ವಾರಾಣಸಿಯ ಜನನಿಬಿಡ ರಸ್ತೆಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನ್ನು ರಕ್ಷಿಸಿದ ವೃದ್ಧರು
ಬನಾರಸ್ ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಹಿತಕರವಾದ ಮಳೆ ಸುರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಚರಂಡಿಗಳೂ ತುಂಬಿ ಹರಿಯುತ್ತಿವೆ. ಈ ಚರಂಡಿಗಳು ತುಂಬಿ ಹರಿಯುತ್ತಿದ್ದರಿಂದ 4 ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿದ್ದು, ವೃದ್ಧರೊಬ್ಬರು ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ
ವಾರಾಣಸಿ, ಸೆಪ್ಟೆಂಬರ್ 27: ಬನಾರಸ್ ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಹಿತಕರವಾದ ಮಳೆ ಸುರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಚರಂಡಿಗಳೂ ತುಂಬಿ ಹರಿಯುತ್ತಿವೆ. ಈ ಚರಂಡಿಗಳು ತುಂಬಿ ಹರಿಯುತ್ತಿದ್ದರಿಂದ 4 ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿದ್ದು, ವೃದ್ಧರೊಬ್ಬರು ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.
ಚೆಟ್‌ಗಂಜ್ ಪೊಲೀಸ್ ಠಾಣೆಯ ಹಬೀಬ್‌ಪುರ ಪ್ರದೇಶದ ಜಂಜಿರಾ ಶಾ ಬಾಬಾ ಸಮಾಧಿ ಬಳಿ ಈ ಘಟನೆ ನಡೆದಿದೆ. ಮಗುವನ್ನು ರಕ್ಷಿಸಿದ ನಂತರ, ಅವರು ಬಾಲಕನನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿ, ಕರೆ ಮಾಡಿ ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದಾರೆ.
ಮಗುವಿಗೆ ವಿದ್ಯುತ್ ಸ್ಪರ್ಶವಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ ಎಂದು ಪೊಲೀಸ್ ಠಾಣೆ ಪ್ರಭಾರಿ ಚೇಟ್‌ಗಂಜ್ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ಯುವತಿ ವಿದ್ಯುತ್ ಶಾಕ್ನಿಂದ ಸಾವು; ಮಗಳದ್ದು ಕೊಲೆ ಅಂತಿರೋ ಹೆತ್ತವರು, ಇಲ್ಲಿದೆ ವಿವರ
ಸ್ಥಳೀಯ ಹಿರಿಯರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿ ಜಿತೇಂದ್ರ ಕುಮಾರ್ ಅವರ ನಾಲ್ಕು ವರ್ಷದ ಮಗ ಕಾರ್ತಿಕ್ ಮಳೆ ನಿಂತ ನಂತರ ನೀರಿನಲ್ಲಿ ಆಟವಾಡುತ್ತಿದ್ದ. ಮನೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ನೀರಿನ ಮೂಲಕ ಪ್ರವಹಿಸಿತ್ತು. ಕಾರ್ತಿಕ್ಗೆ ವಿದ್ಯುತ್ ತಗುಲಿದ ನಂತರ ಕಿರುಚುತ್ತಾ ಗೋಳಾಡುತ್ತಿದ್ದ.
#वाराणसी सिस्टम पर सवाल खड़ा करते वीडियो हुआ वायरल,सड़क पर भरे पानी में उतरा करंट,चपेट में आया 4 वर्षीय बालक,बीच सड़क पर तड़पता रहा बच्चा, देखते रहे राहगीर,बच्चे को बचाने के लिए बुजुर्ग ने उठाई जहमत,चेतगंज थाना क्षेत्र के हबीबपुरा का मामला pic.twitter.com/nW0eZJBhqm
— ठाkur Ankit Singh (@liveankitknp) September 26, 2023
ಅಷ್ಟರಲ್ಲಿಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಹಿರಿಯರಲ್ಲಿ ಒಬ್ಬರು ನೆಲದ ಮೇಲೆ ಬಿದ್ದು ಅಳುತ್ತಿದ್ದ ಬಾಲಕನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಆಗ ಅವರಿಗೆ ವಿದ್ಯುತ್ ತಗುಲಿದೆ. ಬಳಿಕ ಮರದ ಕೋಲಿನ ಸಹಾಯದಿಂದ ಬಾಲಕನನ್ನು ಕಾಪಾಡಿದ್ದಾರೆ.
ಈ ಸಂಪೂರ್ಣ ಘಟನೆಯು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ, ಈ ಹಿರಿಯರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ