Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?

Love : ಮದುವೆಗೆ ಒಂದು ತಿಂಗಳಿರುವಾಗ ನನ್ನ ಹುಡುಗ ತೀವ್ರ ರಸ್ತೆ ಅಪಘಾತಕ್ಕೆ ಒಳಗಾದ. ವೈದ್ಯರೂ ಕೈಚೆಲ್ಲಿದರು. ಮನೆಯವರೆಲ್ಲರೂ ಈ ಮದುವೆ ಬೇಡವೆಂದರು. ಆದರೆ ಎಂಟು ವರ್ಷದಿಂದ ಪ್ರೀತಿಸಿದ ನನ್ನ ಹುಡುಗನನ್ನು ನಾನು ಹೇಗೆ ಬಿಟ್ಟುಕೊಡುವುದು? ಅಂತೂ ಮೂರು ತಿಂಗಳುಗಳ ನಂತರ ಕೋಮಾದಿಂದ ಹೊರಬಂದ. ನಮ್ಮ ಮದುವೆಯಾಗಿ ಒಂದು ವರ್ಷವಾಯಿತು.

Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?
ಹಿತೇನ್ ಮತ್ತು ವ್ರೀನಿ ಖನ್ನಾ
Follow us
ಶ್ರೀದೇವಿ ಕಳಸದ
|

Updated on: Sep 26, 2023 | 3:31 PM

Love Marriage: ವ್ರೀನಿ ಖನ್ನಾ ಮತ್ತು ಹಿತೇನ್​ ಎಂಟು ವರ್ಷ ಪ್ರೀತಿಸಿದ ನಂತರ ಮದುವೆ ತಯಾರಿ ನಡೆಸಿದರು. ಮದುವೆ ಇನ್ನೇನು ಒಂದು ತಿಂಗಳಿದೆ ಎನ್ನುವಾಗ ಹಿತೇನ್​ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ. ಮೆದುಳು  ತೀವ್ರವಾಗಿ ಗಾಯಗೊಂಡಿದ್ದರಿಂದ ಕೋಮಾಗೆ (Coma) ಜಾರಿಬಿಟ್ಟ. ವೈದ್ಯರು ಬದುಕುಳಿಯುವುದು ಕಷ್ಟ ಎಂದರು. ಆದರೂ ಅದೃಷ್ಟವಶಾತ್ ವೈದ್ಯೋಪಚಾರ ಮತ್ತು ವ್ರೀನಿಯ ಸತತ ಪ್ರೀತಿ, ಆರೈಕೆಯಲ್ಲಿ 3 ತಿಂಗಳುಗಳ ನಂತರ ಕೋಮಾದಿಂದ ಹೊರಬಂದ. ಈ ವೇಳೆಗೆ ಬರೋಬ್ಬರಿ 30 ಕಿ. ಗ್ರಾಂ ತೂಕ ಕಳೆದುಕೊಂಡಿದ್ದ. ಆದರೆ ಇವನನ್ನೇ ಮದುವೆಯಾಗುವುದು ಎಂದು ವ್ರೀನಿ ಹಠ ತೊಟ್ಟಿದ್ದಳು. ಇವನೊಂದಿಗೆ ಮದುವೆ ಬೇಡ ಎಂದು ಆಕೆಯ ಮನೆಯವರೆಲ್ಲ ಬುದ್ಧಿ ಹೇಳಿದರು. ನಂತರ 2022ರ ಜು. 6ರಂದು ಇವರಿಬ್ಬರ ಮದುವೆ ನಡೆಯಿತು.

ಇದನ್ನೂ ಓದಿ : Viral Video: ವೈರಲ್ ಆಗುತ್ತಿದೆ ಈ ಡ್ರೈಫ್ರೂಟ್ಸ್​ ಪಿಝಾ; ಇಟಲಿಗರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದ ನೆಟ್ಟಿಗರು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾಲ್ಕು ಗಂಟೆಗಳ ಹಿಂದೆಯಷ್ಟೇ officialpeopleofindia ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ ಸುಮಾರು 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವ್ರೀನಿ ಮತ್ತು ಹಿತೇನ್​ ದಂಪತಿಯನ್ನು ಅಭಿನಂದಿಸಿದ್ದಾರೆ. ವ್ರಿನಿಯ ತಾಳ್ಮೆ ಮತ್ತು ಪ್ರೀತಿಯನ್ನು ಶ್ಲಾಘಿಸಿದ್ದಾರೆ.

ವ್ರೀನಿ ಹಿತೇನ್ ಪಯಣ

ತನ್ನ ಹುಡುಗ/ಗಂಡನಿಗಾಗಿ ಹೆಣ್ಣುಮಕ್ಕಳು ಯಾವಾಗಲೂ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದಿದ್ದಾರೆ ಒಬ್ಬರು.  ಜಗತ್ತಿನಲ್ಲಿ ಪ್ರೀತಿಯೇ ಎಲ್ಲದಕ್ಕಿಂತ ದೊಡ್ಡ ಶಕ್ತಿ. ವೈದ್ಯರೂ ಕೈಚೆಲ್ಲಿದಾಗ ನೀವು ಅವರನ್ನು ಬದುಕಿಸಿಕೊಂಡಿರಿ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ನಾನು ಅಳುತ್ತಿದ್ದೇನೆ, ಸ್ವಾರ್ಥ ಬಯಸುವ ಅನೇಕರನ್ನು ನೋಡಿದ್ದೇನೆ. ಆದರೆ ನಿಮ್ಮಂಥ ಹೆಣ್ಣುಮಗಳು ನಿಜಕ್ಕೂ ಅಪರೂಪ, ನಿಮಗಿಬ್ಬರಿಗೂ ಒಳಿತಾಗಲಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಬರೀಗೈಯಿಂದ ಹಾವು ಹಿಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

ನಿಮ್ಮ ಜಾಗದಲ್ಲಿ ನನ್ನನ್ನು ನಾನು ನಿಲ್ಲಿಸಿಕೊಂಡು ನೋಡಿದೆ, ನನಗರಿವಿಲ್ಲದೇ ನನ್ನ ಕಣ್ಣಿಂದ ನೀರು ಇಳಿಯುತ್ತಿವೆ ಎಂದಿದ್ಧಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ಮೈನವಿರೆದ್ದಿತು, ತುಂಬಾ ಅಪರೂಪದ ಜೋಡಿ ನಿಮ್ಮದು, ನಿಮ್ಮ ಆರೋಗ್ಯ ಇನ್ನಷ್ಟು ಸುಧಾರಿಸಲಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ