Viral Video: ಬಂಟಿ ಔರ್ ಬಬ್ಲಿ; ಸಹೋದರನೊಂದಿಗೆ ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ವಧು

Brother Sister Love : ಬಾಲ್ಯದಲ್ಲಿ ತನ್ನ ತಮ್ಮನೊಂದಿಗೆ ಮಾಡಿದ ಬಾಲಿವುಡ್​ ಡ್ಯಾನ್ಸ್​ನ್ನೇ ವಧು ತನ್ನ ಮದುವೆಯಲ್ಲಿ ಮತ್ತೆ ಮಾಡಿದ್ದಾಳೆ. ಮಿಲಿಯನ್​ಗಟ್ಟಲೆ ಜನರು ಅಕ್ಕತಮ್ಮನ ಈ ಬಾಂಧವ್ಯ ನೋಡಿ ಖುಷಿಯಿಂದ ಕಣ್ಣೀರಾಗುತ್ತಿದ್ದಾರೆ. ತಮ್ಮತಮ್ಮ ಮದುವೆಯಲ್ಲಿಯೂ ಅಣ್ಣ, ತಮ್ಮ, ಅಕ್ಕ, ತಂಗಿಯೊಂದಿಗೆ ಹೀಗೆ ನರ್ತಿಸಬೇಕು ಎಂದು ಹೇಳುತ್ತಿದ್ದಾರೆ. ನೋಡಿ ನೀವೂ ಈ ವಿಡಿಯೋ

Viral Video: ಬಂಟಿ ಔರ್ ಬಬ್ಲಿ; ಸಹೋದರನೊಂದಿಗೆ ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ವಧು
ಅಣ್ಣನೊಂದಿಗೆ ಬಾಲ್ಯದಲ್ಲಿ ಮಾಡಿದ ಡ್ಯಾನ್ಸ್​ ಅನ್ನು ಮತ್ತೆ ತನ್ನ ಮದುವೆಯಲ್ಲಿ ಡ್ಯಾನ್ಸ್ ಮಾಡಿದಾಗ.
Follow us
ಶ್ರೀದೇವಿ ಕಳಸದ
|

Updated on: Sep 27, 2023 | 10:43 AM

Dance: ಅಕ್ಕ ತಮ್ಮ, ಅಣ್ಣ ತಂಗಿಯರ ಬಾಲ್ಯದ ನೆನಪುಗಳು (Childhood Memories) ಪರಸ್ಪರರ ಜೀವನವನ್ನು ಹಸಿರಾಗಿಟ್ಟಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧುವೊಬ್ಬಳು ತನ್ನ ಸಹೋದರನೊಂದಿಗೆ ಬಾಲ್ಯದಲ್ಲಿ ಮಾಡಿದ ಸಿನೆಮಾ ಹಾಡಿಗೆ ಇದೀಗ ಮತ್ತೆ ಡ್ಯಾನ್ಸ್ ಮಾಡಿದ್ದಾಳೆ. 2005ರಲ್ಲಿ ಬಿಡುಗಡೆಯಾದ ಬಂಟಿ ಔರ್ ಬಬ್ಲಿ ಸಿನೆಮಾದಿಂದ ನಾಚ್ ಬಲಿಯೇ ಹಾಡಿಗೆ ಇವರಿಬ್ಬರೂ ನರ್ತಿಸಿದ್ದಾರೆ. ದಿ ವೆಡ್ಡಿಂಗ್ ಶೋಬಿಝ್​ ಎಂಬ ವೆಡ್ಡಿಂಗ್ ಕೊರಿಯೋಗ್ರಫಿ ಏಜನ್ಸಿ ತನ್ನ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಿದೆ. ಈತನ 1.2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಈಗಿನ ನಟಿಯರಲ್ಲಿ ಒಬ್ಬರಾದರೂ ಮಾಧುರಿಯಂತೆ ಇಂಥ ಪ್ರಸ್ತುತಿ ನೀಡಬಲ್ಲರೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೂರು ದಿನಗಳ ಹಿಂದೆ ಈ ಪೋಸ್ಟ್ ಮಾಡಲಾಗಿದ್ದು ಇದೀಗ ಸುಮಾರು 9 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ನೀಲಿ ಲೆಹಂಗಾ ಧರಿಸಿದ ವಧು ತನ್ನ ಸಹೋದರನೊಂದಿಗೆ ಡ್ಯಾನ್ಸ್ ಮಾಡುವುದರೊಂದಿಗೆ ಈ ಕ್ಲಿಪ್​ ತೆರೆದುಕೊಳ್ಳುತ್ತದೆ.

ಅಣ್ಣತಂಗಿಯ ನೃತ್ಯ

ನಿಮ್ಮಿಬ್ಬರ ಅನುಬಂಧ ಈ ಹಾಡಿನಿಂದ ಸ್ಪಷ್ಟವಾಗುತ್ತದೆ, ಮುಂದೆಯೂ ನೀವು ಹೀಗೆಯೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ ಒಬ್ಬರು. ನಾನು ನನ್ನ ತಂಗಿಯು ನನ್ನ ಅಣ್ಣನ ಮದುವೆಯಲ್ಲಿ ಹೀಗೆಯೇ ನಮ್ಮಿಬ್ಬರ ಇಷ್ಟದ ಹಾಡಿಗೆ ನರ್ತಿಸಿದ್ದೆವು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?

ಈ ನೃತ್ಯ ನೋಡಿ ಸಾರ್ಥಕ ಭಾವ ಉಕ್ಕಿತು. ಕಣ್ಣೀರಿಳಿಯುತ್ತಿದೆ ನಿಮ್ಮ ಈ ನೃತ್ಯವನ್ನು ನೋಡಿ ಎಂದಿದ್ದಾರೆ ಒಬ್ಬರು. ಅದೆಷ್ಟು ಸಲ ನೋಡಿದೆನೋ ಗೊತ್ತಿಲ್ಲ ಈ ವಿಡಿಯೋ ಎಂದಿದ್ದಾರೆ ಇನ್ನೊಬ್ಬರು. ಈ ನೃತ್ಯ ನೋಡಿ ಮೈನವಿರೇಳುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನನ್ನ ಅಣ್ಣ ನನ್ನೊಂದಿಗೆ ನನ್ನ ಮದುವೆಯಲ್ಲಿ ಹೀಗೆಯೇ ಡ್ಯಾನ್ಸ್ ಮಾಡಬೇಕು ಎಂದು ಬಯಸುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ