Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ

Disability : ತನ್ನ ಕಿವುಡು ನಾಯಿಯೊಂದಿಗೆ ಈತ ಶಾಲೆ ಮತ್ತು ಇನ್ನಿತರೇ ಸ್ಥಳಗಳಿಗೆ ತೆರಳಿ ಅಂಗವೈಕಲ್ಯದ ಬಗ್ಗೆ ಅರಿವನ್ನು ಮೂಡಿಸುತ್ತಾನೆ. ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂಭಾಷಿಸುವ ರೀತಿ ನಿಜಕ್ಕೂ ಅಚ್ಚರಿಗೊಳಿಸುತ್ತದೆ ಜೊತೆಗೆ ಆಪ್ತವೂ ಎನ್ನಿಸುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆರಗಾಗುತ್ತಿದ್ದಾರೆ. ಇವರಿಬ್ಬರೂ ಇಂಥ ಒಳ್ಳೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಬಗ್ಗೆ ಶ್ಲಾಘಿಸುತ್ತಿದ್ಧಾರೆ.

Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ
ತನ್ನ ಕಿವುಡು ನಾಯಿ ಕೋಲ್​ನೊಂದಿಗೆ ಸಂಜ್ಞಾಭಾಷೆಯಲ್ಲಿ ತೊಡಗಿರುವ ಕ್ರಿಸ್ಟೋಫರ್
Follow us
ಶ್ರೀದೇವಿ ಕಳಸದ
|

Updated on: Sep 27, 2023 | 12:45 PM

Dog Love: ಈ ನಾಯಿಗೆ ಕಿವುಡುತನವಿದೆ. ಆದರೂ ಇದರ ಪೋಷಕ ಇದರೊಂದಿಗೆ ಸಂಭಾಷಿಸುತ್ತಾನೆ. ಅದನ್ನು ಅರ್ಥ ಮಾಡಿಕೊಂಡು ನಾಯಿ ಅವನಿಗೆ ಪ್ರತಿಕ್ರಿಯಿಸುತ್ತದೆ. ಅರೆ, ಇದು ಹೇಗೆ ಸಾಧ್ಯ? ಅಚ್ಚರಿಯಾಗುತ್ತಿದೆಯೇ? ಅದಕ್ಕೆ ಅವನು ಸಂಜ್ಞಾಭಾಷೆ ಕಲಿಸಿದ್ದಾನೆ (Sign Language). ತನ್ನೊಂದಿಗೆ ಶಾಲೆಗಳಿಗೆ ಮತ್ತು ಇನ್ನಿತರೇ ಸ್ಥಳಗಳಿಗೆ ಕರೆದೊಯ್ಯುತ್ತಾನೆ. ಅಲ್ಲಿ ಅಂಗವೈಕಲ್ಯದ (Disability) ಬಗ್ಗೆ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಅರಿವು ಮೂಡಿಸುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಾಲೆಯೊಂದಕ್ಕೆ ತನ್ನ ಪೋಷಕ ಕ್ರಿಸ್ಟೋಫರ್​ನೊಂದಿಗೆ ಕೋಲ್​ ಎಂಬ ಈ ನಾಯಿ ಶಾಲೆಯೊಂದಕ್ಕೆ ಹೋಗಿದೆ. ಮಗುವಿನೊಂದಿಗೆ ಈ ಮೂವರೂ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಈ ದೃಶ್ಯಗಳನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.

ಇದನ್ನೂ ಓದಿ : Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನೀವು ನಿಮ್ಮಲ್ಲಿ ನಂಬಿಕೆ ಇಟ್ಟರೆ ಏನು ಬೇಕಾದರೂ ಸಾಧ್ಯ ಎಂದು ಮಕ್ಕಳನ್ನು ಪ್ರೇರೇಪಿಸುವುದನ್ನು ನಾವು ಮಾಡುತ್ತಿದ್ದೇವೆ. ಅಂಗವೈಕಲ್ಯದ ಬಗ್ಗೆ ಪ್ರಪಂಚದ ಆಲೋಚನಾ ವಿಧಾನವನ್ನು ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಸಾಮ್ಯತೆಗಳನ್ನು ಪರಸ್ಪರ ಹಂಚಿಕೊಂಡು ನಮ್ಮನ್ನು ನಾವು ಅನನ್ಯವಾಗಿಸಿಕೊಳ್ಳೋಣ’ ಎಂಬ ಕ್ಯಾಪ್ಷನ್​ವುಳ್ಳ ಈ ವಿಡಿಯೋ ಅನ್ನು ಕೋಲ್​ಗೆ ಮೀಸಲಾಗಿರುವ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

ಕೋಲ್​ನೊಂದಿಗೆ ಸಂಜ್ಞಾಭಾಷೆಯಲ್ಲಿ ತೊಡಗಿರುವ ಕ್ರಿಸ್ಟೋಫರ್

ಮೂರು ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 8 ಲಕ್ಷ ಜನರು ನೋಡಿದ್ದಾರೆ. ಸುಮಾರು 1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಇದು ತುಂಬಾ ಸ್ಫೂರ್ತಿದಾಯಕ ವಿಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ. ಕೋಲ್​ ನೆಲಕ್ಕೆ ಉರುಳಿದಾಗ ಅವನ ಮುಖಭಾವ ಗಮನಿಸಿದಿರಾ ಎಂದು ಕೆಲವರು ಕೇಳಿದ್ಧಾರೆ. ನಿಮ್ಮ ಕಿಸ್​ ಕೋಲ್​​ ಬೋಲ್ಡ್​ ಓವರ್​ ಎಂದಿದ್ದಾರೆ ಒಬ್ಬರು. ಮಕ್ಕಳಿಂದ ಆಹಾ ಓಹೋ ಎಂಬ ಉದ್ಗಾರ ಕೇಳುವುದು ಎಂಥ ಅದ್ಭುತ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಬಂಟಿ ಔರ್ ಬಬ್ಲಿ; ಸಹೋದರನೊಂದಿಗೆ ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ವಧು

ಪ್ರೀತಿ ಮತ್ತು ಶಿಕ್ಷಣ ಈ ಎರಡನ್ನೂ ಕೇಂದ್ರೀಕರಿಸಿ ನೀವು ತೊಡಗಿಕೊಂಡಿರುವ ಈ ಪ್ರಯಾಣ ಬಹಳ ಚೆನ್ನಾಗಿದೆ, ಒಳ್ಳೆಯದಾಗಲಿ ನಿಮ್ಮಿಬ್ಬರಿಗೂ ಎಂದು ಅನೇಕರು ಹಾರೈಸಿದ್ದಾರೆ. ಇದು ತುಂಬಾ ಅಮೂಲ್ಯವಾದ ವಿಡಿಯೋ. ಇಂಥವರ ಸಂತತಿ ಹೆಚ್ಚಲಿ ಎಂದು ಹೇಳಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ