Viral Video: ‘ಈಗಿನ ನಟಿಯರಲ್ಲಿ ಒಬ್ಬರಾದರೂ ಮಾಧುರಿಯಂತೆ ಇಂಥ ಪ್ರಸ್ತುತಿ ನೀಡಬಲ್ಲರೆ?’

Bollywood : ಮಾಧುರಿಗೆ ಮಾಧುರಿಯೇ ಸೈ. ಶ್ರೀದೇವಿ ಮತ್ತು ಮಾಧುರಿಯನ್ನು ಯಾರೂ ರೀಪ್ಲೇಸ್ ಮಾಡಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಒಕ್ಕೊರಲಿನಿಂದ ಹೇಳಿದ್ದಾರೆ. ಈಗನ ನಟನಟಿಯರು ನೃತ್ಯವನ್ನು ಅವಶ್ಯಕತೆಗಾಗಿ ಕಲಿಯುತ್ತಾರೆ. ಆದರೆ ಮಾಧುರಿ ಬಾಲ್ಯದಿಂದಲೇ ನೃತ್ಯವನ್ನು ಉಸಿರಾಡಿದವರು. ಹಾಗಾಗಿ ಇಂಥ ಭಾವಾಭಿವ್ಯಕ್ತಿ ಅವರಲ್ಲಿ ಸಹಜವಾಗಿ ಹೊಮ್ಮುತ್ತದೆ ಎಂದಿದ್ದಾರೆ.

Viral Video: 'ಈಗಿನ ನಟಿಯರಲ್ಲಿ ಒಬ್ಬರಾದರೂ ಮಾಧುರಿಯಂತೆ ಇಂಥ ಪ್ರಸ್ತುತಿ ನೀಡಬಲ್ಲರೆ?'
ಮಾಧುರಿ ದೀಕ್ಷಿತ್
Follow us
ಶ್ರೀದೇವಿ ಕಳಸದ
|

Updated on: Sep 26, 2023 | 5:12 PM

Actress : ಈಗಿನ ನಟಿಯರಲ್ಲಿ ಯಾರಾದರೂ ಇಂಥ ಪ್ರಯತ್ನ ಮತ್ತು ಪ್ರಸ್ತುತಿಯನ್ನು ನೀಡಬಹುದೆ? ಎಂದು ರೆಡ್ಡಿಟ್​ ಖಾತೆದಾರರೊಬ್ಬರು ಈ ವಿಡಿಯೋ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. 5 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 300 ಜನರು ಲೈಕ್ ಮಾಡಿದ್ದು, ಸುಮಾರು 100 ಜನರು ಪ್ರತಿಕ್ರಿಯಸಿದ್ದಾರೆ. ಮಾಧುರಿ ಚಿಕ್ಕಂದಿನಲ್ಲಿಯೇ ತರಬೇತಿ ಪಡೆದ ನೃತ್ಯಗಾರ್ತಿ. ಹಾಗಾಗಿ ಅವರ ಭಾವಾಭಿವ್ಯಕ್ತಿಯು ನಿರಾಯಾಸವಾಗಿ ಹೊಮ್ಮುತ್ತವೆ. ಇಷ್ಟೇ ಅಲ್ಲ ಆಕೆಯ ನಗು ಅತ್ಯಂತ ಮೋಹಕ. ಒಟ್ಟಾರೆಯಾಗಿ ಆಕೆ ಎಂದಿಗೂ ಅನನ್ಯ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral: ‘ಮಾಸ್ಟರ್ಸ್​ ಓದುತ್ತಿದ್ದೇನೆ ನನ್ನ ಹುಡುಗಿ ಗರ್ಭಿಣಿ’ ಎಂದ ಯುವಕನಿಗೆ ನೆಟ್ಟಿಗರ ಗಂಭೀರ ಸ್ಪಂದನೆ

ಈತನ ಇಂಥ ಚೆಲುವೆಯನ್ನು ಬಾಲಿವುಡ್​ನಲ್ಲಿ ನೋಡಿಲ್ಲ ಎಂದಿದ್ದಾರೆ ಅನೇಕರು. ಮಾಧುರಿಯೊಂದಿಗೆ ನನಗೆ ಸಾಯಿಪಲ್ಲವಿ ಇಷ್ಟ. ಆಕೆ ಕೂಡ ಆಕರ್ಷಕವಾಗಿ ನರ್ತಿಸುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ಪ್ರಸ್ತುತ ನಟಿಯರು ವಿಮಾನ ನಿಲ್ದಾಣದಲ್ಲಿ ಪ್ಯಾಪರಾಜಿಗಳನ್ನು ಸೆಳೆಯುವಲ್ಲಿ ಅತ್ಯಂತ ಪರಿಣತರು ಎಂದಿದ್ದಾರೆ ಮತ್ತೊಬ್ಬರು. ಮಾಧುರಿಗೆ ಮಾಧುರಿಯೇ ಸೈ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಾಧುರಿಯ ಈ ವಿಡಿಯೋ ನೋಡಿ

Who do you’ll think from the current gen actresses can attempt something like this 😍 byu/BeYoutifulMR inBollyBlindsNGossip

ಈಗಿನ ನಟಿಯರಿಗೆ ನೃತ್ಯ ಎನ್ನುವುದು ನಟನೆಗೆ ಪೂರಕ. ಹಾಗಾಗಿ ಅವರಿಗೆ ಇಂಥ ಅಭಿನಯವು ಸಹಜವಾಗಿ ಹೊಮ್ಮದು ಎಂದಿದ್ದಾರೆ ಒಬ್ಬರು. ಮಾಧುರಿಗೆ ಇರುವ ಸ್ಕ್ರೀನ್​ ಪ್ರೆಸೆನ್ಸ್, ನಟನಾ ಕೌಶಲ ಈತನ ಯಾರಲ್ಲಿಯೂ ನೋಡಿಲ್ಲ ಎಂದಿದ್ದಾರೆ ಇನ್ನೊಬ್ಬರು. ಮಾಧುರಿಯ ಸಮಯದಲ್ಲಿ ಕರಿಷ್ಮಾ, ಊರ್ಮಿಳಾರಂಥ ಅಸಾಧಾರಣ ನೃತ್ಯಗಾತಿಯರಿದ್ದರು. ಸ್ಪರ್ಧೆ ಬಹಳ ಪ್ರಬಲವಾಗಿತ್ತು. ಆದರೂ ಮಾಧುರಿಯೇ ಉತ್ಕೃಷ್ಟ. ಈಗ ಇಂಥ ಸ್ಪರ್ಧಿಗಳೂ ಇಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?

ಮಾಧುರಿ ಮತ್ತು ಶ್ರೀದೇವಿ ಇವರಿಬ್ಬರನ್ನು ಯಾರೂ ರಿಪ್ಲೇಸ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಅನೇಕರು. ಈಗಿನ ನಟಿಯರು ಸಾಕಷ್ಟು ಬ್ರೇಕ್​ ತೆಗೆದುಕೊಳ್ಳುತ್ತಾರೆ ನೃತ್ಯ ಅಥವಾ ಶೂಟಿಂಗ್ ಸಮಯದಲ್ಲಿ. ಆದರೆ ಮಾಧುರಿ ಹಳೆಯ ವೈನಿನಂತೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್