AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಭಾರತ-ಚೀನಾ ಸಂಬಂಧ ಹಳಸಿದೆ: ಎಸ್​ ಜೈಶಂಕರ್

ಗಲ್ವಾನ್​ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ವಿಶ್ವದ ಎರಡು ದೊಡ್ಡ ರಾಷ್ಟ್ರಗಳು ತಮ್ಮ ನಡುವೆ ಆ ಮಟ್ಟದ ಉದ್ವಿಗ್ನತೆಯನ್ನು ಹೊಂದಿದ್ದರೆ, ಅದು ಎಲ್ಲರ ಮೇಲೂ ಪರಿಣಾಮವನ್ನು ಬೀರುತ್ತದೆ. ಚೀನಾ ವ್ಯವಹಾರವೇ ವಿಚಿತ್ರ, ಅವರು ಆ ಕೆಲಸವನ್ನು ಏಕೆ ಮಾಡುತ್ತಾರೆ ಎಂಬುದರ ಬಗ್ಗೆ ಎಂದೂ ಹೇಳುವುದಿಲ್ಲ, ಹಾಗಾಗಿ ಚೀನಾ ನಡವಳಿಕೆಯಲ್ಲಿ ಸದಾ ಅಸ್ಪಷ್ಟತೆ ಎದ್ದು ತೋರುತ್ತಿರುತ್ತದೆ.

ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಭಾರತ-ಚೀನಾ ಸಂಬಂಧ ಹಳಸಿದೆ: ಎಸ್​ ಜೈಶಂಕರ್
ಜೈಶಂಕರ್Image Credit source: NDTV
Follow us
ನಯನಾ ರಾಜೀವ್
|

Updated on: Sep 27, 2023 | 9:08 AM

ಗಲ್ವಾನ್​ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ವಿಶ್ವದ ಎರಡು ದೊಡ್ಡ ರಾಷ್ಟ್ರಗಳು ತಮ್ಮ ನಡುವೆ ಆ ಮಟ್ಟದ ಉದ್ವಿಗ್ನತೆಯನ್ನು ಹೊಂದಿದ್ದರೆ, ಅದು ಎಲ್ಲರ ಮೇಲೂ ಪರಿಣಾಮವನ್ನು ಬೀರುತ್ತದೆ. ಚೀನಾ ವ್ಯವಹಾರವೇ ವಿಚಿತ್ರ, ಅವರು ಯಾವ ಕೆಲಸವನ್ನು ಏಕೆ ಮಾಡುತ್ತಾರೆ ಎಂಬುದರ ಬಗ್ಗೆ ಎಂದೂ ಹೇಳುವುದಿಲ್ಲ, ಹಾಗಾಗಿ ಚೀನಾ ನಡವಳಿಕೆಯಲ್ಲಿ ಸದಾ ಅಸ್ಪಷ್ಟತೆ ಎದ್ದು ತೋರುತ್ತಿರುತ್ತದೆ.

ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಉಪಸ್ಥಿತಿಯು ನಿರಂತರವಾಗಿ ಹೆಚ್ಚುತ್ತಿದೆ ಎಂದು ವಿದೇಶಾಂಗ ಸಚಿವರು ಕಳವಳ ವ್ಯಕ್ತಪಡಿಸಿದರು. ಇದಕ್ಕಾಗಿ ಹಿಂದೆಂದಿಗಿಂತಲೂ ಹೆಚ್ಚು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಜೈಶಂಕರ್ ಮಾತನಾಡಿ, ಕಳೆದ 20-25 ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಉಪಸ್ಥಿತಿ ಮತ್ತು ಚಟುವಟಿಕೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಚೀನೀ ನೌಕಾಪಡೆಯ ಗಾತ್ರದಲ್ಲಿ ಬಹಳ ವೇಗವಾಗಿ ಹೆಚ್ಚಳವಾಗಿದೆ. ನೀವು ಬಹಳ ದೊಡ್ಡ ನೌಕಾಪಡೆಯನ್ನು ಹೊಂದಿರುವಾಗ, ಆ ನೌಕಾಪಡೆಯು ಅದರ ನಿಯೋಜನೆಯ ವಿಷಯದಲ್ಲಿ ಎಲ್ಲೋ ಗೋಚರಿಸುತ್ತದೆ.

ಶ್ರೀಲಂಕಾಕ್ಕೆ ಪದೇ ಪದೇ ಆಗಮಿಸುವ ಸಂಶೋಧನಾ ಹಡಗು ನಿಲುಗಡೆಗೆ ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾ ಸ್ಪಷ್ಟಪಡಿಸಿದೆ, ನಮಗೆ ಭಾರತದ ಕಾಳಜಿಯೇ ಮುಖ್ಯ ಎಂದು ಹೇಳಿದೆ. ಆಗಸ್ಟ್ 23 ರಂದು, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಇದರೊಂದಿಗೆ ಇದು ಚಂದ್ರನ ಮೇಲೆ ರೋವರ್ ಅನ್ನು ಇಳಿಸಿದ ದೇಶಗಳ ಗಣ್ಯ ಮತ್ತು ಸಣ್ಣ ಬಾಹ್ಯಾಕಾಶ ಕ್ಲಬ್‌ಗೆ ಸೇರಿಕೊಂಡಿದೆ.

ಮತ್ತಷ್ಟು ಓದಿ: ಯಾವುದೇ ದೇಶದ ಅತಿಕ್ರಮಣವನ್ನು ಭಾರತ ಸಹಿಸುವುದಿಲ್ಲ, ತಕ್ಕ ಉತ್ತರ ನೀಡಲು ನಮ್ಮ ಸೇನೆ ಸಮರ್ಥವಾಗಿದೆ: ರಾಜನಾಥ ಸಿಂಗ್

ರಷ್ಯಾ, ಅಮೆರಿಕ ಮತ್ತು ಚೀನಾ ನಂತರ ಚಂದ್ರನ ಮೇಲ್ಮೈ ಮೇಲೆ ಇಳಿದ ನಾಲ್ಕನೇ ದೇಶ ಭಾರತ. ಆದಾಗ್ಯೂ, ದಕ್ಷಿಣ ಧ್ರುವದಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿದೆ. ಭಾರತವು ಅಮೃತಕಾಲವನ್ನು ಪ್ರವೇಶಿಸಿದೆ ಹೆಚ್ಚಿನ ಪ್ರಗತಿ, ಬದಲಾವಣೆಗಾಗಿ ದೇಶ ಎದುರುನೋಡುತ್ತಿದೆ.

ಸ್ಪಷ್ಟವಾಗಿ ಮುನ್ನೆಲೆಗೆ ಬಂದಿರುವ ನಮ್ಮ ಪ್ರತಿಭೆ ಮತ್ತು ಸೃಜನಶೀಲತೆ ನಮ್ಮನ್ನು ಮುಂದೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಕಾಲದಲ್ಲಿ ತೆಗೆದುಕೊಂಡ ನಿರ್ಧಾರಗಳು ಮತ್ತು ಕ್ರಮಗಳು ಮುಂದಿನ ಒಂದು ಸಾವಿರ ವರ್ಷಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್