ಮಣಿಪುರದಲ್ಲಿ ಇಂಟರ್‌ನೆಟ್ ನಿರ್ಬಂಧ ತೆರವು: ಸಿಎಂ ಬಿರೇನ್ ಸಿಂಗ್
Manipur violence: ಮಣಿಪುರ ಹಿಂಸಾಚಾರದಿಂದ ಅಲ್ಲಿನ ಇಂಟರ್ನೆಟ್ ವ್ಯವಸ್ಥೆಯನ್ನು ನಿರ್ಬಂಧ ಮಾಡಲಾಗಿತ್ತು. ಇದೀಗ ರಾಜ್ಯ ಯಥಾಸ್ಥಿತಿಗೆ ಬಂದ ಕಾರಣ ಈ ನಿರ್ಬಂಧವನ್ನು ತೆರವು ಮಾಡಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಂದು (ಸೆ.23) ಹೇಳಿದ್ದಾರೆ.
ಇಂಫಾಲ್, ಸೆ.23: ಮಣಿಪುರ ಹಿಂಸಾಚಾರದಿಂದ (Manipur violence) ಅಲ್ಲಿನ ಇಂಟರ್ನೆಟ್ ವ್ಯವಸ್ಥೆಯನ್ನು ನಿರ್ಬಂಧ ಮಾಡಲಾಗಿತ್ತು. ಇದೀಗ ರಾಜ್ಯ ಯಥಾಸ್ಥಿತಿಗೆ ಬಂದ ಕಾರಣ ಈ ನಿರ್ಬಂಧವನ್ನು ತೆರವು ಮಾಡಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (biren singh) ಅವರು ಇಂದು (ಸೆ.23) ಹೇಳಿದ್ದಾರೆ. ಮೇ 3ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದು, ನಂತರ ಅದು ವಿಕೋಪಕ್ಕೆ ಹೋಗಿ ಹಲವು ಅಹಿತಕರ ಘಟನೆಗಳು ನಡೆದು ಇಡೀ ರಾಜ್ಯವೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲಿನ ಅನೇಕರು ಮನೆ-ಪ್ರಾಣ ಎಲ್ಲವನ್ನು ಕಳೆದುಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಮಣಿಪುರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತೆ ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಈ ಪುಕಾರುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮಣಿಪುರ ಯಥಾಸ್ಥಿತಿಗೆ ಬಂದ ಕಾರಣ ಈ ಕ್ರಮವನ್ನು ತೆರವುಗೊಳಿಸಲಾಗಿದೆ.
ಸೆ.22ರಿಂದ 15 ದಿನಗಳೊಳಗೆ ತಮ್ಮಲ್ಲಿರುವ ಅಕ್ರಮ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸೂಚನೆ ನೀಡಿದ ನಂತರ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ. ಶುಕ್ರವಾರದಂದು (ಸೆ.22) ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಲಾಗಿತ್ತು, ಯಾರೆಲ್ಲ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರ ಅವರು ತಕ್ಷಣ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಈಗಾಗಲೇ ಯಾರೆಲ್ಲ ಅಕ್ರಮ ಶಸ್ತ್ರಾಸ್ತ್ರ ಹೊಂದಿದರೆ ಎಂಬುದನ್ನು ಗುರುತಿಸಲಾಗಿದೆ.
ಒಂದು ವೇಳೆ ಸರ್ಕಾರ ತಿಳಿಸಿದ 15 ದಿನಗಳೊಳಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ. ಕೇಂದ್ರ ಮತ್ತು ರಾಜ್ಯದ ಎರಡೂ ಭದ್ರತಾ ಪಡೆಗಳು ರಾಜ್ಯದಾದ್ಯಂತ ಕಾರ್ಯಚರಣೆ ನಡೆಸಲಾಗುವುದು. ಜತೆಗೆ ಕಾನೂನು ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ. ಈ ಶಸ್ತ್ರಾಸ್ತ್ರ ಹಿಡಿದುಕೊಂಡು ಅನೇಕ ದುಷ್ಕರ್ಮಿಗಳು/ಗುಂಪುಗಳು ಜನರ ಮೇಲೆ ದಾಳಿ ಮಾಡುತ್ತಿದೆ. ರಾಜ್ಯದಲ್ಲಿ ಇದರಿಂದ ಸುಲಿಗೆ, ಬೆದರಿಕೆ ಮತ್ತು ಅಪಹರಣಗಳ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಘಟನೆಗಳು ಕಂಡು ಬಂದರೆ ಖಂಡಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ
ಇಲ್ಲಿಯವರೆಗೆ ಈ ಹಿಂಸಾಚಾರಕ್ಕೆ 175 ಜನರು ಬಲಿಯಾಗಿದ್ದು, 1,100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನು ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ನಾಲ್ಕು ತಿಂಗಳ ಹಿಂಸಾಚಾರದ ಸಂದರ್ಭದಲ್ಲಿ 4,786 ಮನೆಗಳು ಮತ್ತು 386 ಧಾರ್ಮಿಕ ಸ್ಥಳಗಳನ್ನು ಸುಟ್ಟು ಧ್ವಂಸಗೊಳಿಸಲಾಗಿದೆ, ಇದರಿಂದ 5,172 ಅಗ್ನಿಸ್ಪರ್ಶ ಪ್ರಕರಣಗಳಿವೆ. ರಾಜ್ಯಾದ್ಯಂತ ಒಟ್ಟು 5,668 ಶಸ್ತ್ರಾಸ್ತ್ರಗಳು ಕಳೆದು ಹೋಗಿವೆ. ಇಲ್ಲಿಯವರೆಗೆ ಭದ್ರತಾ ಪಡೆಗಳು 1,329 ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ