ಹಿಂದೂ ಮಹಾಸಾಗರ ಪ್ರವೇಶಿಸಿದ ಚೀನಾದ ಬೇಹುಗಾರಿಕಾ ಹಡಗು

ಚೀನಾದ ಶಕ್ತಿಶಾಲಿ ಬೇಹುಗಾರಿಕಾ ಹಡಗು ಶಿ ಯಾನ್ 6 ಹಿಂದೂ ಮಹಾಸಾಗರವನ್ನು ಪ್ರವೇಶಿಸಿ ಭಾರತದತ್ತ ಸಾಗುತ್ತಿದೆ. ಮಿಶ್ರ ಸಂದೇಶವನ್ನು ಕಳುಹಿಸುವ ಮೂಲಕ ಶ್ರೀಲಂಕಾ ಈ ಮಾಹಿತಿ ಹಂಚಿಕೊಂಡಿದೆ. ಪ್ರಸ್ತುತ ಈ ಹಡಗು ಹಿಂದೂ ಮಹಾಸಾಗರದ ಮಧ್ಯದಲ್ಲಿ 90 ಡಿಗ್ರಿ ಪೂರ್ವ ರೇಖಾಂಶದ ತುದಿಯಲ್ಲಿದೆ ಮತ್ತು ನಿರಂತರವಾಗಿ ಶ್ರೀಲಂಕಾ ಕಡೆ ಚವಲಿಸುತ್ತಿದೆ. ಶಿ ಯಾನ್ 6 ಹಡಗು ವಿಜ್ಞಾನ ಮತ್ತು ಶಿಕ್ಷಣ ಮೂಲಸೌಕರ್ಯವನ್ನು ಸ್ಥಾಪಿಸಲು ಚೀನಾದ 13 ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಯೋಜನೆ ಇದಾಗಿದೆ.

ಹಿಂದೂ ಮಹಾಸಾಗರ ಪ್ರವೇಶಿಸಿದ ಚೀನಾದ ಬೇಹುಗಾರಿಕಾ ಹಡಗು
ಹಡಗುImage Credit source: Hindustan Times
Follow us
ನಯನಾ ರಾಜೀವ್
|

Updated on: Sep 27, 2023 | 9:51 AM

ಚೀನಾ(China)ದ ಶಕ್ತಿಶಾಲಿ ಬೇಹುಗಾರಿಕಾ ಹಡಗು ಶಿ ಯಾನ್ 6 ಹಿಂದೂ ಮಹಾಸಾಗರವನ್ನು ಪ್ರವೇಶಿಸಿ ಭಾರತದತ್ತ ಸಾಗುತ್ತಿದೆ. ಮಿಶ್ರ ಸಂದೇಶವನ್ನು ಕಳುಹಿಸುವ ಮೂಲಕ ಶ್ರೀಲಂಕಾ ಈ ಮಾಹಿತಿ ಹಂಚಿಕೊಂಡಿದೆ. ಪ್ರಸ್ತುತ ಈ ಹಡಗು ಹಿಂದೂ ಮಹಾಸಾಗರದ ಮಧ್ಯದಲ್ಲಿ 90 ಡಿಗ್ರಿ ಪೂರ್ವ ರೇಖಾಂಶದ ತುದಿಯಲ್ಲಿದೆ ಮತ್ತು ನಿರಂತರವಾಗಿ ಶ್ರೀಲಂಕಾ ಕಡೆ ಚವಲಿಸುತ್ತಿದೆ. ಶಿ ಯಾನ್ 6 ಹಡಗು ವಿಜ್ಞಾನ ಮತ್ತು ಶಿಕ್ಷಣ ಮೂಲಸೌಕರ್ಯವನ್ನು ಸ್ಥಾಪಿಸಲು ಚೀನಾದ 13 ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಯೋಜನೆ ಇದಾಗಿದೆ.

ಉದ್ಘಾಟನೆಯ ಎರಡು ವರ್ಷಗಳ ಬಳಿಕ ಹಡಗು 2022ರಲ್ಲಿ ಪೂರ್ವ ಹಿಂದೂ ಮಹಾಸಾಗರದಲ್ಲಿ ತನ್ನ ಮೊದಲ ಪ್ರಯಾಣವನ್ನು ಯಶಸ್ವಿಯಾಗಿ ಮಾಡಿತ್ತು. ಅಕ್ಟೋಬರ್​ನಲ್ಲಿ ಕೊಲಂಬೊ ಬಂದರಿನಲ್ಲಿ ಚೀನಾದ ಈ ಸಂಶೋಧನಾ ಹಡಗನ್ನು ನಿಲುಗಡೆ ಮಾಡಲು ಶ್ರೀಲಂಕಾದ ವಿಕ್ರಮಸಿಂಘೆ ಸರ್ಕಾರ ಅನುಮತಿ ನೀಡಿದೆ.

ಚೀನಾ 2019ರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುಮಾರು 48 ವೈಜ್ಞಾನಿಕ ಸಂಶೋಧನಾ ಹಡಗುಗಳನ್ನು ನಿಯೋಜಿಸಿದೆ. ಈ ಎಲ್ಲಾ ಹಡಗುಗಳ ನಿಯೋಜನೆಯು ಬಂಗಾಳಕೊಲ್ಲಿಯಿಂದ ಅರಬ್ಬಿ ಸಮುದ್ರ ಹಾಗೂ ಪರ್ಷಿಯನ್ನು ಕೊಲ್ಲಿಯವರೆಗೆ ಇರಲಿದೆ.

ಮತ್ತಷ್ಟು ಓದಿ: ಭಾರತೀಯರ ಕಾಳಜಿ ಮುಖ್ಯ, ಚೀನಾದ ಸಂಶೋಧನಾ ಹಡಗು ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಲಂಕಾ

ಚೀನಾದ ಹಡಗು ಶಿ ಯಾನ್ 6 ಸೆಪ್ಟೆಂಬರ್ 23 ರಂದು ಮಲಕ್ಕಾ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರವನ್ನು ಪ್ರವೇಶಿಸಿತು ಮತ್ತು ಸೆಪ್ಟೆಂಬರ್ 10 ರಂದು ಹೋಮ್‌ಪೋರ್ಟ್ ಗುವಾಂಗ್‌ಝೌವನ್ನು ತೊರೆದ ನಂತರ ಸೆಪ್ಟೆಂಬರ್ 14 ರಂದು ಸಿಂಗಾಪುರದಲ್ಲಿ ಕಾಣಿಸಿಕೊಂಡಿತು.

ಈ ಮೊದಲು ಚೀನಾ ಸಂಶೋಧನಾ ಹಡಗು ಶ್ರೀಲಂಕಾಗೆ ಬಂದಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾವು ನಮಗೆ ಭಾರತದ ಕಾಳಜಿ ಮುಖ್ಯ, ಚೀನಾದ ಹಡಗಿನ ನಿಲುಗಡೆಗೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ