AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಮಾಸ್ಟರ್ಸ್​ ಓದುತ್ತಿದ್ದೇನೆ ನನ್ನ ಹುಡುಗಿ ಗರ್ಭಿಣಿ’ ಎಂದ ಯುವಕನಿಗೆ ನೆಟ್ಟಿಗರ ಗಂಭೀರ ಸ್ಪಂದನೆ

Pregnancy : ನಾವು ಮಾನಸಿಕವಾಗಿ ಆರ್ಥಿಕವಾಗಿ ಸಿದ್ಧರಿಲ್ಲದ ಕಾರಣ ಗರ್ಭಪಾತಕ್ಕೆ ಮೊರೆಹೋಗಬೇಕಿರುವುದು ಅನಿವಾರ್ಯವಾಗಿದೆ. ದಯವಿಟ್ಟು ಸೂಕ್ತವಾದ ವಿಧಾನ ಯಾವುದು ಎಂದು ಭಾರತೀಯ ಮೂಲದ ಮಾಸ್ಟರ್ಸ್ ಓದುತ್ತಿರುವ ವಿದ್ಯಾರ್ಥಿಯೊಬ್ಬ ರೆಡ್ಡಿಟ್​​ನಲ್ಲಿ ಪೋಸ್ಟ್ ಮಾಡಿದ್ದಾನೆ. ನೂರಾರು ಜನರು ಗಂಭೀರವಾಗಿ ಸ್ಪಂದಿಸಿದ್ದು ಗಮನಾರ್ಹವಾಗಿದೆ.

Viral: 'ಮಾಸ್ಟರ್ಸ್​ ಓದುತ್ತಿದ್ದೇನೆ ನನ್ನ ಹುಡುಗಿ ಗರ್ಭಿಣಿ' ಎಂದ ಯುವಕನಿಗೆ ನೆಟ್ಟಿಗರ ಗಂಭೀರ ಸ್ಪಂದನೆ
ಪ್ರಾತಿನಿಧಿಕ ಚಿತ್ರ
ಶ್ರೀದೇವಿ ಕಳಸದ
|

Updated on:Sep 26, 2023 | 4:35 PM

Share

Love Affair : ‘ಡಿಸ್ಟನ್ಸ್​ ರಿಲೇಶನ್​ಶಿಪ್​ಗೆ ಅಡಿ ಇಡುವ ಮೊದಲು ಕೊನೆಯ ಬಾರಿ ನಾವಿಬ್ಬರೂ ದೈಹಿಕ ಸಂಪರ್ಕಕ್ಕೆ ಒಳಗಾದೆವು. ಈತನಕವೂ ಕಾಂಡೋಮ್​ ಇಲ್ಲದೆಯೇ ಸುರಕ್ಷಿತ ಸಂಭೋಗ ಸಾಧಿಸಿದ್ದರಿಂದ ಈ ಬಾರಿಯೂ ಹಾಗೇ ಆಗಲಿ ಎಂದು ನನ್ನ ಹುಡುಗಿ ಬಯಸಿದಳು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಎರಡು ವಾರಗಳಿಂದ ಗರ್ಭಾವಸ್ಥೆಯ ಲಕ್ಷಣಗಳು ತೋರಿ ಆಕೆಯನ್ನು ಕಂಗೆಡಿಸುತ್ತಿವೆ. ನಾನು ವಿಶ್ವವಿದ್ಯಾಲಯದಲ್ಲಿ ಆಕೆ ಮನೆಯಲ್ಲಿ. ಹಾಗಾಗಿ ಪರಸ್ಪರರು ಭೇಟಿಯಾಗಲು ಸಾಧ್ಯವಿಲ್ಲ. ಹಾಗೆಂದು ನಮ್ಮ ನಮ್ಮ ಕುಟುಂಬಗಳಿಗೆ ಹೇಳುವುದೂ ಸಾಧ್ಯವಿಲ್ಲ. ಮಗುವನ್ನು ಪಡೆಯಲು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನಾವು ಸಬಲರಲ್ಲ. ಆದಕಾರಣ ಗರ್ಭಪಾತ (Abortion) ಮಾಡಿಸದೇ ಗತ್ಯಂತರವಿಲ್ಲ. ಈ ವಿಷಯವಾಗಿ ಸುರಕ್ಷಿತ ವಿಧಾನ ಯಾವುದು ಎಂದು ದಯವಿಟ್ಟು ತಿಳಿಸಬಹುದೆ?’ ರೆಡ್ಡಿಟ್​ನಲ್ಲಿ ಭಾರತೀಯ ಯುವಕನೊಬ್ಬ ಸಹಾಯ ಕೋರಿ ಪೋಸ್ಟ್​ ಮಾಡಿದ್ದಾನೆ.

ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?

7 ಗಂಟೆಗಳ ಹಿಂದೆ ಮಾಡಿದ ಈ ಪೋಸ್ಟ್​ಗೆ 500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಜನರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಹೆಚ್ಚಿನ ಪಾಲು ಜನರು ಗಂಭೀರವಾಗಿಯೇ ಸಲಹೆ, ಸೂಚನೆ ನೀಡಿದ್ದಾರೆ. ಕೆಲ ಡಾಕ್ಟರ್​​​ಗಳು ಕೂಡ ಇಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರಲ್ಲಿ ಸಹಾಯ ಕೋರಿದ ಯುವಕನ ಪೋಸ್ಟ್​

I got my gf pregnant in Masters. We don’t want to continue with it. What should we do? byu/go_champ inindia

ಈ ಹಂತದಲ್ಲಿ ಯಾವುದೇ ರೀತಿಯ ಮನೆಮದ್ದು ಮಾಡಬೇಡಿ. ಸ್ವಯಂ ಔಷಧಿಯನ್ನೂ ತೆಗೆದುಕೊಳ್ಳಬೇಡಿ. ನಾನು ದಿನಕ್ಕೆ ನೂರಾರು ರೋಗಿಗಳ ತಪಾಸಣೆ ಮಾಡುತ್ತೇನೆ. ಅವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ರಕ್ತಸ್ರಾವ ನಿಲ್ಲುತ್ತಿಲ್ಲ ಎಂದು ಆಘಾತಗೊಂಡು ನನ್ನಲ್ಲಿಗೆ ಬರುತ್ತಾರೆ. ಎಂದಿದ್ಧಾರೆ ಒಬ್ಬ ವೈದ್ಯರು. ಯಾವುದೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಅಲ್ಟ್ರಾ ಸೌಂಡ್​ ಮಾಡಿಸಿ. ಗರ್ಭಾವಸ್ಥೆಯ ಲಕ್ಷಣಗಳು ಸಾಮಾನ್ಯವಾಗಿ ಒಂದು ತಿಂಗಳ ನಂತರ ಕಾಣಿಸಿಕೊಳ್ಳುತ್ತವೆ. ನಿಮ್ಮ ಹುಡುಗಿ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸೂರತ್​ನ ಬೀದಿಯಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು; ಆರಿಸಿಕೊಳ್ಳಲು ಹೆಣಗಾಡುತ್ತಿರುವ ಜನ

ದಯವಿಟ್ಟು ಮುಂದಿನ ಸಲ ಕಾಂಡೋಮ್​ ಬಳಸಿ. ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಇದು ತುಂಬಾ ವೈಯಕ್ತಿಕ ನಿರ್ಧಾರ, ರೆಡ್ಡಿಟ್ ಸದಸ್ಯರ ಸಲಹೆಯನ್ನು ನಿರೀಕ್ಷಿಸದಿರಿ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಹುಡುಗಿ ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆ ಮಾಡಿದ್ದಾರೆಯೇ? ಅದು ಪಾಸಿಟಿವ್ ಬಂದಿದ್ದರೆ ವೈದ್ಯರ ಬಳಿ ಹೋಗಿ, ಜೊತೆಗೆ ನೀವೂ ಹೋಗಿ. ಅಥವಾ ನಂಬಿಕೆಯುಳ್ಳ ಸ್ನೇಹಿತರು/ಕುಟುಂಬ ಸದಸ್ಯರೊಂದಿಗೆ ಹೋಗಲು ತಿಳಿಸಿ ಎಂದಿದ್ದಾರೆ ಮಗದೊಬ್ಬರು. ಒಟ್ಟಾರೆಯಾಗಿ ತಡಮಾಡಬೇಡಿ ಎಂದಿದ್ದಾರೆ ಅನೇಕರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:18 pm, Tue, 26 September 23

ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ