ಮೆಟ್ರೋದಲ್ಲಿ ಬೀಡಿ ಸೇದಿದ ವ್ಯಕ್ತಿಯ ವಿಡಿಯೋ ವೈರಲ್
ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಬೀಡಿ ಸೇದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ದೆಹಲಿ ಸೇರಿದಂತೆ ಯಾವುದೇ ಮೆಟ್ರೋದಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ, ತಿಂಡಿಗಳನ್ನು ಕೂಡ ಅಲ್ಲಿ ತಿನ್ನುವಂತಿಲ್ಲ, ಸ್ವಚ್ಛತೆ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಮಾಡಲಾಗಿದೆ. ಒಂದೊಮ್ಮೆ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ಸಿಕ್ಕಿಬಿದ್ದರೆ ಬೀಡಿ, ಸಿಗರೇಟ್ ಜಪ್ತಿ ಮಾಡುವುದಲ್ಲದೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧರೊಬ್ಬರು ಮೆಟ್ರೋದೊಳಗೆ ಕೂತು ಬೀಡಿ ಸೇದುತ್ತಿದ್ದಾರೆ. ಮೆಟ್ರೋಗಳಲ್ಲಿ ಬಲೂನ್ಗಳು, ಚಾಕು ಚೂರಿ, ಕತ್ತರಿಯಂತಹ ಮೊನಚಾದ ವಸ್ತುಗಳನ್ನು ಕೂಡ ಕೊಂಡೊಯ್ಯುವಂತಿಲ್ಲ. ಬೆಂಕಿಕಡ್ಡಿಯನ್ನು ಗೀರಿ ಬೀಡಿಗೆ ಬೆಂಕಿ ಹೊತ್ತಿಸಿಕೊಳ್ಳುವಾಗ ಪಕ್ಕದಲ್ಲಿ ಕುಳಿತಿದ್ದವರು ಎದ್ದು ಹೋಗಿದ್ದಾರೆ, ಅಲ್ಲಿಯೇ ನಿಂತವರು ಬೀಡಿ ಸೇದದಂತೆ ತಡೆದಿದ್ದಾರೆ.
Viral Video Of a Man Smoking inside @OfficialDMRC @DCP_DelhiMetro pic.twitter.com/yCGobOWAom
— Siddhant Anand (@JournoSiddhant) September 25, 2023
ಸಾರ್ವಜನಿಕ ಸಾರಿಗೆಯಾಗಿರಲಿ, ಸಾರ್ವಜನಿಕ ಸ್ಥಳಗಳಿರಲಿ ಧೂಮಪಾನ ಮಾಡುವಂತಿಲ್ಲ, ಆದರೆ ಈ ವ್ಯಕ್ತಿ ರಾಜಾರೋಷವಾಗಿ ನೂರಾರು ಮಂದಿ ಇರುವ ಮೆಟ್ರೋದಲ್ಲಿ ಧೂಮಪಾನ ಮಾಡಿದ್ದು, ಪ್ರಯಾಣಿಕರು ಹಾಗೂ ನೆಟ್ಟಿಗರನ್ನು ಕೆರಳಿಸಿತ್ತು. ಧೂಮಪಾನ ಮಾಡಲು ಆರಂಭಿಸುತ್ತಿದ್ದಂತೆಯೇ ಅಲ್ಲಿದ್ದವರು ತಡೆದಿದ್ದಾರೆ, ಆಗ ಆ ವೃದ್ಧ ನಿಮ್ಮಂತೆ ನಾನೂ ಕೂಡ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ದರ್ಪದಿಂದ ಮಾತನಾಡಿದ್ದಾರೆ.
ಮತ್ತಷ್ಟು ಓದಿ: Viral Video: ಗಣೇಶೋತ್ಸವ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ನೃತ್ಯ; ತಮಿಳುನಾಡಿನ ವ್ಯಕ್ತಿಯ ಬಂಧನ
ಇದೀಗ ವಿಡಿಯೋ ವೈರಲ್ ಆಗಿದ್ದು, ಆ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಲವು ಮಂದಿ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ಗೆ ಕೇಳಿಕೊಂಡಿದೆ. ಮೆಟ್ರೋದೊಳಗೆ ಯಾರೋ ಸ್ನಾನ ಮಾಡಿದ್ದು, ಬ್ರಷ್ ಮಾಡಿದ್ದು, ನೃತ್ಯ ಮಾಡಿದ್ದು ಸೇರಿದಂತೆ ಹಲವು ಘಟನೆಗಳು ನಿತ್ಯ ಮುನ್ನೆಲೆಗೆ ಬರುತ್ತಲೇ ಇರುತ್ತದೆ.
ಡಿಎಂಆರ್ಸಿ ಹೇಳಿದ್ದೇನು?
ನಾವು ಯಾವುದೇ ಆಕ್ಷೇಪಾರ್ಹ ನಡವಳಿಕೆಗಳನ್ನು ಪತ್ತೆಹಚ್ಚಲು ಫ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಿಸಿದ್ದೇವೆ, ಇಂತಹ ಘಟನೆಗಳು ನಡೆದಾಗ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಇದರಿಂದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬಹುದು. ದೆಹಲಿ ಮೆಟ್ರೋದಲ್ಲಿ ಧೂಮಪಾನ ಮಾಡುವಂತಿಲ್ಲ, ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೆಟ್ರೋ ನಿಗಮ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 am, Tue, 26 September 23