Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’

Love Story : ಸ್ಫುರದ್ರೂಪಿಯಾದ ಎಲ್ಲಾ ರೀತಿಯಿಂದ ಸದೃಢರಾಗಿರುವ ಮತ್ತು ಅನುಕೂಲಸ್ಥರಾಗಿರುವ ಹುಡುಗ/ಹುಡುಗಿ ಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಇಂಥ ಅರ್ಥವಿಲ್ಲದ ಗ್ರಹಿಕೆಗಳಿಗೆ ಸೆಡ್ಡು ಹೊಡೆದು ನಿಂತಿದ್ದಾಳೆ ಮಹಾರಾಷ್ಟ್ರದ ಈ ವರ್ಷಾ. ಈಕೆ ತನ್ನೊಂದಿಗೆ ಇರದಿದ್ದರೆ ನಾನಿಂದು ಏನಾಗುತ್ತಿದ್ದೆನೋ ಎಂದು ತನ್ನ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾನೆ ಓಂಕಾರ.

Viral Video: 'ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು'
ಓಂಕಾರ್ ಮತ್ತು ವರ್ಷಾ ದಂಪತಿ
Follow us
|

Updated on:Sep 29, 2023 | 2:25 PM

Love : ವರ್ಷಾಳನ್ನು ನಾನು ಮೊದಲ ಸಲ ಕಾಲೇಜಿನಲ್ಲಿ (College Love) ನೋಡಿದಾಗ ನನಗೆ 17 ವರ್ಷ. ಸ್ನೇಹಿತರಾದೆವು, ಬಲುಬೇಗನೆ ಪ್ರೀತಿಯಲ್ಲಿಯೂ ಬಿದ್ದೆವು. ಆದರೆ 2021ರಲ್ಲಿ ಒಂದು ದಿನ ಮುಂಬೈನಿಂದ ಪುಣೆಗೆ ಹೋಗುವಾಗ ಹೆದ್ದಾರಿಯಲ್ಲಿ ನನ್ನ ಕಾರಿನ ಟಯರ್​ ಸಿಡಿದು ದೊಡ್ಡ ಅಪಘಾತವಾಯಿತು. ನನ್ನ ಒಂದು ಕಾಲು ಅಲ್ಯೂಮಿನಿಯಂ ಶೀಟ್​ನಲ್ಲಿ ಸಿಕ್ಕಿಹಾಕಿಕೊಂಡಿತು. ಆ ಕಾಲನ್ನು ಕತ್ತರಿಸದಿದ್ದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದರು. ಒಂದು ತಿಂಗಳತನಕ ವರ್ಷಾ ನನ್ನೊಂದಿಗೆ ಹಗಲೂ ರಾತ್ರಿ ಇದ್ದಳು. ಊಟ ಮಾಡಿಸುವುದು, ಡೈಪರ್ ಬದಲಾಯಿಸುವುದರಿಂದ ಹಿಡಿದು ನನ್ನೆಲ್ಲ ಕೆಲಸಗಳನ್ನು ಮಾಡಿದಳು. ನಂತರ ‘ನಾನು ಓಂಕಾರನೊಂದಿಗೆ ಜೀವನಪೂರ್ತಿ ಇರುತ್ತೇನೆ’ ಎಂದು ನನ್ನ ಪೋಷಕರಿಗೆ ಹೇಳಿದಳು.’ ಓಂಕಾರ ರೌಂಡಾಲೆ, ಮಹಾರಾಷ್ಟ್ರ

ಇದನ್ನೂ ಓದಿ : Viral Video: ಪೈನಾಪಲ್​ ಮೊಮೊ: ‘ಇದಕ್ಕೆ ಚಟ್ನಿ ಬೇಡ, ಹಾರ್ಪಿಕ್ ಹಾಕಿ ಕೊಟ್ಟುಬಿಡು’; ನೆತ್ತಿಗೇರಿದ ನೆಟ್ಟಿಗರ ಕೋಪ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘2021ರಲ್ಲಿ ನಮ್ಮಿಬ್ಬರ ಮದುವೆಯಾಯಿತು. ನಮಗೀಗ ಮುದ್ದಾದ ಹೆಣ್ಣು ಮಗುವಿದೆ. ನಾನೀವತ್ತು ಮಹಾರಾಷ್ಟ್ರ ವೀಲ್​ಚೇರ್ ಕ್ರಿಕೆಟ್​  ಟೀಮ್​ ಅಸೋಸಿಯೇಷನ್​ ಅನ್ನು ಮುನ್ನಡೆಸುತ್ತಿದ್ದೇನೆ. ಬದುಕಿನ ಸಂಕಷ್ಟಗಳು ನನ್ನ ಮತ್ತು ವರ್ಷಾ ಬಂಧವನ್ನು ಗಟ್ಟಿಗೊಳಿಸಿವೆ. ವರ್ಷಾ ಇಲ್ಲದಿದ್ದರೆ ನನ್ನ ಬದುಕೇನಾಗುತ್ತಿತ್ತೋ’ ಎನ್ನುತ್ತಾರೆ ಓಂಕಾರ.

ವರ್ಷಾ ಓಂಕಾರ ಬಂಧ ಹೀಗಿದೆ

ಇಂಥ ನಿಸ್ವಾರ್ಥ ಪ್ರೀತಿ ಮತ್ತು ಕಾಳಜಿಯು ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮಧ್ಯೆ ಕಣ್ಮರೆಯಾಗಿದೆ. ಒಣ ಅಹಂಕಾರ, ಹಣ ಮತ್ತು ಸ್ವಾತಂತ್ರ್ಯ ಎಂಬ ತಪ್ಪು ವ್ಯಾಖ್ಯಾನದಿಂದಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಂಡಿವೆ ಎಂದಿದ್ದಾರೆ ಒಬ್ಬರು. ಜೀವನದ ನಿಜವಾದ ಅರ್ಥವನ್ನು ನೀವು ಗಂಭೀರವಾಗಿ ತೋರಿಸುತ್ತಿದ್ದೀರಿ. ನಿಮ್ಮ ಇಚ್ಛಾಶಕ್ತಿಯ ಮುಂದೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದೀರಿ ಎಂದಿದ್ಧಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಬೆಂಗಳೂರಿನಲ್ಲಿ ಬ್ಯಾಟ್​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ

ಆಕೆ ರಾಣಿ! ದೇವರು ಅವಳನ್ನು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮಿಬ್ಬರಿಗೂ ಹೆಚ್ಚಿನ ಶಕ್ತಿ ಲಭಿಸಲಿ ಎಂದಿದ್ದಾರೆ ಮತ್ತೊಬ್ಬರು. ಇಂಥವಳನ್ನು  ಪಡೆದ ನೀವು ಧನ್ಯ ಮತ್ತು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು. ಅನೇಕರು ಇಂಥವರ ಸಂತತಿ ಹೆಚ್ಚಲಿ ಎಂದು ಹಾರೈಸಿದ್ದಾರೆ. ಸಿನೆಮಾ ಮತ್ತು ಜಾಹೀರಾತು ಪ್ರಪಂಚ ಹುಟ್ಟುಹಾಕುವ ಹುಸಿ ಆದರ್ಶದ ವ್ಯಾಖ್ಯಾನವನ್ನು ಇಂಥವರೇ ಅಳಿಸಬೇಕು ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:23 pm, Fri, 29 September 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್