Viral: ‘ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು’
Wildlife: ಆನೆಯಿಂದಾಗಿ ಕಳೆದ ವರ್ಷ ತನ್ನ ಮನೆಯನ್ನು ಹೇಗೆ ಕಳೆದುಕೊಂಡೆ ಮತ್ತು ಆನಂತರ ಆ ದೈತ್ಯಜೀವಿಯೊಂದಿಗೆ ಹೇಗೆ ಸಹಬಾಳ್ವೆ ಮಾಡಲು ಶುರುಮಾಡಿದೆ ಎನ್ನುವುದನ್ನು ಐಎಫ್‌ಎಸ್ ಮುದಿತ್ ವರ್ಮಾ ಅವರ ವಾಹನ ಚಾಲಕ ಕಮಲ್, ವರ್ಮಾ ಬಳಿ ಹೇಳಿಕೊಂಡಿದ್ದಾರೆ. ವರ್ಮಾ ಅದನ್ನು X ನಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿದ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ.
Elephant: ವನ್ಯಮೃಗಗಳನ್ನು (Wild Animals) ಈವತ್ತು ಅರ್ಥ ಮಾಡಿಕೊಳ್ಳಬೇಕಿರುವುದು ಮನುಷ್ಯನೇ ಹೊರತು ಆ ಪ್ರಾಣಿಗಳಲ್ಲ. ಅವುಗಳ ಉಳಿವಲ್ಲೇ ಮನುಷ್ಯನ ಉಳಿವೂ ಇದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಇಂದು ತಿಳಿದುಕೊಳ್ಳಬೇಕು. ಕಾಡುಪ್ರಾಣಿಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವ ಮನುಷ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹುಲಿದಾಳಿ, ಕರಡಿದಾಳಿ, ಆನೆದಾಳಿ, ಚಿರತೆದಾಳಿ ಅಂತೆಲ್ಲ ಹೇಳುತ್ತೇವಲ್ಲ, ಆ ಪದಪುಂಜ ಸಮಂಜಸವೇ? ಸ್ವಲ್ಪ ಯೋಚಿಸಿ. ಐಎಫ್‌ಎಸ್ ಅಧಿಕಾರಿ ಮುದಿತ್ ವರ್ಮಾ X ನಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಅವರ ವಾಹನಚಾಲಕ ಕಮಲ್ಗೆ ಆನೆಯೊಂದು ಕಲಿಸಿದ ಜೀವನಪಾಠದ ಬಗ್ಗೆ ಇವರ ಪೋಸ್ಟ್ ಇದೆ.
ಇದನ್ನೂ ಓದಿ : Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
‘ಕಳೆದ ವರ್ಷ ಆನೆ ತನ್ನ ಮನೆಯನ್ನು ಹೇಗೆ ಧ್ವಂಸ ಮಾಡಿತು ಎಂದು ನಮ್ಮ ಚಾಲಕ ಕಮಲ್ ಹೇಳುತ್ತಿದ್ದರು. ಅವರು ಹೇಳುತ್ತಿರುವುದನ್ನು ಕೇಳಿ ನಾನಂತೂ ಅಚ್ಚರಿಗೊಂಡೆ; ”ನನ್ನ ಮನೆಯಲ್ಲಿ ಬಾಳೆಗೊಂಚಲು ಇಡದಿದ್ದರೆ ಅದು ಬರುತ್ತಿರಲಿಲ್ಲ. ತಪ್ಪು ನನ್ನದೇ. ಆದರೂ ಒಂದು ವರ್ಷದಿಂದ ನಾವಿಬ್ಬರೂ ಪ್ರೀತಿ ಮತ್ತು ಸಹಬಾಳ್ವೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇವೆ”. ಈ ಪೋಸ್ಟ್ ಅನ್ನು ಅಕ್ಟೋಬರ್ 2 ರಂದು ಹಂಚಿಕೊಳ್ಳಲಾಗಿದೆ.
ವರ್ಮಾ ವಾಹನ ಚಾಲಕ ಕಮಲ್
Our driver Kamal Ji was telling how last year an elephant destroyed his house. And I was amazed when he said,“It was my mistake. Had I not kept a bunch of bananas in my house,it would have not come” We are trying to learn what ppl here already know. Love & Co-existence. #wildlife pic.twitter.com/WKeHtWdiFS
— Mudit Verma, IFS (@MuditKVerma) October 2, 2023
ಇದರಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಅಂಶ ಎಲ್ಲಿದೆ? ಎಂದು ಕೇಳಿದ್ಧಾರೆ ಒಬ್ಬರು. ನಿಮ್ಮ ಮನೆಯ ಕಾಂಪೌಂಡಿನಲ್ಲಿ ಹಲಸಿನ ಮರವಿದ್ದರೆ ಆ ಪರಿಮಳ ಮೈಲಿಗಟ್ಟಲೆ ಪಸರಿಸುತ್ತದೆ ಎಂದಿದ್ಧಾರೆ ಇನ್ನೊಬ್ಬರು. ಅಂದರೆ ಮನೆಯೊಳಗೆ ಇಡದೇ ಮನೆಯ ಹೊರಗೆ ಬಾಳೆಗೊನೆ ಇಡಬೇಕಿತ್ತು ಎಂದು ಕಮಲ್ ಹೇಳಿದ್ದಾರಾ, ಹೇಗೆ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಅಪ್ಸರಾ ಆಲಿ: ‘ನಟರಂಗ’ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ
ಆನೆ ಹೀಗೆ ಅರಣ್ಯ ಸಿಬ್ಬಂದಿಯ ಮನೆಯನ್ನು ಹಾಳುಗೆಡವಿದ್ದು ಇದು ಮೊದಲೇನಲ್ಲ. ಈ ಹಿಂದೆ ಐಎಫ್‌ಎಸ್ ಪರ್ವೀನ್ ಕಸ್ವಾನ್ ಹಂಚಿಕೊಂಡ ಪೋಸ್ಟ್ ನೆನಪಿರಬಹುದು. ಆನೆಯೊಂದು ಕಾರನ್ನು ಧ್ವಂಸಗೊಳಿಸಿ ಓಡಿಹೋಗಿತ್ತು!
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ