Viral Video: ‘ಅತ್ಯಂತ ಮೂರ್ಖ ವ್ಯಕ್ತಿ ಪ್ರಶಸ್ತಿ’ ಪಡೆದ ಮಹಿಳೆ; ಈ ಪ್ರಶಸ್ತಿಯ ಮಾನದಂಡ ಇಲ್ಲಿದೆ

Super Glue: ಈ ಮಹಿಳೆಗೆ ಈ ಪ್ರಶಸ್ತಿ ಹೇಗೆ ಸಿಕ್ಕಿತು? ಯಾವ ಕೆಲಸವನ್ನು ಮಾಡಿ ಈಕೆ ಮೂರ್ಖಳು ಎನ್ನಿಸಿಕೊಂಡಿದ್ದಾಳೆ ಎಂದು ಆಲೋಚಿಸುತ್ತಿದ್ದೀರಾ? ಬಹುಶಃ ನಿಮ್ಮಲ್ಲಿಯೂ ಕೂಡ ಅನೇಕರಿಗೆ ಇಂಥ ಅನುಭವವಾಗಿರುವ ಸಾಧ್ಯತೆ ಇದೆ. ಆದರೆ ಈಕೆ ಮಾಡಿಕೊಂಡಂಥ ಮಹಾನ್​ ಯಡವಟ್ಟನ್ನು ನೀವು ಖಂಡಿತ ಮಾಡಿಕೊಂಡಿರಲಾರಿರಿ. ಇನ್ನು ಮುಂದೆಯೂ ಮಾಡಿಕೊಳ್ಳದಿರಿ!

Viral Video: 'ಅತ್ಯಂತ ಮೂರ್ಖ ವ್ಯಕ್ತಿ ಪ್ರಶಸ್ತಿ' ಪಡೆದ ಮಹಿಳೆ; ಈ ಪ್ರಶಸ್ತಿಯ ಮಾನದಂಡ ಇಲ್ಲಿದೆ
ಕಣ್ಣಿನ ಔಷಧಿ ಬದಲಾಗಿ ಅಂಟನ್ನು ಕಣ್ಣಿಗೆ ಸುರಿದುಕೊಂಡ ಮಹಿಳೆ
Follow us
ಶ್ರೀದೇವಿ ಕಳಸದ
|

Updated on: Oct 04, 2023 | 4:08 PM

Eye Drops : ಏನೋ ಮಾಡಲು ಹೋಗಿ ಏನೋ ಆಗುತ್ತಿರುತ್ತದೆ. ಇದು ಬದುಕಿನ ವಿವಿಧ ಹಂತಗಳಲ್ಲಿ ಆಗುವುದು ಸಾಮಾನ್ಯ. ಅದರಲ್ಲೂ ನಮಗೆ ನಾವೇ ಕೈಯ್ಯಾರೆ ಏನಾದರೂ ಯಡವಟ್ಟು ಮಾಡಿಕೊಂಡಾಗ! ಅದರಲ್ಲೂ  ಅದು ಅಪಾಯಕಾರಿಯಾಗಿದ್ದಾಗ ಏನು ಮಾಡುವುದು? ಅದಕ್ಕಾಗಿ ಈ ಮಹಿಳೆಯ ಬಳಿ ಒಂದು ಉಪಾಯವಿದೆ. ಈಕೆ ತನಗೆ ತಾನೇ ಅತ್ಯಂತ ಮೂರ್ಖ ವ್ಯಕ್ತಿ ಪ್ರಶಸ್ತಿಯನ್ನು ಕೊಟ್ಟುಕೊಂಡಿದ್ದಾಳೆ. ಏಕೆಂದರೆ ಕಣ್ಣಿಗೆ ಔಷಧಿ ಹಾಕಿಕೊಳ್ಳುವ ಬದಲಾಗಿ ಅಂಟನ್ನು (Super Glue) ಸುರಿದುಕೊಂಡಿದ್ದಾಳೆ! ಅಷ್ಟಕ್ಕೆ ಸುಮ್ಮನಾಗದೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಇದನ್ನೂ ಓದಿ : Viral Video: ‘ಕ್ಯಾನ್ಸರ್​ಮುಕ್ತ​ಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ’

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸ್ವಯಂಕೃತ ಅಪರಾಧ ಮಾಡಿಕೊಂಡು ಸ್ವಯಂ ಪ್ರಶಸ್ತಿ ಕೊಟ್ಟುಕೊಂಡ ಮಹಿಳೆಯ ಹೆಸರು ಜೆನ್ನಿಫರ್ ಎವರ್ಸೊಲ್. ತುಂಬಾ ಉರಿಯುತ್ತಿತ್ತು, ನಿಜಕ್ಕೂ ಈ ಉರಿಯನ್ನು ತಡೆದುಕೊಳ್ಳಲಾಗಲಿಲ್ಲ. ಬಿಸಿಬಿಸಿ ಬುಗ್ಗೆ ಕಣ್ಣೊಳಗೆ ನುಗ್ಗಿದಂತೆ ಆಗುತ್ತಿತ್ತು ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇವಳೇ ಅತ್ಯಂತ ಮೂರ್ಖ ಪ್ರಶಸ್ತಿ ಕೊಟ್ಟುಕೊಂಡ ಮಹಿಳೆ

Woman mistakes super glue for eye drops pic.twitter.com/Ca50qiDTjc

ಕ್ಯಾಲಿಫೋರ್ನಿಯಾದ ಸಾಂಟಾ ರೋಸಾದಲ್ಲಿ ಈ ಮಹಿಳೆ ವಾಸಿಸುತ್ತಾಳೆ. ಮೊದಲು ಟಿಕ್​ ಟಾಕ್​ನಲ್ಲಿ ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾಳೆ. ಆ ನಂತರ ಇದು X ನಲ್ಲಿ ವೈರಲ್ ಆಗಿದೆ. ಪೀಪಲ್ ಮ್ಯಾಗಝೀನ್​ ಹಳೆಯ ವರದಿಯ ಪ್ರಕಾರ, ಈ ಘಟನೆ ಇದೇ ಜೂನ್​ನಲ್ಲಿ ನಡೆದಿದೆ. ಇದೀಗ ವೈರಲ್ ಆಗುತ್ತಿದೆ. ಈತನಕ ಸುಮಾರು 2.5 ಲಕ್ಷ ಜನರು ಇದನ್ನು ನೋಡಿದ್ದಾರೆ.

ಇದನ್ನು ಓದಿ : Viral: ‘ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು’

‘ದ್ರವವು ನನ್ನ ಕಣ್ಣನ್ನು ಸೇರುತ್ತಿದ್ದಂತೆ ನಾನು ಅತಿವೇಗದಲ್ಲಿ ಕಣ್ಣನ್ನು ಮುಚ್ಚಿದೆ. ಕಣ್ಣೊಳಗೆ ಬಿದ್ದಿದ್ದು ಏನೆಂದೇ ನನಗೆ ಅರ್ಥವಾಗಿರಲಿಲ್ಲ. ಸದ್ಯ ಗುಡ್ಡೆಯ ಮೇಲೆ ದ್ರವ ಎಂದರೆ ಅಂಟು ಬೀಳಲಿಲ್ಲ. ಅಕಸ್ಮಾತ್ ನಾನು ಕಣ್ಣನ್ನು ಮುಚ್ಚದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ’ ಎಂದಿದ್ದಾಳೆ ಆಕೆ. ನಂತರ ಆ್ಯಂಬುಲೆನ್ಸ್​ನಲ್ಲಿ ಆಕೆಯನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಲಾಯಿತು. ಚಿಕಿತ್ಸೆ ನಂತರ ಆಕೆಗೆ ಕಣ್ಣು ತೆರೆಯಲು ಸಾಧ್ಯವಾಯಿತು. ಆದರೆ ಕಣ್ಣಿನಲ್ಲಿ ಗೀರುಗಳು ಮೂಡಿದ್ದು ದೃಷ್ಟಿಯೂ ಮಸುಕಾಗಿದೆ. ಆ ಗಾಯ ಮಾಯವಾಗುವತನಕ ಆಕೆ ಕಣ್ಣನ್ನು ಮುಚ್ಚಿಕೊಂಡೇ ಇರಬೇಕು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್