10 ಸಾವಿರ ಜನರಿದ್ದ ಸ್ಟೇಡಿಯಂನಲ್ಲಿ ಕಳೆದುಹೋದ ಮೊಬೈಲ್ ಸಿಕ್ಕಿದ್ದೇ ಒಂದು ಅಚ್ಚರಿ!
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಹಾಂಗ್‌ಕಾಂಗ್‌ನ 12 ವರ್ಷದ ಚೆಸ್ ಆಟಗಾರ್ತಿಯೊಬ್ಬರು ತನ್ನ ಮೊಬೈಲ್ ಫೋನ್ ಅನ್ನು ಎಲ್ಲೋ ಇರಿಸಿ, ಕಳೆದುಕೊಂಡಿದ್ದರು. ಆ ಫೋನ್ಗೆ ಮಿಸ್ ಕಾಲ್ ಕೊಟ್ಟು ಹುಡುಕೋಣವೆಂದರೆ ಅದು ಸ್ವಿಚ್ ಆಫ್ ಆಗಿತ್ತು.
ಮೊಬೈಲ್ ಕಳೆದುಹೋದಾಗ ನಮಗೆ ಒತ್ತಡ, ಆತಂಕ ಉಂಟಾಗುವುದು ಸಹಜ. ಏಕೆಂದರೆ, ಮೊಬೈಲ್ನಲ್ಲಿ ನಮ್ಮೆಲ್ಲ ಖಾಸಗಿ ಮಾಹಿತಿಗಳೂ ದಾಖಲಾಗಿರುತ್ತವೆ. ನಾವು ದಿನನಿತ್ಯ ಎಲ್ಲ ವಹಿವಾಟುಗಳಿಗೆ ಮೊಬೈಲನ್ನೇ ಅವಲಂಬಿಸಿರುತ್ತೇವೆ. ಆದರೆ, 10,000 ಆಸನಗಳ ಕ್ರೀಡಾಂಗಣದಲ್ಲಿ ಮೊಬೈಲನ್ನು ಕಳೆದುಕೊಂಡಾಗ ಅದು ವಾಪಾಸ್ ಸಿಕ್ಕೀತೆಂಬ ಸಣ್ಣ ಆಸೆಯೂ ಇರಲಾರದು.
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಹಾಂಗ್‌ಕಾಂಗ್‌ನ 12 ವರ್ಷದ ಚೆಸ್ ಆಟಗಾರ್ತಿಯೊಬ್ಬರು ತನ್ನ ಮೊಬೈಲ್ ಫೋನ್ ಅನ್ನು ಎಲ್ಲೋ ಇರಿಸಿ, ಕಳೆದುಕೊಂಡಿದ್ದರು. ಆ ಫೋನ್ಗೆ ಮಿಸ್ ಕಾಲ್ ಕೊಟ್ಟು ಹುಡುಕೋಣವೆಂದರೆ ಅದು ಸ್ವಿಚ್ ಆಫ್ ಆಗಿತ್ತು.
ಆದರೂ ಕ್ರೀಡಾಕೂಟದಲ್ಲಿ ಸ್ವಯಂಸೇವಕರು ಆ ಮೊಬೈಲನ್ನು ಹುಡುಕುವುದು ‘ಮಿಷನ್ ಇಂಪಾಸಿಬಲ್’ ಅಲ್ಲ ಎಂದು ಸಾಬೀತುಪಡಿಸಿದರು. ಅವರು 5,23,000 ಚದರ ಮೀಟರ್ ವಿಸ್ತಾರದ ಕ್ರೀಡಾಂಗಣದಲ್ಲಿ ಮೊಬೈಲನ್ನು ಪತ್ತೆಹಚ್ಚಲು ಪ್ರಾರಂಭಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹೆರಿಗೆ ಲಂಚಕ್ಕಾಗಿ ಗರ್ಭಿಣಿ ಪತಿಯ ಮೊಬೈಲ್ ಅಡವಿಟ್ಟುಕೊಂಡ ವೈದ್ಯರು
ಅವರು ರಾತ್ರಿಯಿಡೀ ಹತ್ತಾರು ಸಾವಿರ ಕಸದ ಚೀಲಗಳನ್ನು ಹುಡುಕಾಡಿದರು. ಚೆಸ್ ಆಟಗಾರ್ತಿ ಲಿಯು ಟಿಯಾನ್-ಯಿ ಅವರ ಫೋನ್ ಕೊನೆಗೂ ಕಸದ ಚೀಲವೊಂದರಲ್ಲಿ ಸೇರಿಕೊಂಡಿತ್ತು. ಆ ಮೊಬೈಲನ್ನು ಹುಡುಕಿದ್ದು ಯಾವ ಪವಾಡಕ್ಕಿಂತೂ ಕಡಿಮೆಯೇನಿಲ್ಲ.
ಕಳೆದುಹೋದ ಫೋನ್ ಅನ್ನು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹುಡುಕಲಾಗಿದೆ. ಸುಮಾರು 10,000 ಆಸನಗಳಿರುವ 5,23,000 ಚದರ ಮೀಟರ್‌ನ ಕ್ರೀಡಾಂಗಣದಲ್ಲಿ ಸ್ವಿಚ್ ಆಫ್ ಆಗಿರುವ ಕಳೆದುಹೋದ ಮೊಬೈಲ್ ಫೋನ್ ಅನ್ನು ಪತ್ತೆ ಮಾಡುವುದು ಅಸಾಧ್ಯವೆಂದುಕೊಳ್ಳಲಾಗಿತ್ತು. ಆದರೆ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಇದನ್ನು ಸಾಧ್ಯವಾಗಿಸಿದೆ. ಸ್ವಯಂಸೇವಕರ ಗುಂಪು ರಾತ್ರಿಯಿಡೀ ಹತ್ತಾರು ಕಸದ ಚೀಲಗಳನ್ನು ಶೋಧಿಸಿತು. ಕೊನೆಗೂ ಆ ಮೊಬೈಲ್ ಆಟಗಾರ್ತಿಯ ಕೈ ಸೇರಿದೆ” ಎಂದು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ: ಬೆಕ್ಕು ಎಂದುಕೊಂಡು ಕಪ್ಪುಚಿರತೆಯನ್ನು ಸಾಕಿದ ಯುವತಿ; ವಿಡಿಯೋ ವೈರಲ್
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23ರಂದು ಆರಂಭವಾಗಿದೆ. 45 ದೇಶಗಳ 12,000ಕ್ಕೂ ಹೆಚ್ಚು ಕ್ರೀಡಾಪಟುಗಳು ಅಕ್ಟೋಬರ್ 8ರವರೆಗೆ ಇಲ್ಲಿ ಸ್ಪರ್ಧಿಸಲಿದ್ದಾರೆ. ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಕಳೆದ ವರ್ಷ ನಡೆಯಬೇಕಿತ್ತು ಆದರೆ ಚೀನಾದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಅದನ್ನು ಮುಂದೂಡಲಾಗಿತ್ತು.