Viral Video: ಸೂರತ್ನ ಬೀದಿಯಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು; ಆರಿಸಿಕೊಳ್ಳಲು ಹೆಣಗಾಡುತ್ತಿರುವ ಜನ
Surat: ವರಾಛಾದ ಬೀದಿಯಲ್ಲಿ ವಜ್ರಗಳು ಬಿದ್ದಿವೆಯಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಜನರು ತಂಡತಂಡವಾಗಿ ಈ ಬೀದಿಗೆ ಓಡಿ ಬಂದರು. ರಸ್ತೆ ಮೇಲೆ ಬಿದ್ದ ವಜ್ರಗಳನ್ನು ಹೆಕ್ಕಿಕೊಳ್ಳಲು ಪ್ರಾರಂಭಿಸಿದರು. ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗುಜರಾತದ ಜನರು ಬುದ್ಧಿವಂತರು ಎಂದಿದ್ದಾರೆ.
Gujarat: ಗುಜರಾತ್ನ ಸೂರತ್ನಲ್ಲಿರುವ ವರಾಛಾ (Varaccha) ವಜ್ರದ ವ್ಯಾಪಾರಕ್ಕೆ ಪ್ರಸಿದ್ಧವಾದ ಜಾಗ. ಇಲ್ಲಿಯ ವಜ್ರಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದೆ. ಹೀಗಿರುವಾಗ ಇತ್ತೀಚೆಗೆ ವಜ್ರದ ವ್ಯಾಪಾರಿಯೊಬ್ಬರ ಕೋಟ್ಯಂತರ ಮೌಲ್ಯದ ವಜ್ರಗಳು ಅಕಸ್ಮಾತ್ ಆಗಿ ರಸ್ತೆಗೆ ಬಿದ್ದವು. ಈ ವಿಷಯ ಕಾಳ್ಗಿಚ್ಚಿನಂತೆ ಹರಡಿತು. ವಜ್ರಗಳು ಬೀದಿಗೆ ಬಿದ್ದಿವೆ ಎಂದರೆ ಯಾರಿಗೆ ತಾನೆ ಆಸೆಯಾಗದು? ತಂಡೋಪತಂಡವಾಗಿ ಓಡಿಬಂದ ಜನರು ಆ ಅಂಗಡಿಯೆದುರಿನ ರಸ್ತೆಯಲ್ಲಿ ವಜ್ರಗಳನ್ನು ಆಯ್ದುಕೊಳ್ಳಲು ಮುಗಿಬಿದ್ದರು. ವರಾಛಾದ ರಸ್ತೆಯಲ್ಲಿ ಜನರು ಕಷ್ಟಪಟ್ಟು ವಜ್ರಗಳನ್ನು ಹುಡುಕುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ನಾನಾರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದ ರಷ್ಯಾದ ಮಹಿಳೆ; ಸಹಾನುಭೂತಿಗೆ ಮನಸೋತ ನೆಟ್ಟಿಗರು
ಅಹಮದಾಬಾದ್ ಮಿರರ್ ವರದಿಯ ಪ್ರಕಾರ, ವರಾಛಾದ ಮಾರ್ಕೆಟ್ ರಸ್ತೆಯಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ವಜ್ರದ ಬಂಡಲ್ ಬಿದ್ದಿದೆ ಎಂಬ ಸಂದೇಶ ಸೂರತ್‌ನಲ್ಲಿ ಹರಡುತ್ತಿದ್ದಂತೆ ಜನರು ಅಲ್ಲಿಗೆ ದೌಡಾಯಿಸಿದರು. ಕೆಲವರು ಕಣ್ಣಲ್ಲಿ ಕಣ್ಣಿಟ್ಟು ವಜ್ರಗಳನ್ನು ಹುಡುಕಲು ತೊಡಗಿದರು. ಇನ್ನೂ ಕೆಲವರು ರಸ್ತೆಯ ಕಸವನ್ನು ಸಂಗ್ರಹಿಸಿ ಅದರಲ್ಲಿ ವಜ್ರಗಳನ್ನು ಹುಡುಕಲು ಪ್ರಯತ್ನಿಸಿದರು.
ಸೂರತ್ನ ಬೀದಿಯಲ್ಲಿ ವಜ್ರಗಳು!
#સુરત વરાછા મિનિબજાર રાજહંસ ટાવર પાસે હીરા ઢોળાયાની વાત થતા હીરા શોધવા લોકોની ભીડ થઈ. પ્રાથમિક સૂત્રો દ્વારા જાણવા મળેલ છે કે આ હીરા CVD અથવા અમેરિકન ડાયમંડ છે..#Diamond #Surat #Gujarat pic.twitter.com/WdQwbBSarl
— 𝑲𝒂𝒍𝒑𝒆𝒔𝒉 𝑩 𝑷𝒓𝒂𝒋𝒂𝒑𝒂𝒕𝒊 🇮🇳🚩 (@KalpeshPraj80) September 24, 2023
ಕೆಲವರು ವಜ್ರಗಳನ್ನು ಹೆಕ್ಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಅವು ಅಮೆರಿಕನ್ ವಜ್ರಗಳು ಅಂದರೆ ಕೃತಕ ವಜ್ರಗಳು. ಇವುಗಳನ್ನು ಆಭರಣ (ಇಮಿಟೇಟೆಡ್) ಅಥವಾ ಸೀರೆ ಕಸೂತಿ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ. ಈ ಘಟನೆಯನ್ನು ಗಮನಿಸಿದರೆ, ಯಾರೋ ಬೇಕೆಂದೇ ಚೇಷ್ಟೆ ಮಾಡಿರಬಹುದು ಎಂದೆನ್ನಿಸುತ್ತದೆ.
ಇದನ್ನೂ ಓದಿ : Viral Video: ರೀಲ್ಮಂದಿ; ಮೆಟ್ರೋದಲ್ಲಿ ಲಗಾಟಿ ಹೊಡಿಯಲು ಹೋಗಿ ಏನಾಯಿತು ನೋಡಿ
ಗುಜರಾತಿಗಳು ತಮ್ಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಬಹಳ ಬುದ್ಧಿವಂತರು ಎಂದು ವ್ಯಂಗ್ಯ ಮಾಡಿದ್ದಾರೆ. ಏನೇ ಆಗಲಿ ಒಟ್ಟಿನಲ್ಲಿ ಜನ ವಜ್ರ, ಬಂಗಾರ, ರತ್ನ, ಹವಳವೆಂದರೆ ಅದು ನಕಲಿಯೋ ಅಸಲಿಯೋ ಎಂದು ಯೋಚಿಸದೇ ಹೀಗೆ ಮುಗಿಬೀಳುತ್ತಾರೆ ಎನ್ನುವುದು ಖಾತ್ರಿಯಾಯಿತು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ