Viral: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

Father Daughter Love: ಹೀಗೆಂದು ಅಪಾರ್ಟ್​ಮೆಂಟ್​ನಲ್ಲಿರುವ ತನ್ನ ಮನೆಯ ಬಾಗಿಲಿಗೆ ಸೇಲ್​ ನೋಟ್ ಅಂಟಿಸಿದ್ದಾಳೆ 8 ವರ್ಷದ ಮಗಳು. ಯಾವುದೋ ಒಂದು ಸಣ್ಣ ವಿಷಯಕ್ಕೆ ಈಕೆ ಭಯಂಕರ ಕೋಪಗೊಂಡಿದ್ದಾಳೆ. ಇದು ತಮಾಷೆಗಾಗಿ ಎಂದು ಅಪ್ಪ ಸಮಜಾಯಿಷಿನ್ನೂ ಕೊಟ್ಟಿದ್ದಾನೆ. ಅಪ್ಪಮಗಳ ಮಧ್ಯೆ ರಾಜಿ ಮಾಡಲು ನೆಟ್ಟಿಗರು ಪರಿಪರಿಯಲ್ಲಿ ಪ್ರಯತ್ನಿಸಿದ್ದಾರೆ. ಓದಿ ಒಮ್ಮೆ ನೀವೂ.

Viral: '2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ' 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್
ಅಪಾರ್ಟ್​ಮೆಂಟ್​ ಬಾಗಿಲಿಗೆ ಸೇಲ್ ನೋಟ್ ಹಾಕಿದ ಎಂಟರ ಬಾಲೆ.
Follow us
ಶ್ರೀದೇವಿ ಕಳಸದ
|

Updated on:Oct 06, 2023 | 4:45 PM

Father and Daughter: ಈ ವಿಚಿತ್ರ ಪೋಸ್ಟ್​ ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. 8 ವರ್ಷದ ಬಾಲಕಿ ಹೀಗೆ ತನ್ನ ಅಪ್ಪನಿಗೆ ಹೇಳಲು ಸಾಧ್ಯವೆ? ಅಷ್ಟಕ್ಕೂ ಅವಳಿಗೆ ಅಪ್ಪನನ್ನು ಮಾರುವಂಥ ಐಡಿಯಾ ಬಂದಿದ್ದಾದರೂ ಹೇಗೆ? ಮತ್ತೆ ಅಪ್ಪನ ಮೇಲೆ ಈ ಪರಿ ಕೋಪ ಬರಲು ಕಾರಣವೇನು? ಅಂತೆಲ್ಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅನೇಕರು ಈ ಪೋಸ್ಟ್ ಅನ್ನು ವಿನೋದದಿಂದ ನೋಡಿದ್ದಾರೆ. ನಿಮಗೆ ಅವಳು ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟಿದ್ಧಾಳೆ, ಅದಕ್ಕೇ ಅವಳಿಗೆ ನಿಮ್ಮ ಮೇಲೆ ಕೋಪ ಬಂದಿದೆ ಎಂದು ಅನೇಕರು ತಂದೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಹಾಗಿದ್ದರೆ ವಿಷಯವೇನು?

ಇದನ್ನೂ ಓದಿ : Viral Video: ಬೈಕ್ ಆ್ಯಕ್ಸಿಡೆಂಟ್​; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್​ಮಿರರ್​ ಯಾಕೆ ಬೇಡ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ರೂ. 2 ಲಕ್ಷಕ್ಕೆ ಅಪ್ಪ ಮಾರಾಟಕ್ಕಿದ್ದಾನೆ’ ಎಂದು ಮನೆ ಬಾಗಿಲಿಗೆ ಸೇಲ್​ ನೋಟ್ (Sale Note) ಅಂಟಿಸಿದ್ದಾಳೆ  8 ವರ್ಷದ ಮಗಳು. ಯಾವುದೋ ಒಂದು ಸಣ್ಣ ವಿಷಯಕ್ಕೆ ಆಕೆ ಭಯಂಕರ ಕೋಪಗೊಂಡಿದ್ದಾಳೆ. ಆ ಕೋಪವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಹಾಕುವ ಮೂಲಕ ತೀರಿಸಿಕೊಂಡಿದ್ದಾಳೆ. ಇದು ತಮಾಷೆಗಾಗಿ ಎಂದು ಅಪ್ಪ ಸಮಜಾಯಿಷಿನ್ನೂ ಕೊಟ್ಟಿದ್ದಾನೆ.

ಅಪ್ಪನನ್ನು ಮಾರುವ ಕುರಿತು ಮಗಳು ಹಾಕಿದ ಸೇಲ್ ನೋಟ್​

A minor disagreement and 8-year-old decided to put up a Father For Sale notice out of our apartment door.

X ನಲ್ಲಿ @Malavtweets ಎಂಬ ಖಾತೆದಾರರು ಈ ಪೋಸ್ಟ್​ ಮಾಡಿದ್ದಾರೆ. ತನ್ನ ಮತ್ತು ಅಪ್ಪನ ಮಧ್ಯೆ ಉಂಟಾದ  ಸಣ್ಣ ಭಿನ್ನಾಭಿಪ್ರಾಯದಿಂದಾಗಿ ಈ ಬಾಲಕಿ ಹೀಗೆ ಅಪಾರ್ಟ್ಮೆಂಟ್​ನ ಬಾಗಿಲಿಗೆ ಸೇಲ್​ ನೋಟ್​ ತೂಗು ಹಾಕಿದ್ದಾಳೆ. ಈ ಪೋಸ್ಟ್​ ಅನ್ನು ಈತನಕ ಸುಮಾರು 30,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್​ ತುಂಬಾ ಮುದ್ದಾಗಿದೆ. ಈಕೆ ಟಿವಿ ಟೈಮ್​, ಚಾಕೋಲೇಟ್​, ಪಿಕ್ನಿಕ್​, ರೌಂಡ್​, ಸಿನೆಮಾ, ಬಟ್ಟೆಬರೆ ಏನನ್ನೂ ಕೇಳದೆ ಹೀಗೆ ಇಷ್ಟೊಂದು ವ್ಯಾವಹಾರಿಕವಾಗಿ ಮಾತನಾಡಿದ್ದಾಳೆಂದರೆ! ನಾನಂತೂ ಬಿದ್ದುಬಿದ್ದು ನಗುತ್ತಿದ್ದೇನೆ ಎಂದಿದ್ದಾರೆ ಅನೇಕರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:45 pm, Fri, 6 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ