Viral Video: ಬೆಂಗಳೂರಿನಲ್ಲಿ ಬ್ಯಾಟ್​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ

Iconic Cars: ಈ ಪೋಸ್ಟ್ ಅನ್ನು ​Xನಲ್ಲಿ ಹಂಚಿಕೊಳ್ಳಲಾಗಿದ್ದು ಇದೀಗ ಭಾರೀ ವೈರಲ್ ಆಗುತ್ತಿದೆ. ಬ್ಯಾಟ್​​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಬೆಂಗಳೂರಿನ ಇಂದಿರಾನಗರದಲ್ಲಿರುವ ಕಾರ್ಪೋರೇಟ್ ಕಚೇರಿಯೊಂದರ ಗ್ಯಾರೇಜಿನಿಂದ ಹೊರಬರುವ ವಿಡಿಯೋ ಇದಾಗಿದೆ. ನೆಟ್ಟಿಗರು ಈ ಕಾರುಗಳನ್ನು ನೋಡಿ ಪ್ರಚಾರ ತಂತ್ರ ಜೋರಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಹಾಸ್ಯ ಮಾಡಿದ್ಧಾರೆ.

Viral Video: ಬೆಂಗಳೂರಿನಲ್ಲಿ ಬ್ಯಾಟ್​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ
ಬೆಂಗಳೂರಿನ ಇಂದಿರಾನಗರದ ರಸ್ತೆಯಲ್ಲಿ ಬಂಬಲ್​ ಬೀ, ಬ್ಯಾಟ್​ಮೊಬೈಲ್​, ಮಿಸ್ಟರಿ ಮಶೀನ್ ಕಾರುಗಳು
Follow us
ಶ್ರೀದೇವಿ ಕಳಸದ
|

Updated on:Sep 29, 2023 | 12:26 PM

Bengaluru: ಇದ್ದಕ್ಕಿದ್ದಂತೆ ನೀವು ಹೋಗುತ್ತಿರುವ ರಸ್ತೆಯಲ್ಲಿ ಬ್ಯಾಟ್‌ಮೊಬೈಲ್, ಮಿಸ್ಟರಿ ಮೆಷಿನ್, ಬಂಬಲ್​ಬೀ (Bumblebee) ಕಾಣಿಸಿಕೊಂಡರೆ ನಿಮಗೆ ಹೇಗೆನ್ನಿಸಬಹುದು? ಅದರಲ್ಲೂ ಬ್ಯಾಟ್​ಮ್ಯಾನ್​, ಸೂಪರ್​ಹೀರೋ ಅಭಿಮಾನಿಗಳಿಗಂತೂ ಪರಮಾಶ್ಚರ್ಯವೇ. ಇಂಥ ಪರಮಾಶ್ಚರ್ಯ ನಡೆದಿರುವುದು ಬೆಂಗಳೂರಿನ ಇಂದಿರಾನಗರದಲ್ಲಿ. ಇಲ್ಲಿಯ ಕಾರ್ಪೋರೇಟ್ ಆಫೀಸಿನ ಗ್ಯಾರೇಜಿನಿಂದ ಈ ವಾಹನಗಳು ಹಾದು ಹೋಗುವುದು ಮೊಬೈಲಿನಲ್ಲಿ ಸೆರೆಯಾಗಿದೆ. ನೆಟ್ಟಿಗರು ಸಿನಿಮೀಯ ರೀತಿಯ ಈ ಕಾರ್ ಪರೇಡ್ ಅನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಈ ಹೆಬ್ಬಾವುಗಳು ಸಬ್​ಸ್ಟೇಷನ್​ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ? 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಕ್ರೆಡ್’ ಕಟ್ಟಡದಲ್ಲಿರುವ ಫಿನ್‌ಟೆಕ್ ಎಂಬ ಜಾಹೀರಾತು ಕಂಪೆನಿಯ ಗ್ಯಾರೇಜಿನಿಂದ ಈ ಕಾರುಗಳು ಹೊರಬರುತ್ತಿವೆ. ಭವಿಷ್ಯದಲ್ಲಿ ಬರಲಿರುವ ಐಕಾನಿಕ್​ ಕಾರುಗಳ ಕಂಪೆನಿಯ ಪ್ರಚಾರ ಮತ್ತು ಅಭಿಯಾನದ ಭಾಗ ಇದಾಗಿರಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳ ಮೂಲಕ ಹಾಸ್ಯದ ಅಲೆಯನ್ನೇ ಎಬ್ಬಿಸಿದ್ದಾರೆ.

ಐಕಾನಿಕ್ ಕಾರುಗಳು ಇಲ್ಲಿವೆ

ಈತನಕ ಈ ವಿಡಿಯೋ ಅನ್ನು 1.7 ಮಿಲಿಯನ್​ ಜನರು ನೋಡಿದ್ದಾರೆ. 2004ರಲ್ಲಿ ಬಿಡುಗಡೆಯಾದ ‘ಟಾರ್ಝನ್  ದಿ ವಂಡರ್ ಕಾರ್’ ಸಿನೆಮಾ ನೆನಪಿಸಿಕೊಂಡಿದ್ಧಾರೆ ಒಬ್ಬರು. ನಾನು 10,000ನೆಯ ಲೈಕ್​ ಕೊಟ್ಟಿದ್ದೇನೆ ಈ ವಿಡಿಯೋಗೆ ಎಂದಿದ್ದಾರೆ ಇನ್ನೊಬ್ಬರು. ಬ್ಯಾಟ್​ಮೊಬೈಲ್​ನಿಂದ ಏನು ಪ್ರಯೋಜನ, ಬೆಂಗಳೂರು ವಿಮಾನ ನಿಲ್ಧಾಣಕ್ಕೆ ಹೋಗಲು 3 ಗಂಟೆಗಳು ಬೇಕು ಎಂದಿದ್ದಾರೆ ಮತ್ತೊಬ್ಬರು. ಎಡಿಟಿಂಗ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ನೋಯ್ಡಾ; ನಾಯಿಗೆ ಹೆದರಿ ಅಳುತ್ತಿದ್ದ ಮಗು; ಅದೇ ಲಿಫ್ಟನ್ನೇ ಬಳಸುತ್ತೇನೆಂದು ಜಗಳಕ್ಕಿಳಿದ ನಾಯಿ ಪೋಷಕ

ಎಷ್ಟೇ ತುಟ್ಟಿಯಾದ ಕಾರುಗಳಿದ್ದರೂ ಭಾರತದ ಗಲ್ಲಿಗಳಲ್ಲಿರುವ ನಾಯಿಗಳು ಇವುಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತವೆ ಎಂದಿದ್ದಾರೆ ಒಬ್ಬರು. ಕ್ರೆಡ್​ನ ಮಾರ್ಕೆಟಿಂಗ್​ ತಂತ್ರ ಭಾರೀ ಜೋರಾಗಿದೆ ಎಂದಿದ್ದಾರೆ ಇನ್ನೊಬ್ಬರು. ಬ್ಯಾಟ್​​ಮೊಬೈಲ್​ಗೆ ಬೆಂಗಳೂರಿನ ರಸ್ತೆಗಳು ಸರಿಹೊಂದಲಾರವು ಎಂದಿದ್ದಾರೆ ಮತ್ತೊಬ್ಬರು. ಮಾರ್ಕೆಟಿಂಗ್​ ಟೀಮ್​ನ ಐಡಿಯಾ ಮೆಚ್ಚುವಂಥದ್ದೇ! ಎಂದಿದ್ದಾರೆ ಮತ್ತೊಂದಿಷ್ಟು ಜನ. ಏನೇ ಆಗಲಿ ಈ ಕಾರುಗಳೆಲ್ಲವೂ ತುಂಬಾ ಇಂಟ್ರೆಸ್ಟಿಂಗ್ ಆಗಿವೆ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:25 pm, Fri, 29 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್