AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೋಯ್ಡಾ; ನಾಯಿಗೆ ಹೆದರಿ ಅಳುತ್ತಿದ್ದ ಮಗು; ಅದೇ ಲಿಫ್ಟನ್ನೇ ಬಳಸುತ್ತೇನೆಂದು ಜಗಳಕ್ಕಿಳಿದ ನಾಯಿ ಪೋಷಕ

Dog Owner : ಲಿಫ್ಟ್​ನಲ್ಲಿರುವ ಮಗು ನಾಯಿಗೆ ಹೆದರಿ ಜೋರಾಗಿ ಅಳುತ್ತಿದೆ. ಆದರೆ ನಾಯಿ ಪೋಷಕ ನಾಯಿಯೊಂದಿಗೆ ಅದೇ ಲಿಫ್ಟ್​ನಲ್ಲಿ ಹೋಗುತ್ತೇನೆಂದು ಹಠಕ್ಕೆ ಬಿದ್ದಿದ್ದಾನೆ. ಇವನನ್ನು ಭದ್ರತಾ ಸಿಬ್ಬಂದಿ ತಡೆಯಲೆತ್ನಿಸುತ್ತಿದ್ದಾನೆ. ಆದರೆ ನಾಯಿ ಪೋಷಕ ವಾದಕ್ಕೆ ಇಳಿದಿದ್ದಾನೆ. ಸ್ವಲ್ಪ ಕಾಯ್ದು ಖಾಲೀ ಲಿಫ್ಟಿನಲ್ಲಿ ಹೋಗಿದ್ದರೆ ಇವನ ಗಂಟೇನು ಹೋಗುತ್ತಿತ್ತು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Viral Video: ನೋಯ್ಡಾ; ನಾಯಿಗೆ ಹೆದರಿ ಅಳುತ್ತಿದ್ದ ಮಗು; ಅದೇ ಲಿಫ್ಟನ್ನೇ ಬಳಸುತ್ತೇನೆಂದು ಜಗಳಕ್ಕಿಳಿದ ನಾಯಿ ಪೋಷಕ
ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ನಾಯಿಯೊಂದಿಗೆ ಲಿಫ್ಟ್​ ಬಳಸುವ ಕುರಿತು ವಾಗ್ವಾದಕ್ಕಿಳಿದ ನಾಯಿ ಪೋಷಕ
ಶ್ರೀದೇವಿ ಕಳಸದ
|

Updated on:Sep 27, 2023 | 1:43 PM

Share

Noida: ವಸತಿ ಸಮುಚ್ಚಯಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಅಷ್ಟು ಸುಲಭವಲ್ಲ. ಆದರೂ ಕೆಲವರು  ಮುನ್ನುಗ್ಗುತ್ತಾರೆ. ಆದರೆ ಆ ಮುನ್ನುಗ್ಗುವಿಕೆ ಇತರರಿಗೆ ತೊಂದರೆಯುಂಟು ಮಾಡುತ್ತದೆ ಎಂಬ ಅರಿವು ಇರಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ.  ನೋಯ್ಡಾದ ವಸತಿ ಸಮುಚ್ಚಯವೊಂದರ ಲಿಫ್ಟ್​ ಮುಂದೆ ನಾಯಿಯ (Dog) ಪೋಷಕ ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಮಗುವೊಂದು ನಾಯಿಯನ್ನು ನೋಡಿ ಹೆದರಿ ಜೋರಾಗಿ ಅಳುತ್ತಿದ್ದರೂ ತನ್ನ ನಾಯಿಯೊಂದಿಗೆ ಅದೇ ಲಿಫ್ಟ್​ನಲ್ಲಿ ಹೋಗಬೇಕೆಂದು ಹಠಕ್ಕಿಳಿದಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಅದನ್ನು ತಡೆಯುತ್ತಿದ್ದಾನೆ. ಮಹಿಳೆಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ : Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗ್ರೇಟರ್ ನೋಯ್ಡಾ ವೆಸ್ಟ್ ಎಂಬ X ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಗೌರ್ ಸಿಟಿ 7ನೇ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಿಫ್ಟ್​ನಲ್ಲಿದ್ದ ಮಗುವೊಂದು ನಾಯಿಯನ್ನು ನೋಡಿ ಅಳುತ್ತಿತ್ತು. ನಾಯಿಗೆ ಮಾಸ್ಕ್​ ಹಾಕಿದ್ದರಿಂದ ತಾನು ನಾಯಿಯೊಂದಿಗೆ ಅದೇ ಲಿಫ್ಟ್​ನಲ್ಲಿ ಹೋಗುವೆ ಎಂದು ವಿತಂಡವಾದಕ್ಕೆ ಬಿದ್ದಿದ್ದಾನೆ ನಾಯಿ ಪೋಷಕ. ನೆಟ್ಟಿಗರು ಈ ವಿಡಿಯೋ ನೋಡಿ ಆ ನಾಯಿ ಪೋಷಕನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭದ್ರತಾ ಸಿಬ್ಬಂದಿಯೊಂದಿಗೆ ವಾದಕ್ಕಿಳಿದ ನಾಯಿ ಪೋಷಕ

ಆಗ ನಿವಾಸಿಯೊಬ್ಬರು ಮಧ್ಯಪ್ರವೇಶಿಸಿ ನಾಯಿಯ ಪೋಷಕನಿಗೆ ಮತ್ತೊಂದು ಲಿಫ್ಟ್​ ಬಳಸುವಂತೆ ಹೇಳಿದ್ದಾರೆ. ಆದರೂ ಜಗ್ಗದ ಆತ ತಾನು ಮಗುವಿದ್ದ ಲಿಫ್ಟ್​ನಲ್ಲಿಯೇ ಹೋಗುವುದು ಎಂದು ಪಟ್ಟು ಹಿಡಿದಿದ್ದಾನೆ. ಇವನ ವರ್ತನೆಗೆ ನಾಯಿಯೂ ಸುಮ್ಮನಾಗಿಬಿಟ್ಟಿದೆ. ಈ ವಿಡಿಯೋ ಅನ್ನು ಸೆ. 25ರಂದು ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 9 ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು

ಇಂಥದೆಲ್ಲವನ್ನೂ ನೋಡಿದಾಗ ಮಾನವೀಯತೆ ಪ್ರತೀದಿನವೂ ಅವಸಾನಗೊಳ್ಳುತ್ತಿದೆ ಎಂದೆನ್ನಿಸುತ್ತದೆ. ಮಗುವಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳದ ಮನುಷ್ಯರು ನಾಯಿಯನ್ನು ಪ್ರೀತಿಸಿ ಏನು ಪ್ರಯೋಜನ ಎಂದಿದ್ದಾರೆ ಒಬ್ಬರು. ಲಿಫ್ಟ್​ ಹಿಂದಿರುಗುವತನಕ ಕಾಯ್ದರೆ ಏನು ನಷ್ಟವಾಗುತ್ತಿತ್ತು ಅವನಿಗೆ ಎಂದು ಪ್ರಶ್ನಿಸಿದ್ದಾರೆ ಅನೇಕರು. ನಾನು ಗೌರ್​ ಸಿಟಿ 2ರಲ್ಲಿ ವಾಸವಾಗಿದ್ದೇನೆ. ಈತನಕ ಯಾವ ಶ್ವಾನಪ್ರೇಮಿಯೂ ಈ ರೀತಿ ನಡೆದುಕೊಂಡಿಲ್ಲ. ನಾಯಿಯನ್ನು ಸಾಕಿದವರೆಲ್ಲರೂ ವಿನಮ್ರರಾಗಿದ್ದಾರೆ. ಖಾಲೀ ಲಿಫ್ಟ್​ಗಾಗಿ ಅವರು ತಾಳ್ಮೆಯಿಂದ ಕಾಯುತ್ತಾರೆ ಎಂದಿದ್ಧಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:41 pm, Wed, 27 September 23

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ