Viral Video: ಕೊಲ್ಕತ್ತಾ: ಸಿಗ್ನಲ್ ಜಂಪ್ ಮಾಡಿ ಕಾರು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಬಸ್
Accident : ಕೊಲ್ಕತ್ತೆಯ ಸೆಕ್ಟರ್ V ಯಿಂದ ಕರುಣಾಮೊಯಿ ಕ್ರಾಸಿಂಗ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಲೇಜ್ ಮೋರ್ ಇಂಟರ್‌ಸೆಕ್ಷನ್‌ನಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೂಡ ಚಾಲಕ ಬಸ್ ನಿಲ್ಲಿಸಲಿಲ್ಲ. ಪರಿಣಾಮವಾಗಿ ನಾಲ್ಕು ಪಾಯಿಂಟ್ ಕ್ರಾಸಿಂಗ್‌ನ ನಂತರ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. 10 ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
Kolkata : ಕೊಲ್ಕತ್ತೆಯಸೆಕ್ಟರ್ V, ಕಾಲೇಜ್ ಮೋರ್‌ನ ಬಳಿ ಬಸ್ ಸಿಗ್ನಲ್ ಜಂಪ್ ಮಾಡಿ ಕಾರು ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿ (Accident) ಹೊಡೆದಿದೆ. ಕಾಲೇಜ್ ಬಳಿಯ ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದುದರಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ರೆಡ್ಡಿಟ್ ಮೂಲಕ ಅಪಘಾತದ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರವಾಹನದ ಸವಾರ ಮತ್ತು ಹಿಂಬದಿಯ ಸವಾರ ಹೆಲ್ಮೆಟರ್ ಧರಿಸಿದ್ದರಿಂದ ಅವರು ಯಾವುದೇ ರೀತಿಯ ಗಾಯಗಳಿಗೆ ಒಳಗಾಗಿಲ್ಲ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಗಾಯಗೊಳ್ಳದೆ ಪಾರಾಗಿದ್ದಾರೆ. ಕಾರಿನ ಏರ್ಬ್ಯಾಗ್ ಅವರನ್ನು ರಕ್ಷಿಸಿದೆ ಎಂದು ಬಿಧಾನನಗರದ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್ನಲ್ಲಿ ಕಾಫಿ ಕುಡಿದ ಗಗನಯಾತ್ರಿ
KB 16 ಮಾರ್ಗದ ಬಸ್, ನ್ಯೂ ಟೌನ್‌ನ ಆಕ್ಷನ್ ಏರಿಯಾ III ರಲ್ಲಿ ಸುಖೋಬ್ರಿಷ್ಟಿ ವಸತಿ ಸಂಕೀರ್ಣದ ಬಳಿಯ ಬಸ್ ಟರ್ಮಿನಸ್‌ನಿಂದ ವಿಐಪಿ ರಸ್ತೆಯಿಂದ ಬಂಗೂರ್ ಅವೆನ್ಯೂಗೆ ಚಲಿಸುವಾಗ ಈ ದುರ್ಘಟನೆ ನಡೆದಿದೆ. ಸೋಮವಾರ, ಬಸ್ ಗೋದ್ರೇಜ್ ವಾಟರ್ಸೈಡ್ನಿಂದ ಸಾಲ್ಟ್ ಲೇಕ್ ಬೈಪಾಸ್ ಕಡೆಗೆ ಹೋಗುತ್ತಿತ್ತು. ಸೆಕ್ಟರ್ V ಯಿಂದ ಕರುಣಾಮೊಯಿ ಕ್ರಾಸಿಂಗ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಲೇಜ್ ಮೋರ್ ಇಂಟರ್‌ಸೆಕ್ಷನ್‌ನಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೂಡ ಚಾಲಕ ಬಸ್ ನಿಲ್ಲಿಸಲಿಲ್ಲ. ಪರಿಣಾಮವಾಗಿ ನಾಲ್ಕು ಪಾಯಿಂಟ್ ಕ್ರಾಸಿಂಗ್‌ನ ನಂತರ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ಅಪಘಾತದ ದೃಶ್ಯ
4 wheeler jumped signal and rammed into the bus. byu/Construction1ne inCarsIndia
ಗಾಯಗೊಂಡ 10 ಪ್ರಯಾಣಿಕರನ್ನು ಬಿಧಾನನಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹೆಚ್ಚಿನವರು ಮೂಗೇಟಿಗೆ ಒಳಗಾಗಿದ್ದಾರೆ. ಕೆಲವರ ಕೈಕಾಲು ಮೂಳೆಗಳು ಮುರಿದಿವೆ. ಈ ದುರ್ಘಟನೆಗೆ ಕಾರಣನಾದ ಬಸ್ಸಿನ ಚಾಲಕನನ್ನು ಬಂಧಿಸಲಾಗಿದೆ ಮತ್ತು ಐಪಿಸಿಯ 279 (ವೇಗದ ಚಾಲನೆ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ : Viral Video: ಮುಂಬೈ; ಶಿವಾಜಿಪಾರ್ಕ್ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ
ಸೋಮವಾರ ಬೆಳಗ್ಗೆ ಪೊಲೀಸರು ಕ್ರೇನ್‌ಗಳ ಸಹಾಯದಿಂದ ಬಸ್ ಅನ್ನು ಹೊರ ತೆಗೆದಿದ್ದರಿಂದ ಕಾಲೇಜ್ ಮೋರ್ ಡಿವೈಡರ್ನಲ್ಲಿ ಸುಮಾರು 40 ನಿಮಿಷಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ನಾಲ್ಕು ಗಂಟೆಗಳ ಹಿಂದೆ ರೆಡ್ಡಿಟ್ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ, ಸಿಗ್ನಲ್ ಜಂಪ್ ಮಾಡಿದ್ದು ಕಾರು ಅಥವಾ ಬಸ್? ಎಂಬ ಬಗ್ಗೆ ನೆಟ್ಟಿಗರಲ್ಲಿ ಜಿಜ್ಞಾಸೆ ಉಂಟಾಗಿದ್ದು, ಈ ಸುತ್ತ ಚರ್ಚೆ ಸಾಗಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:16 pm, Thu, 5 October 23