Viral Video: ಮುಂಬೈ; ಶಿವಾಜಿಪಾರ್ಕ್​ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ

Swimming Pool: ಮುಂಬೈನ ಈ ಈಜುಗೊಳಕ್ಕೆ ದಿನಕ್ಕೆ ಮಕ್ಕಳಾದಿಯಾಗಿ ಸುಮಾರು 2,000 ಜನರು ಬರುತ್ತಾರೆ. ಬೆಳಗಿನ ಜಾವ ಸಿಬ್ಬಂದಿಯು ಈಜುಗೊಳವನ್ನು ಪರಿಶೀಲನೆ ಮಾಡುವ ಸಮಯದಲ್ಲಿ ಈ ಮೊಸಳೆಮರಿ ಪತ್ತೆಯಾಗಿದೆ. ತಕ್ಷಣವೇ ತಜ್ಞರನ್ನು ಕರೆಸಿ ಮೊಸಳೆಯನ್ನು ರಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಈಜುಗೊಳದ ಸಿಬ್ಬಂದಿಗೆ ಮೊಸಳೆಯು ಕಚ್ಚಿ ಗಾಯಗೊಳಿಸಿದೆ.

Viral Video: ಮುಂಬೈ; ಶಿವಾಜಿಪಾರ್ಕ್​ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ
ಮುಂಬೈ ಶಿವಾಜಿ ಪಾರ್ಕ್​ನ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ
Follow us
ಶ್ರೀದೇವಿ ಕಳಸದ
|

Updated on: Oct 04, 2023 | 4:57 PM

Mumbai: ಬಿಎಂಸಿ ಶಿವಾಜಿ ಪಾರ್ಕ್​ನ ಈಜುಕೊಳದಲ್ಲಿ ಮೊಸಳೆ (Crocodile) ಪತ್ತೆಯಾಗಿದ್ದು ವಿಡಿಯೋ ವೈರಲ್ ಆಗುತ್ತಿದೆ.  ಅಕ್ಟೋಬರ್​ 3ರಂದು ಈ ವಿಡಿಯೋ ಅನ್ನು X ನಲ್ಲಿ ಪೋಸ್ಟ್ ಮಾಡಲಾಗಿದೆ. ಎರಡು ಅಡಿ ಇರುವ ಈ ಮರಿಮೊಸಳೆ ಬೆಳಗ್ಗೆ 5.30ರ ಸುಮಾರಿಗೆ ಈಜುಗೊಳದಲ್ಲಿ ಕಾಣಿಸಿಕೊಂಡಿದೆ. ತಕ್ಷಣವೇ ತಜ್ಞರನ್ನು ಕರೆಕಳುಹಿಸಲಾಗಿದ್ದು, ಅರಣ್ಯ ಇಲಾಖೆಗೆ ಅದನ್ನು ರವಾನೆ ಮಾಡಲಾಗುತ್ತಿದೆ. ಈ ಈಜುಗೊಳದಲ್ಲಿ ಮಕ್ಕಳಾದಿಯಾಗಿ ಪ್ರತೀದಿನ ಸುಮಾರು 2,000 ಜನರು ಈಜಲು ಬರುತ್ತಾರೆ. ಅದೃಷ್ಟವಶಾತ್ ಅದು ಯಾರಿಗೂ ಕಚ್ಚಿಲ್ಲ. ಆದರೆ, ಇದನ್ನು ರಕ್ಷಿಸುವ ಸಂದರ್ಭದಲ್ಲಿ ಈಜುಗೊಳದ ಸ್ವಚ್ಛತಾ ಸಿಬ್ಬಂದಿಯು ಇದರ ಕಡಿತಕ್ಕೆ ಒಳಗಾಗಿದ್ಧಾರೆ.

ಇದನ್ನೂ ಓದಿ : Viral Video: ‘ಅತ್ಯಂತ ಮೂರ್ಖ ವ್ಯಕ್ತಿ ಪ್ರಶಸ್ತಿ’ ಪಡೆದ ಮಹಿಳೆ; ಈ ಪ್ರಶಸ್ತಿಯ ಮಾನದಂಡ ಇಲ್ಲಿದೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಇಂದು ಮುಂಜಾನೆ 5.30ರ ಸುಮಾರಿಗೆ ಇಲ್ಲಿಯ ಈಜುಕೊಳದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ತಜ್ಞರ ನೆರವಿನಿಂದ ಅದನ್ನು ರಕ್ಷಿಸಲಾಗಿದೆ. ಅರಣ್ಯ ಇಲಾಖೆಗೆ ಅದನ್ನು ಹಸ್ತಾಂತರಿಸುವ ಪ್ರಕ್ರಿಯೆ ಸಾಗಿದೆ. ಆದರೆ ಈಜುಕೊಳದಲ್ಲಿ ಈ ಮೊಸಳ ಮರಿ ಎಲ್ಲಿಂದ ಹೇಗೆ ಬಂದಿತು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಉಪ ಆಯುಕ್ತ (ಉದ್ಯಾನಗಳು) ಕಿಶೋರ್ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ : Viral Video: ‘ಕ್ಯಾನ್ಸರ್​ಮುಕ್ತ​ಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ’

ಈಜುಕೊಳ ಮತ್ತು ರಂಗಮಂದಿರದ ಸಂಯೋಜಕ ಸಂದೀಪ್ ವೈಶಂಪಾಯನ್, ‘ಪ್ರತಿದಿನ ಬೆಳಿಗ್ಗೆ ಈಜುಕೊಳವನ್ನು ಸದಸ್ಯರಿಗಾಗಿ ಮುಕ್ತಗೊಳಿಸುವ ಮೊದಲು ಸಿಬ್ಬಂದಿಯು ಜಾಗ್ರತೆಯಿಂದ ಸ್ಥಳ ಪರಿಶೀಲನೆ ನಡೆಸುತ್ತದೆ. ಆ ಪ್ರಕಾರ ಇಂದು ಬೆಳಗ್ಗೆ 5.30ರ ಸುಮಾರಿಗೆ ಈಜುಕೊಳವನ್ನು ಪರಿಶೀಲಿಸಿದಾಗ ಈಜುಕೊಳದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ಈ ಈಜುಕೊಳದ ಪಕ್ಕದಲ್ಲಿಯೇ ಖಾಸಗಿ ಮೃಗಾಲಯ ಮ್ಯೂಸಿಯಂ ಇರುವುದು ಗಮನಿಸಬೇಕಾದ ಸಂಗತಿ. ಬಹುಶಃ ಮೊಸಳೆ ಅಲ್ಲಿಂದ ಬಂದಿರುವ ಸಾಧ್ಯತೆ ಇದೆ.’ ಎಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್