Viral Video: ಬೈಕ್ ಆ್ಯಕ್ಸಿಡೆಂಟ್​; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್​ಮಿರರ್​ ಯಾಕೆ ಬೇಡ?

Highway : ಹೈವೇಯಲ್ಲಿ ಬೈಕ್​ಗಳು ಅಪಘಾತಕ್ಕೆ ಒಳಗಾಗುವುದು ಇದೇ ಕಾರಣಕ್ಕೇ. ಯಾಕೆ ಅವರು ಇಷ್ಟೊಂದು ವೇಗದಲ್ಲಿ ಸವಾರಿ ಮಾಡುತ್ತಾರೆ, ರೋಡ್ ಕಟ್ ಮಾಡುತ್ತಾರೆ ಎನ್ನುವುದೇ ತಿಳಿಯುತ್ತಿಲ್ಲ. ಪಾಪ ಆ ಇನ್ನೊಬ್ಬ ಬೈಕ್​ಸವಾರನದು ತಪ್ಪೇನಿತ್ತು? ಖಂಡಿತ ಅವ ಗಂಭೀರವಾಗಿ ಗಾಯಗೊಂಡಿರುತ್ತಾನೆ, ಪ್ರಾಣಾಪಾಯವಾಗದಿದ್ದರೆ ಸಾಕು... ಅಂತೆಲ್ಲ ಹೇಳುತ್ತಿದ್ದಾರೆ ನೆಟ್ಟಿಗರು.

Viral Video: ಬೈಕ್ ಆ್ಯಕ್ಸಿಡೆಂಟ್​; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್​ಮಿರರ್​ ಯಾಕೆ ಬೇಡ?
ಬೈಕ್ ಆ್ಯಕ್ಸಿಡೆಂಟ್​
Follow us
ಶ್ರೀದೇವಿ ಕಳಸದ
|

Updated on: Oct 06, 2023 | 4:09 PM

Bike Accident: ಬೈಕ್​ಗೆ ಸೈಡ್ ಮಿರರ್ ಇಲ್ಲ, ಇನ್ನೇನು ನಿರೀಕ್ಷಿಸಲು ಸಾಧ್ಯ? ಸೈಡ್​ ಮಿರರ್ ಹೆಣ್ಣುಮಕ್ಕಳಿಗೆ ಮಾತ್ರ, ಗಂಡುಮಕ್ಕಳಿಗಲ್ಲ ಎಂದು ನನ್ನ ಸ್ನೇಹಿತನೊಬ್ಬರ ಹೇಳಿದ್ದು ನೆನಪಾಗುತ್ತಿದೆ. ಇದು ದಂಡನಾರ್ಹ ಅಪರಾಧ. ಹೆದ್ದಾರಿಯಲ್ಲಿ ಬೈಕ್​ಗಳನ್ನು ಸಾಮಾನ್ಯವಾಗಿ ಹೀಗೆಯೇ ತಿರುಗಿಸಿಕೊಳ್ಳುತ್ತಾರೆ, ಆದ್ದರಿಂದಲೇ ಹೆಚ್ಚು ಅಪಘಾತಗಳಾಗುತ್ತವೆ. ಹೈಸ್ಪೀಡ್​ ಮತ್ತು ಎಕ್ಸ್ಪ್ರೆಸ್​ವೇಯಲ್ಲಿ ಈ ಮೂರ್ಖ ಅದು ಹೇಗೆ ಹೀಗೆ ತನ್ನ ದಾರಿಯನ್ನು ಬದಲಾಯಿಸಿದ? ಓವರ್ಟೇಕ್​ ಮಾಡಲು ಕೂಡ ನಿಯಮಗಳಿವೆಯಲ್ಲವೆ. ಇದು ಮಹಾಪರಾಧ, ಇವನಿಗೆ ಶಿಕ್ಷೆಯಾಗಬೇಕು. ಎಲ್ಲ ಸರಿ ಆ ಇನ್ನೊಬ್ಬ ಬೈಕ್​ ಸವಾರನ (Biker) ಕಥೆ ಏನಾಯಿತು? ಈ ಘಟನೆ ನಡೆದಿದ್ದು ಎಲ್ಲಿ? ಅಂತೆಲ್ಲ ನೆಟ್ಟಿಗರು ರೆಡ್ಡಿಟ್​ನ ವಿಡಿಯೋದಡಿ ಚರ್ಚಿಸಿದ್ದಾರೆ.

ಇದನ್ನೂ ಓದಿ : Viral Video: ‘ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​

6 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 400 ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಅಪಘಾತ ಭಯಂಕರವಾಗಿದೆ. ಬಹುಶಃ ಆ ಇನ್ನೊಬ್ಬ ಬೈಕ್ ಸವಾರ ನಾನಾಗಿದ್ದರೆ ಖಂಡಿತ ಈ ಭೂಮಿಯ ಮೇಲೆ ಇರುತ್ತಿರಲೇ ಇಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೈವೇ ಮೇಲೆ ಹೈಸ್ಪೀಡಿನಲ್ಲಿ ಬೈಕ್​ ಸವಾರ ರೋಡ್​ ಕಟ್ ಮಾಡಿದಾಗ

Sad that other guy had to pay the price (might have got injured bad) for this man’s stupidity. byu/Construction1ne inindianbikes

ದ್ವಿಚಕ್ರವಾಹನಗಳಿಂದ ಎರಡೂ ಕನ್ನಡಿಗಳನ್ನು ತೆಗೆಯುವ ಜನರನ್ನು ನೋಡಿ ನೋಡಿ ನಾನಂತೂ ಸುಸ್ತಾಗಿ ಹೋಗಿದ್ದೇನೆ, ಏನು ಹುಚ್ಚುತನವೋ? ಎಂದಿದ್ದಾರೆ ಒಬ್ಬರು. ಹೀಗೆ ಮಾಡುವ ಜನರು ತಮ್ಮ ಜೀವವನ್ನು ತಾವೇ ಕಳೆದುಕೊಳ್ಳುವುದು ಹೆಚ್ಚು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ

ಈ ವಿಡಿಯೋದಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯ ತಂದಿದ್ದಾನಲ್ಲ ಈ ಬೈಕ್​ ಸವಾರ ಇದಕ್ಕೇನು ಹೇಳುತ್ತೀರಿ? ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬ ಬೈಕ್ ಸವಾರ ಖಂಡಿತ ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದಿದ್ಧಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ