Viral: ನಾಥೂರಾಮ ಗೋಡ್ಸೆ;’ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’

Nathuram Godse : 'ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?', 'ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ' ಎಂಬ ಸಮಜಾಯಿಷಿಗಳೂ ಈ ಫೋಟೋದಡಿ ಇವೆ. 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ತುತ್ತೂರಿಯನ್ನೂ ಕೆಲವರು ಊದಿದ್ದಾರೆ. ಈ ಫೋಟೋ ನೋಡಿದ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿದೆ?

Viral: ನಾಥೂರಾಮ ಗೋಡ್ಸೆ;'ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ'
ಹೈದರಾಬಾದಿನ ಆಟೋವೊಂದರ ಮೇಲೆ ನಾಥೂರಾಮ ಗೋಡ್ಸೆ ಪೋಸ್ಟರ್
Follow us
ಶ್ರೀದೇವಿ ಕಳಸದ
|

Updated on: Oct 06, 2023 | 5:12 PM

Hyderabad : ಈ ಆಟೋರಿಕ್ಷಾ ನೋಡಿದರೆ ನಿಮಗೇನೆನ್ನಿಸುತ್ತದೆ? ಇತರರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಂತೆ ಈ ಆಟೋ ಡ್ರೈವರ್ (Auto Driver) ಕೂಡ ಇಲ್ಲಿ ನಿಂತಿದ್ದಾನೆ. ಸಿಗ್ನಲ್​ನ ಹಸಿರು ದೀಪಕ್ಕಾಗಿ ಕಾಯುತ್ತಿದ್ದಾನೆ. ಇದರಲ್ಲೇನು ವಿಶೇಷ ಎನ್ನಿಸುತ್ತದಲ್ಲವೇ? ರೆಡ್ಡಿಟ್‌ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿರುವವರೊಬ್ಬರು ಜೊತೆಗೆ, ‘ಇದನ್ನು ನಾನಿಂದು ಹೈದರಾಬಾದ್‌ನಲ್ಲಿ ನೋಡಿ ಆಘಾತಗೊಂಡೆ. ಒಬ್ಬ ಕೊಲೆಗಡುಕನ ವೈಭವೀಕರಣ ಇದು’ ಎಂಬ ಒಕ್ಕಣೆ ಹಾಕಿದ್ದಾರೆ. ಆಟೋವನ್ನು ಗಮನವಿಟ್ಟು, ಬೇಕಿದ್ದಲ್ಲಿ ಝೂಮ್ ಮಾಡಿ ನೋಡಿದಾಗ ವಿಷಯ ಏನೆಂದು ತಿಳಿಯುತ್ತದೆ. ಆಟೋದ ಮೇಲೆ ಇರುವ ಫೋಟೋ ನಾಥೂರಾಮ್ ಗೋಡ್ಸೆಯದು (Nathuram Ghodse).

ಇದನ್ನೂ ಓದಿ: Viral: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

‘ಇದೇನೂ ಅಲ್ಲ, ‘ಹಿಟ್ಲರ್ ಬಟ್ಟೆ ಅಂಗಡಿ’ ಇರುವುದು ಗೊತ್ತಾ?’, ”ನಾನು ಪಂಜಾಬ್‌ನ ವಾಸಿ. ಇಲ್ಲಿ ಕಾರು, ಬಸ್ಸುಗಳ ಮೇಲೆ, ಕೆಲವು ಕಚೇರಿಗಳಲ್ಲೂ ಭಿಂದ್ರನ್‌ವಾಲೇಯ ಫೋಟೋಗಳಿವೆ.”, ‘ಉಗ್ರವಾಗಿಗಳನ್ನ, ಭಯೋತ್ಪಾದಕರನ್ನ ವೈಭವೀಕರಿಸುವ ಸಂಸ್ಕೃತಿಯೇ ನಮ್ಮಲ್ಲಿದೆ’ ಅಂತೆಲ್ಲ ಷರಾ ಬರೆದಿದ್ದಾರೆ ಕೆಲವರು. ಈ ಪೋಸ್ಟ್‌ಗೆ ಅನೇಕ ಪರ ವಿರೋಧ ಹೇಳಿಕೆಗಳು ಬಂದು ವರ್ತಮಾನದ ಧ್ರುವೀಕರಣಕ್ಕೆ ಇದೊಂದು ನಿದರ್ಶನವಾಗಿದೆ. ‘ನಾನು ಎಷ್ಟೋ ಕಡೆ ಸಲ್ಮಾನ್ ಖಾನ್ ಫೋಟೊ ಹಾಕಿರುವುದನ್ನು ನೊಡುತ್ತೇನೆ. ಅವನ ಸಿನೆಮಾಗಳನ್ನು ಹುಚ್ಚೆದ್ದು ನೊಡುತ್ತಾರೆ. ಅವನು ಕೊಲೆಗಡುಕನಲ್ಲವೇ?’ ಎಂದೊಬ್ಬರು ವಿಚಿತ್ರ ಪ್ರಶ್ನೆ ಹಾಕಿದ್ದಾರೆ. ಮಂದಿಗೆ ನಿಜಕ್ಕೂ ಮರುಳೋ, ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೋ ಎನ್ನಿಸಬೇಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೈದರಾಬಾದಿನ ಆಟೋವೊಂದರ ಮೇಲೆ ಗೋಡ್ಸೆ ಪೋಸ್ಟರ್​

&

Saw this today in Hyderabad and was shocked and repulsed byu/diva-fairytale-boss inindia

‘ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?’, ‘ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ’ ಎಂಬ ಸಮಜಾಯಿಷಿಗಳೂ ಇವೆ. ತಲೆಯುಳ್ಳ ಶಾಂತಮನಸಿರಲ್ಲಿ ಕೆಲವರು, ‘ಸೈದ್ಧಾಂತಿಕ ವಿರೋಧ ಬೇರೆ ಅದಕ್ಕಾಗಿ ಹತ್ಯೆ ಮಾಡುವುದು ಬೇರೆ. ದ್ವೇಷ ಎನ್ನುವುದು ಒಂದು ಸಿದ್ಧಾಂತವಲ್ಲ’ ಎಂದು ಚರ್ಚೆಯನ್ನು ದಾರಿಗೆ ತರಲು ಯತ್ನಿಸುವುದನ್ನು ನೋಡಬಹುದು. ಆದರೆ ಒಟ್ಟಾರೆ ಅಲ್ಲಿ ಸೂಕ್ಷ್ಮತೆ ಎನ್ನುವುದು ಕಳೆದುಹೋಗಿ ವಿತಂಡವಾದಗಳೇ ಏರ್ಪಟ್ಟಿವೆ.

ಇದನ್ನು ನೋಡಿ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ