AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೈರಲ್ ಆಗುತ್ತಿದೆ ಈ ಡ್ರೈಫ್ರೂಟ್ಸ್​ ಪಿಝಾ; ಇಟಲಿಗರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದ ನೆಟ್ಟಿಗರು

Food : ಯಾಕೆ ಯಾವಾಗಲೂ ಬೀದಿಬದಿಯ ವ್ಯಾಪಾರಿಯನ್ನು ಬಯ್ಯುತ್ತೀರಿ? ತಿನ್ನುವವರಿಲ್ಲದೆಯೇ ಅವರು ಈ ಪ್ರಯೋಗವನ್ನು ಮಾಡುತ್ತಾರೆಯೇ? ಎಂದು ಒಬ್ಬರು ಈ ವಿಡಿಯೋದಡಿ ಕೇಳಿದ್ದಾರೆ. ಇಟಲಿಯವರು ಈ ವಿಡಿಯೋ ನೋಡಿದರೆ ನಮಗೆ ವೀಸಾ ಕೊಡುವುದೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಈ ಡ್ರೈ ಫ್ರೂಟ್ಸ್​ ಪಿಝಾದ ವಿಡಿಯೋ ನೋಡಿದ ನೀವು ಏನೇನ್ನುತ್ತೀರಿ?

Viral Video: ವೈರಲ್ ಆಗುತ್ತಿದೆ ಈ ಡ್ರೈಫ್ರೂಟ್ಸ್​ ಪಿಝಾ; ಇಟಲಿಗರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದ ನೆಟ್ಟಿಗರು
ಡ್ರೈ ಫ್ರೂಟ್ಸ್​ ಪಿಝಾ
Follow us
ಶ್ರೀದೇವಿ ಕಳಸದ
|

Updated on: Sep 26, 2023 | 1:58 PM

Pizza : ವಿಚಿತ್ರ ಪಾಕಪ್ರಯೋಗಗಳು ದಿನವೂ ನಡೆಯುತ್ತಲೇ ಇರುತ್ತವೆ. ವೈರಲ್ ಆಗುವ ಇಂಥ ವಿಡಿಯೋಗಳನ್ನು ನೋಡಿದ ನೆಟ್​ಮಂದಿ ಬಯ್ಯುತ್ತಲೇ ಇರುತ್ತಾರೆ. ಅಡುಗೆಯ ಹದವನ್ನು ಕೆಡಿಸುವುದಲ್ಲದೇ ಜನರ ಆರೋಗ್ಯವನ್ನೂ ಇವು ಕೆಡಿಸುತ್ತವೆ, ಯಾಕಾದರೂ ಇಂಥ ಪ್ರಯೋಗಗಳನ್ನು ಮಾಡುತ್ತಾರೋ. ಫುಡ್ ವ್ಲಾಗರ್​ಗಳಿಗೂ ಕೆಲಸವಿಲ್ಲ ಇನ್ನು ಬೀದಿಬದಿಯ ಇಂಥ ವ್ಯಾಪಾರಿಗಳೂ ಪ್ರಚಾರಕ್ಕಾಗಿ ಏನನ್ನೂ ಮಾಡುತ್ತಾರೆ ಎಂದು ಪೇಚಾಡುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಡ್ರೈಫ್ರೂಟ್ಸ್​ ಪಿಝಾ (Dry fruits Pizza) ಮಾಡಿದ್ದಾರೆ ಬೀದಿಬದಿಯ ವ್ಯಾಪಾರಿಯೊಬ್ಬರು.

ಇದನ್ನೂ ಓದಿ : Viral Video: ಬರೀಗೈಯಿಂದ ಹಾವು ಹಿಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬ್ರೆಡ್​ ಮೇಲೆ ಟೊಮ್ಯಾಟೋ ಸಾಸ್​ ಹರಡಿ ನಂತರ ಅದರ ಮೇಲೆ ಗೋಡಂಬಿ, ಒಣದ್ರಾಕ್ಷಿ ಮತ್ತು ಚೀಸ್​ ಹಾಕಲಾಗುತ್ತದೆ. ನಂತರ ಓವನ್​ನಲ್ಲಿತ್ತು ಅದನ್ನು ಬೇಯಿಸಿ ಅದರ ಮೇಲೆ ಚೀಝ್​ ಮತ್ತು ದ್ರಾಕ್ಷಿಗಳನ್ನು ಹಾಕಿ ಅಲಂಕರಿಸಲಾಗುತ್ತದೆ. ಈ ವಿಡಿಯೋ ಅನ್ನು ಉರ್ಮಿಳ್​ ಪಟೇಲ್ ಎನ್ನುವವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಹಮದಾಬಾದ್‌ನ ಮಾಣೆಕ್ ಚೌಕ್‌ನಲ್ಲಿ ತಯಾರಾದ ಡ್ರೈಫ್ರೂಟ್​ ಪಿಝಾ

ಈ ಪೋಸ್ಟ್ ಅನ್ನು ಆ. 19 ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 2 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. ಅನೇಕರು ಇದನ್ನು ನೋಡಿ ಖಂಡಿತ ನಾನಿದನ್ನು ತಿನ್ನುವುದಿಲ್ಲ ಎಂದಿದ್ದಾರೆ. ಇಟಾಲಿಯನ್ನರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಹೀಗೆ ಮಾಡುವ ಅಗತ್ಯವಾದರೂ ಏನು ಎಂದು ಕೇಳಿದ್ದಾರೆ ಇನ್ನೊಬ್ಬರು. ‘

ಇದನ್ನೂ ಓದಿ : Viral Video: ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದ ರಷ್ಯಾದ ಮಹಿಳೆ; ಸಹಾನುಭೂತಿಗೆ ಮನಸೋತ ನೆಟ್ಟಿಗರು 

ಇದನ್ನು ನೋಡಿದ ಇಟಲಿಗರು ನಮಗೆ ವೀಸಾ ಕೊಡುವುದಿಲ್ಲ ಎಂದಿದ್ದಾರೆ ಒಬ್ಬರು. ಇವನನ್ನು ಯಾಕೆ ಬಯ್ಯುತ್ತಿದ್ದೀರಿ? ಅವನ ಅಂಗಡಿಯಲ್ಲಿ ಈರುಳ್ಳಿ ಟೊಮ್ಯಾಟೋ ಕೂಡ ಇದೆ. ಜನ ಏನು ಕೇಳುತ್ತಾರೋ ಅದನ್ನು ಮಾಡಿಕೊಡುತ್ತಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅನ್​ಲೈಕ್​ ಬಟನ್​ ಎಲ್ಲಿದೆ ಎಂದು ಹಲವಾರು ಜರನು ಕೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್