ಮಣಿಪುರದಲ್ಲಿ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ನಿಷೇಧ, ಶಾಲೆಗೆ ರಜೆ ಘೋಷಣೆ
Manipur: ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ನಾಳೆ (ಸೆಪ್ಟೆಂಬರ್ 27)ಯಿಂದ ಸೆಪ್ಟೆಂಬರ್ 29(ಶುಕ್ರವಾರ) ವರೆಗೆ ರಜೆ ಘೋಷಿಸಲಾಗಿದೆ. ಈಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ತಪ್ಪು ಮಾಹಿತಿ, ಸುಳ್ಳು ವದಂತಿಗಳು ಮತ್ತು ಇತರ ಹಿಂಸಾತ್ಮಕ ಚಟುವಟಿಕೆಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್ ಸೆಪ್ಟೆಂಬರ್ 26: ಶಂಕಿತ ಶಸ್ತ್ರಧಾರಿಗಳು ಇಬ್ಬರು ವಿದ್ಯಾರ್ಥಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ನಂತರ ರಾಜ್ಯದಲ್ಲಿ ಹೊಸ ಪ್ರತಿಭಟನೆಗಳು ಭುಗಿಲೆದ್ದಿದ್ದು ಮಣಿಪುರ (Manipur) ಮಂಗಳವಾರ ಮತ್ತೊಮ್ಮೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು (Mobile Internet) ಐದು ದಿನಗಳ ಕಾಲ ಸ್ಥಗಿತಗೊಳಿಸಿದೆ. ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮಂಗಳವಾರ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು. ಇಬ್ಬರು ವಿದ್ಯಾರ್ಥಿಗಳ ಶವದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ನಾಳೆ (ಸೆಪ್ಟೆಂಬರ್ 27)ಯಿಂದ ಸೆಪ್ಟೆಂಬರ್ 29(ಶುಕ್ರವಾರ) ವರೆಗೆ ರಜೆ ಘೋಷಿಸಲಾಗಿದೆ. ಈಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ತಪ್ಪು ಮಾಹಿತಿ, ಸುಳ್ಳು ವದಂತಿಗಳು ಮತ್ತು ಇತರ ಹಿಂಸಾತ್ಮಕ ಚಟುವಟಿಕೆಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
PHOTO | “All State Government/State Government Aided/Private Unaided Schools will be closed on 27.09.2023 (Wednesday) and 29.09.2023 (Friday),” states a notification issued by the Directorate of Education – Schools, Manipur. pic.twitter.com/0r3KEB3L94
— Press Trust of India (@PTI_News) September 26, 2023
“ರಾಜ್ಯ ಸರ್ಕಾರವು ಅಕ್ಟೋಬರ್ 10 ರ ಸಂಜೆ 7:45 ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಐದು ದಿನಗಳ ಕಾಲ ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ VPN ಮೂಲಕ ಮೊಬೈಲ್ ಇಂಟರ್ನೆಟ್ ಡೇಟಾ ಸೇವೆಗಳು, ಇಂಟರ್ನೆಟ್ / ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು / ನಿಗ್ರಹಿಸಲು ನಿರ್ಧರಿಸಿದೆ” ಎಂದು ಸುತ್ತೋಲೆ ಹೇಳಿದೆ.
PHOTO | Mobile internet services suspended for five days in #Manipur: Officials
The curbs will remain effective in the state till 7.45 pm on October 1. pic.twitter.com/TBd2R8N375
— Press Trust of India (@PTI_News) September 26, 2023
ಮೇ ತಿಂಗಳಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಂತರ ಸುಮಾರು ಐದು ತಿಂಗಳ ನಿಷೇಧದ ನಂತರ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಇತ್ತೀಚೆಗೆ ಪುನಃಸ್ಥಾಪಿಸಲಾಗಿತ್ತು. ಒಂದು ಚಿತ್ರದಲ್ಲಿ, ಇಬ್ಬರು ವಿದ್ಯಾರ್ಥಿಗಳು 20ರ ಹರೆಯದ ಬ್ಬ ಪುರುಷ ಮತ್ತು 17ರ ಹರೆಯದ ಒಬ್ಬ ಹುಡುಗಿ ಸಶಸ್ತ್ರ ಗುಂಪಿನ ತಾತ್ಕಾಲಿಕ ಕಾಡಿನ ಶಿಬಿರದಲ್ಲಿ ಕುಳಿತಿರುವುದು ಕಂಡುಬಂದಿದೆ. ಇದಲ್ಲದೆ, ಇಬ್ಬರು ವ್ಯಕ್ತಿಗಳು ಅವರ ಹಿಂದೆ ಬಂದೂಕುಗಳನ್ನು ಹಿಡಿದಿರುವುದನ್ನು ಚಿತ್ರದಲ್ಲಿ ಕಾಣಬಹುದು. ಜುಲೈನಲ್ಲಿ ಜನಾಂಗೀಯ ಹಿಂಸಾಚಾರದ ಉತ್ತುಂಗದಲ್ಲಿ ಅವರು ಕಾಣೆಯಾಗಿದ್ದರು.
ಇದನ್ನೂ ಓದಿ: ಮಣಿಪುರ: ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ, ಶವದ ಚಿತ್ರಗಳು ವೈರಲ್
ಇನ್ನೊಂದು ಚಿತ್ರದಲ್ಲಿ ವಿದ್ಯಾರ್ಥಿಗಳಿಬ್ಬರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣುತ್ತದೆ. ವ್ಯಕ್ತಿಯ ತಲೆ ಕಾಣೆಯಾಗಿದೆ. ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಎರಡು ದಿನಗಳ ನಂತರ ಜುಲೈ 8 ರಂದು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಕಚೇರಿಯ ಪ್ರಕಾರ, ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ಉಸ್ತುವಾರಿ ವಹಿಸಿಕೊಂಡಿದೆ ಮತ್ತು ರಾಜ್ಯ ಸರ್ಕಾರವು ಅಪರಾಧಿಗಳ ವಿರುದ್ಧ ‘ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ, ಮಣಿಪುರದಲ್ಲಿ ಮೈತಿ ಬುಡಕಟ್ಟು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳಿಂದ ತತ್ತರಿಸಿದ ನಂತರ ಇದೀಗ ಮತ್ತೊಮ್ಮೆ ಇಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.