Viral Video: ಅಪ್ಸರಾ ಆಲಿ: ‘ನಟರಂಗ’ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ

Natarang : 13 ವರ್ಷಗಳ ಹಿಂದೆ ಬಿಡುಗಡೆಯಾದ ಮರಾಠಿಯ ನಟರಂಗ ಸಿನೆಮಾದ ಗೀತೆ ಅಪ್ಸರಾ ಆಲೀ. ಬೇಲಾ ಶೇಂಡೆ ಹಾಡಿರುವ ಈ ಹಾಡು ಇಂದಿಗೂ ಚಿರನೂತನ. ಬೆಂಗಳೂರು ಮೂಲದ ಆವಂತಿ ನಾಗರಾಳ ಮತ್ತು ಮುಂಬೈ ಮೂಲದ ಸಾಯಿ ಗೋಡಬೋಲೆ ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಈಗಾಗಲೇ ಸುಮಾರು 10 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

Viral Video: ಅಪ್ಸರಾ ಆಲಿ: 'ನಟರಂಗ'ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ
'ಅಪ್ಸರಾ ಆಲೀ' ಹಾಡುತ್ತಿರುವ ಗಾಯಕಿಯರಾದ ಆವಂತಿ ನಾಗರಾಳ ಮತ್ತು ಸಾಯೀ ಗೋಡಬೋಲೆ
Follow us
ಶ್ರೀದೇವಿ ಕಳಸದ
|

Updated on: Oct 04, 2023 | 11:10 AM

Marathi: ‘ಮುಂದಿನ 50 ವಾರಗಳಲ್ಲಿ 50 ವಿಭಿನ್ನ ಭಾಷೆಗಳಲ್ಲಿ 50 ವಿಭಿನ್ನ ಹಾಡುಗಳನ್ನು ಹಾಡಲಿದ್ದೇನೆ, ನೀವು ಇಷ್ಟಪಡುವ ಯಾವುದೇ ಭಾಷೆಯಲ್ಲಿ ನಿಮ್ಮ ನೆಚ್ಚಿನ ಹಾಡನ್ನು ಪ್ರತಿಕ್ರಿಯೆಯ ಮೂಲಕ ತಿಳಿಸಿ’ ಕರ್ನಾಟಕ ಮೂಲದ ಅಮೆರಿಕದಲ್ಲಿ ನೆಲೆಸಿರುವ ಗಾಯಕಿ ಆವಂತಿ ನಾಗರಾಳ (Avanti Nagral) ತಮ್ಮ ಇನ್​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಇದೀಗ ಅವರು ಮುಂಬೈನ ಗಾಯಕಿ ಸಾಯಿ ಗೋಡ್ಬೋಲೆಯೊಂದಿಗೆ ಹಾಡಿದ ಮರಾಠಿಯ ಪ್ರಸಿದ್ಧ ಸಿನೆಮಾ ‘ನಟರಂಗ’ದಿಂದ ‘ಅಪ್ಸರಾ ಆಲಿ’ ಹಾಡು ಮಿಲಿಯನ್​ ಜನರ ಮನಸೂರೆಗೊಂಡಿದೆ. ಮಹಾರಾಷ್ಟ್ರದ ವೇಷಭೂಷಣದೊಂದಿಗೆ ಇವರಿಬ್ಬರೂ ಹಾಡಿದ ಈ ಲಾವಣಿ ಕೇಳಿದವರೆಲ್ಲರನ್ನೂ ತಲೆದೂಗುವಂತೆ ಮಾಡುತ್ತಿದೆ.

ಇದನ್ನೂ ಓದಿ : Viral Video: ‘ಹಾವುರಾಣಿ’ ನಿಮಗೆ ಬೆಡ್​ ಬೆಡ್​ಶೀಟ್​ ಏನೂ ಬೇಕಾಗಿಲ್ಲ ಬಿಡಿ ಎನ್ನುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

5 ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್ ಜನರು ನೋಡಿದ್ದಾರೆ. 1ಮಿಲಿಯನ್​ಗಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ತಮ್ಮ ನೆಚ್ಚಿನ ಈ ಗೀತೆಯನ್ನು ಹಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ಗೀತೆಗಳನ್ನು ಹಾಡುವಂತೆ ಆವಂತಿಗೆ ಕೋರಿಕೆ ಸಲ್ಲಿಸಿದ್ದಾರೆ.

ಅಪ್ಸರಾ ಆಲಿ…

ಇದು ಮೂಲಹಾಡಿಗಿಂತ ಸುಂದರವಾಗಿ ಕೇಳಿಬಂದಿದೆ, ನಾನು ಮತ್ತೆ ಮತ್ತೆ ಈ ಹಾಡನ್ನು ಕೇಳುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ನೀವಿಬ್ಬರೂ ನೋಡಲೂ ಛಂದವಾಗಿದ್ದೀರಿ, ನಿಮ್ಮ ಧ್ವನಿಯೂ ಅಷ್ಟೇ ಮಧುರವಾಗಿದೆ ಎಂದಿದ್ದಾರೆ ಇನ್ನೊಬ್ಬರು. ತುಂಬಾ ಆಪ್ತವಾದ ಪ್ರಸ್ತುತಿ ಎಂದಿದ್ದಾರೆ ಮತ್ತೊಬ್ಬರು. ಈ ಹಾಡಿನ ವೈಬ್​ ಮಾತ್ರ ಬಹಳ ಅದ್ಭುತ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಗುಜರಾತ್​; ಜಾಯಿಂಟ್​ ವೀಲ್​ನಲ್ಲಿ ಯುವತಿಯ ಕೂದಲು ಸಿಕ್ಕಿಹಾಕಿಕೊಂಡಾಗ

ಈ ಹಾಡು ರವಿ ಜಾಧವ್ ನಿರ್ದೇಶನದ ಮರಾಠಿ ಸಿನೆಮಾದ್ದು. 2010ರಲ್ಲಿ ಇದು ಬಿಡುಗಡೆಯಾಗಿದೆ. ಆಂದಿನಿಂದ ಇಂದಿನವರೆಗೂ ಈ ಹಾಡು ಸಂಗೀತಪ್ರೇಮಿಗಳ ನೆಚ್ಚಿನ ಹಾಡುಗಳಲ್ಲೊಂದು. ಅಜಯ್ ಮತ್ತು ಅತುಲ್​ ಕುಲಕರ್ಣಿ ಈ ಹಾಡಿನ ಸಂಗೀತ ನಿರ್ದೇಶಕರು. ಬೇಲಾ ಶೆಂಡೆ ಮತ್ತು ಅಜಯ್ ಅತುಲ್ ಈ ಹಾಡನ್ನು ಹಾಡಿದ್ದು, ಇದನ್ನು ಬರೆದವರು ಗುರು ಠಾಕೂರ್. ಸೋನಾಲಿ ಕುಲಕರ್ಣಿ ಈ ಹಾಡಿಗೆ ನಟಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ನೀವೂ ಈ ಹಾಡನ್ನು ಗುನಗುತ್ತಿರುವಿರೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್