ಬೆಕ್ಕು ಎಂದುಕೊಂಡು ಕಪ್ಪುಚಿರತೆಯನ್ನು ಸಾಕಿದ ಯುವತಿ; ವಿಡಿಯೋ ವೈರಲ್

ಬ್ಲಾಕ್ ಪ್ಯಾಂಥರ್ ಅನ್ನು ರಕ್ಷಿಸಿ, ಬೆಕ್ಕೆಂದುಕೊಂಡು ಸಾಕಿದ ಆ ಯುವತಿಯ ಕಾರ್ಯ ಸಾಮಾಜಿಕ ಮಾಧ್ಯಮದ ಗಮನವನ್ನು ಸೆಳೆದಿದೆ. ಕಪ್ಪು ಚಿರತೆ ಮರಿಯೊಂದಿಗೆ ಆಕೆ ಆಟವಾಡುತ್ತಿರುವ ಘಟನೆಯ ವೀಡಿಯೊ ವೈರಲ್ ಆಗಿದೆ.

ಬೆಕ್ಕು ಎಂದುಕೊಂಡು ಕಪ್ಪುಚಿರತೆಯನ್ನು ಸಾಕಿದ ಯುವತಿ; ವಿಡಿಯೋ ವೈರಲ್
ಕಪ್ಪು ಚಿರತೆಯೊಂದಿಗೆ ಯುವತಿImage Credit source: Hindustan Times
Follow us
ಸುಷ್ಮಾ ಚಕ್ರೆ
|

Updated on: Sep 25, 2023 | 7:32 PM

ಪ್ರಾಣಿಪ್ರಿಯಳಾಗಿದ್ದ ರಷ್ಯಾದ ಯುವತಿಯೊಬ್ಬಳು ತನಗೆ ಕಪ್ಪು ಬೆಕ್ಕಿನ ಮರಿ ಬೇಕೆಂದು ರಸ್ತೆಬದಿಯಲ್ಲಿದ್ದ ಕಪ್ಪನೆಯ ಬೆಕ್ಕಿನ ಮರಿಯನ್ನು ಮನೆಗೆ ತಂದಿದ್ದಳು. ಮಗುವಿನಂತೆ ಪ್ರೀತಿಯಿಂದ ಆ ಮರಿಯನ್ನು ಸಾಕುತ್ತಿದ್ದಳು. ನೋಡಲು ದಷ್ಟಪುಷ್ಟವಾಗಿದ್ದ ಆ ಮರಿಯನ್ನು ಆಕೆ ಪರ್ಷಿಯನ್ ಕ್ಯಾಟ್ ಎಂದು ಭಾವಿಸಿಕೊಂಡು, ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದಳು. ಆದರೆ, ಆ ಮರಿ ದೊಡ್ಡದಾದ ನಂತರ ಅದು ಬೆಕ್ಕಿನ ಮರಿಯಲ್ಲ, ಕಪ್ಪು ಚಿರತೆ ಮರಿ ಎಂಬುದು ಗೊತ್ತಾಗಿದೆ!

ಬ್ಲಾಕ್ ಪ್ಯಾಂಥರ್ ಅನ್ನು ರಕ್ಷಿಸಿ, ಬೆಕ್ಕೆಂದುಕೊಂಡು ಸಾಕಿದ ಆ ಯುವತಿಯ ಕಾರ್ಯ ಸಾಮಾಜಿಕ ಮಾಧ್ಯಮದ ಗಮನವನ್ನು ಸೆಳೆದಿದೆ. ಕಪ್ಪು ಚಿರತೆ ಮರಿಯೊಂದಿಗೆ ಆಕೆ ಆಟವಾಡುತ್ತಿರುವ ಘಟನೆಯ ವೀಡಿಯೊ ವೈರಲ್ ಆಗಿದೆ.

ಇದನ್ನೂ ಓದಿ: Viral News: ಹಾಸ್ಟೆಲ್‌ನ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ; ಪೋಸ್ಟ್​​ ವೈರಲ್​​

ಆ ಯುವತಿ ಬ್ಲಾಕ್ ಪ್ಯಾಂಥರ್ ಅನ್ನು ಎತ್ತಿಕೊಂಡು ಅದನ್ನು ನೋಡಿಕೊಳ್ಳಲು ಮನೆಗೆ ತೆಗೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಪ್ರಾಣಿ ಬೆಳೆಯುತ್ತಿದ್ದಂತೆ ಅದು ಕಪ್ಪು ಪ್ಯಾಂಥರ್ ಎಂದು ಆಕೆಗೆ ಗೊತ್ತಾಗುತ್ತದೆ. ಆದರೂ ಅವರಿಬ್ಬರ ನಡುವಿನ ಬಾಂಧವ್ಯ ಮಾತ್ರ ಹಾಗೇ ಇರುತ್ತದೆ.

View this post on Instagram

A post shared by @factmayor

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ಪೋಸ್ಟ್ ಅನ್ನು ಸೆಪ್ಟೆಂಬರ್ 21ರಂದು ಹಂಚಿಕೊಳ್ಳಲಾಗಿದೆ. ಆಗಿನಿಂದ ಇದು 9.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಲವರು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದರೆ ಇನ್ನು ಕೆಲವರು ವಿಡಿಯೋ ನೋಡಿ ಬೆಚ್ಚಿ ಬಿದ್ದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ