ್ನೂ ಕರೆದುಕೊಂಡು ಹೋಗುತ್ತೀರೇ?

Viral Video: ಮರಳಲ್ಲಿ ಗೆರೆ ಎಳೆಯುತ್ತ ಕುಣಿಯುವ ಆಟ ಗೊತ್ತಾ ನಿಮಗೆ? ಬನ್ನಿ ಇವರು ಕಲಿಸ್ತಾರೆ
ಸಮುದ್ರ ತೀರದ ಮರಳಿನಲ್ಲಿ ಗೆರೆ ಎಳೆಯುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on: Sep 22, 2023 | 12:02 PM

Dog Lover: ಮನುಷ್ಯರಾದ ನಮಗೂ ಹೇಗೆ ನಮ್ಮ ಏಕಾಂತ ಬೇಕೋ ಹಾಗೆ ಪ್ರಾಣಿಗಳಿಗೂ. ಪ್ರಾಣಿಗಳು ತಮ್ಮ ಲೋಕದಲ್ಲಿರುವಾಗ ಹೇಗಿರುತ್ತವೆ ಏನು ಮಾಡುತ್ತಿರುತ್ತವೆ ಎನ್ನುವುದು ಬಹುಪಾಲು ಕಣ್ಣಿಗೆ ಬಿದ್ದಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ವಿಭಿನ್ನವಾಗಿದೆ. ಈ ನಾಯಿ ಸಮುದ್ರದಡದ ಮರಳಿನಲ್ಲಿ ಮಕ್ಕಳಂತೆ ಗೆರೆ ಕೊರೆದು ಆಟದಲ್ಲಿ ಮುಳುಗಿರುವ ದೃಶ್ಯ ನೆಟ್ಟಿಗರನ್ನು ವಿಶೇಷವಾಗಿ ಸೆಳೆದಿದೆ. ಇದು ಡ್ಯಾನ್ಸ್​ (Dance) ಮಾಡುತ್ತಿದೆಯೇ? ಎಂದು ಕೇಳುತ್ತಿದ್ದಾರೆ ಅನೇಕರು. ಎರಡು ದಿನಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋದಡಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ಮನಸ್ಸು ಉಲ್ಲಸಿತಗೊಂಡಿತು ಎಂದಿದ್ದಾರೆ.

ಇದನ್ನೂ ಓದಿ : Viral Optical Illusion : ಈ ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತದೆಯೇ?

ಈತನಕ ಈ ವಿಡಿಯೋ ಅನ್ನು 3,100 ಜನರು ಲೈಕ್​ ಮಾಡಿದ್ದಾರೆ. ಸುಮಾರು 30 ಜನರು ಪ್ರತಿಕ್ರಿಯಿಸಿದ್ದಾರೆ. ಇಂಥ ಸಂತೋಷವನ್ನು ನಾನೂ ಪಡೆಯಬೇಕು ಎಂದು ಅನ್ನಿಸತೊಡಗಿದೆ ಈ ವಿಡಿಯೋ ನೋಡಿದ ಮೇಲೆ ಎಂದಿದ್ದಾರೆ ಒಬ್ಬರು. ಆಹಾ ಇಂಥ ದಿವ್ಯವಾದ ನೋಟಕ್ಕಾಗಿ ನಾನು ಕಾಯುತ್ತಿದ್ದೆ ಎಂದಿದ್ದಾರೆ ಇನ್ನೊಬ್ಬರು. ದೇವರೇ, ಇದು ಎಂಥ ಮುದ್ದಾದ ನಾಯಿ ಎಂದಿದ್ದಾರೆ ಮತ್ತೊಬ್ಬರು. ಇಂಥ ಆನಂದವನ್ನು ಅನುಭವಿಸಲು ನನಗೂ ಅವಕಾಶವೀಯು ದೇವರೇ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಡಲತಡಿಯಲ್ಲಿ ನಾಯಿಯ ಈ ಆಟ

Doggo dancing and drawing a line in the sand byu/QuaintMushrooms inAnimalsBeingDerps

ಪ್ರತೀ ಜೀವಿಗೂ ಇಂಥ ಏಕಾಂತ, ಇಂಥ ಖುಷಿ ಬೇಕೇಬೇಕು. ಅಂದಾಗಲೇ ಜೀವನದಲ್ಲಿ ಉತ್ಸಾಹವಿರುತ್ತದೆ ಎಂದಿದ್ದಾರೆ ಒಬ್ಬರು. ನಾನೂ ನಿನ್ನೊಂದಿಗೆ ಈಗ ಈ ಬೀಚಿನಲ್ಲಿರಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು. ನಾನು ಆಗಾಗ ನನ್ನ ನಾಯಿಯೊಂದಿಗೆ ಬೀಚಿಗೆ ಹೋಗುತ್ತೇನೆ. ಅದೂ ಕೂಡ ಹೀಗೆಯೇ ತನ್ನ ಪಾಡಿಗೆ ತಾನು ಆಟವಾಡಿ ಖುಷಿಗೊಳ್ಳುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ: Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ

ಈ ನಾಯಿ ಬೆಕ್ಕುಗಳು ತಮ್ಮಷ್ಟಕ್ಕೆ ತಾವು ಆಟವಾಡುವುದನ್ನು ನೋಡುವುದರಿಂದ ನಮ್ಮಲ್ಲಿ  ಒಂದು ರೀತಿಯಲ್ಲಿ ಹೊಸ ಉತ್ಸಾಹ ಚಿಮ್ಮುತ್ತದೆ ಎಂದಿದ್ದಾರೆ ಒಬ್ಬರು. ಅವುಗಳ ಆಟವನ್ನು ನೀವು ನೋಡಲು ಹೋದರೆ ಅವುಗಳಿಗೆ ಇನ್ನೂ ಹುರುಪು ಬಂದು ನಿಮ್ಮನ್ನು ಆಟಕ್ಕೆ ಎಳೆಯುತ್ತವೆ, ಮುದ್ದು ಮಾಡುತ್ತವೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ