Viral Video: ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದ ರಷ್ಯಾದ ಮಹಿಳೆ; ಸಹಾನುಭೂತಿಗೆ ಮನಸೋತ ನೆಟ್ಟಿಗರು

Black Panther : ಹಕ್ಕಿಗಳ ಮರಿಯೋ, ಪ್ರಾಣಿಗಳ ಮರಿಯೋ ಯಾವುದೋ ಕಾರಣಕ್ಕೆ ರಸ್ತೆಯಲ್ಲಿ ಅನಾಥವಾಗಿ ಬಿದ್ದಿರುತ್ತವೆ. ಕರುಣೆಯುಳ್ಳ ಯಾರೂ ಅವುಗಳನ್ನೆತ್ತಿಕೊಂಡು ಬಂದು ಸಾಕುತ್ತಾರೆ ಅಲ್ಲವೆ? ಹೀಗೆಯೇ ರಷ್ಯಾದ ಮಹಿಳೆಗೆ ದಾರಿಯಲ್ಲಿ ಕಪ್ಪುಮರಿಯೊಂದು ಸಿಕ್ಕಿದೆ. ಬೆಕ್ಕಿನಮರಿಯೆಂದು ಆಕೆಗೆ ಕರೆತಂದು ಸಾಕಿದ್ದಾಳೆ. ಬೆಳೆಯುತ್ತ ಹೋದಂತೆ ಅದು ಕಪ್ಪುಚಿರತೆ ಎಂದು ಗೊತ್ತಾಗಿದೆ!

Viral Video: ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದ ರಷ್ಯಾದ ಮಹಿಳೆ; ಸಹಾನುಭೂತಿಗೆ ಮನಸೋತ ನೆಟ್ಟಿಗರು
ಕರಿಚಿರತೆ ಲೂನಾ ತನ್ನ ಪೋಷಕಿಯ ಜೊತೆ
Follow us
ಶ್ರೀದೇವಿ ಕಳಸದ
|

Updated on:Sep 26, 2023 | 10:26 AM

Russia: ಈ ಮರಿಯ ಅಮ್ಮ ಇದನ್ನು ಹೀಗೆ ಯಾಕೆ ಬಿಟ್ಟು ಹೋದಳೋ ಗೊತ್ತಿಲ್ಲ. ಕಣ್ಣುತೆರೆಯದ ಹಸುಗೂಸು ಮಣ್ಣಮೆತ್ತಿಕೊಂಡು ನಡುದಾರಿಯಲ್ಲಿ ಬಿದ್ದಿದೆ. ಈ ಮಹಿಳೆ ಬೆಕ್ಕಿನಮರಿಯೆಂದು ಅದನ್ನೆತ್ತಿಕೊಂಡು ಮನೆಗೆ ಬಂದಿದ್ದಾಳೆ. ಮನೆಯ ನಾಯಿ ಕೂಡ ಈ ಅನಾಥ ಮರಿಯನ್ನು ತನ್ನದೇ ಮರಿಯೆಂಬಂತೆ ಪೋಷಿಸಿದೆ. ಬೆಳೆಯುತ್ತ ಹೋದಂತೆ ಅದು ಬೆಕ್ಕಲ್ಲ ಕರಿಚಿರತೆ (Black Panther) ಮರಿ ಎನ್ನುವುದು ಆಕೆಗೆ ಅರಿವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್​​ಮಂದಿ ಅಬ್ಬಬ್ಬಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ರಷ್ಯಾದ ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ಅಚ್ಚರಿಗೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ರೀಲ್​ಮಂದಿ; ಮೆಟ್ರೋದಲ್ಲಿ ಲಗಾಟಿ ಹೊಡಿಯಲು ಹೋಗಿ ಏನಾಯಿತು ನೋಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

@factmayor ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಇದನ್ನು ಪೋಸ್ಟ್ ಮಾಡಿದ್ದಾರೆ. ಮೂಲದಲ್ಲಿ ಇದನ್ನು @luna_the_pantera ಎಂಬ ಖಾತೆಯಿಂದ ಅಪ್​ಲೋಡ್ ಮಾಡಲಾಗಿದೆ. ಸೆ. 21 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್​ಗಿಂತ ಹೆಚ್ಚು ಜನರು ನೋಡಿದ್ದಾರೆ. ಲೂನಾ, ವೆಂಝಾ ಮತ್ತು ನೀವು ಮೂವರು ಅದೃಷ್ಟವಂತರು, ಒಟ್ಟಿಗೇ ಬದುಕುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ನೆಟ್ಟಿಗರು.

ಲೂನಾ ಪ್ರಯಾಣ

View this post on Instagram

A post shared by @factmayor

ನಿಮ್ಮ ಮನೆಗೆ ಬಂದ ಯಾರಿಗೇ ಆಗಲಿ ಮೊದಲಿಗೆ ಇದೊಂದು ಕಾವಲುನಾಯಿ ಎನ್ನಿಸಬಹುದು. ಹತ್ತಿರ ಹೋದಾಗಲೇ ಇದೊಂದು ಕರಿಚಿರತೆ ಎಂಬ ಅರಿವಾಗುವುದು ಎಂದಿದ್ದಾರೆ ಒಬ್ಬರು. ನಿಜಕ್ಕೂ ಇದು ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಗುವಿನ ಜೀವ ಉಳಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ ಹಲವಾರು ಜನರು. ಈ ಬಾಂಧವ್ಯ ನಿಜಕ್ಕೂ ಅದ್ಭುತವಾಗಿದೆ, ನೀವೆಲ್ಲರೂ ಒಟ್ಟಿಗೇ ಇರುವುದು ಇನ್ನೂ ಸಂತೋಷ ಎಂದಿದ್ದಾರೆ ಒಂದಿಷ್ಟು ಜನ.

ವೆಂಝಾ ಮತ್ತು ಲೂನಾ

View this post on Instagram

A post shared by Luna (@luna_the_pantera)

ಲೂನಾ ಹೀಗೆ ಸತತ ನೆಕ್ಕುತ್ತಿರುವುದು ವೆಂಝಾಳಿಗೆ ಇಷ್ಟವೆ? ಅಥವಾ ಸಹಿಸಿಕೊಳ್ಳುತ್ತಿದ್ದಾಳೆಯೇ? ಎಂದು ಕೇಳಿದ್ದಾರೆ ಒಬ್ಬರು. ನಿಮ್ಮ ನೆರೆಹೊರೆಯವರೊಂದಿಗೆ ಇವರಿಬ್ಬರೂ ಹೊಂದಿಕೊಳ್ಳುತ್ತಾರಾ? ಎಂದು ಕೇಳಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:25 am, Tue, 26 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ