ಚಿಕ್ಕಬಳ್ಳಾಪುರ: ಹೆರಿಗೆ ಲಂಚಕ್ಕಾಗಿ ಗರ್ಭಿಣಿ ಪತಿಯ ಮೊಬೈಲ್ ಅಡವಿಟ್ಟುಕೊಂಡ ವೈದ್ಯರು

ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯಸರ್ಕಾರ ಚಿಕ್ಕಬಳ್ಳಾಪುರದಲ್ಲಿ 525 ಕೋಟಿಗೂ ಹೆಚ್ಚು ಮೊತ್ತದ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಭ ಮಾಡಿದ್ದು, ಇದೇ ವೈದ್ಯಕೀಯ ಕಾಲೇಜಿಗೆ ಒಪ್ಪಂದದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ನೀಡಿದೆ. ಆದರೆ, ವೈದ್ಯರು ಹೆರಿಗೆ ಮಾಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಹೆರಿಗೆ ಲಂಚಕ್ಕಾಗಿ ಗರ್ಭಿಣಿ ಪತಿಯ ಮೊಬೈಲ್ ಅಡವಿಟ್ಟುಕೊಂಡ ವೈದ್ಯರು
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on: Sep 25, 2023 | 5:48 PM

ಚಿಕ್ಕಬಳ್ಳಾಪುರ, ಸೆ.25: ಜನರ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯಸರ್ಕಾರ ಚಿಕ್ಕಬಳ್ಳಾಪುರದಲ್ಲಿ (Chikkaballapur) 525 ಕೋಟಿಗೂ ಹೆಚ್ಚು ಮೊತ್ತದ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಭ ಮಾಡಿದ್ದು, ಇದೇ ವೈದ್ಯಕೀಯ ಕಾಲೇಜಿಗೆ ಒಪ್ಪಂದದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ನೀಡಿದೆ. ಆದರೆ ವೈದ್ಯಕೀಯ ಕಾಲೇಜಿನ ವೈದ್ಯರುಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಸಮರ್ಪಕ ಮಾನವೀಯತೆಯಿಂದ ಕರ್ತವ್ಯ ಸಮರ್ಪಣೆಯಿಂದ ಚಿಕಿತ್ಸೆ ನೀಡದೇ ಬೇಜವಬ್ದಾರಿಯಿಂದ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿ ಎನ್.ಅಮೃತಾ ಹೆರಿಗೆಗೆಂದು ಸೆಪ್ಟೆಂಬರ್-18 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್-19 ರಂದು ಬೆಳಿಗ್ಗೆ 1-00 ಗಂಟೆಗೆ ಸಿಜರಿಯನ್ ಹೆರಿಗೆ ಮಾಡಿಸಲಾಗಿದೆ. ಹೆರಿಗೆ ಸಂದರ್ಭದಲ್ಲಿ 4000 ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿದೆ. ಅಮೃತ ಹಾಗೂ ಆಕೆಯ ಗಂಡ ರಘು ಹಾಗೂ ತಂದೆ-ತಾಯಿ ಕಡುಬಡವರಾಗಿದ್ದು, ಲಂಚ ನೀಡಲು ಹಣವಿರಲಿಲ್ಲ. ಆಗ ಕರ್ತವ್ಯನಿರತ ವೈದ್ಯರು ಬಾಣಂತಿಯ ಗಂಡ ರಘುವಿನ ಮೊಬೈಲ್ ಪೋನ್‍ನನ್ನು ಲಂಚಕ್ಕಾಗಿ ಅಡವಿಟ್ಟುಕೊಂಡಿದ್ದರು. ಅಂದು ಬೆಳಿಗ್ಗೆ ಬಾಣಂತಿಯ ಕಾಲು, ಚೈನನ್ನು ಅಡವಿಟ್ಟು, 2000 ರೂಪಾಯಿ ಲಂಚ ನೀಡಿದ್ದಾರೆ. ನಂತರ ಅವರ ಮೊಬೈಲ್‍ನ್ನು ಹಿಂತಿರುಗಿಸಲಾಗಿದೆ. ನಂತರ ಸೆಪ್ಟೆಂಬರ್-23 ರಂದು ಬೆಳಿಗ್ಗೆ ಬಾಣಂತಿಯನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಬಾಕಿ 2000 ರೂಪಾಯಿ ಲಂಚದ ಹಣ ನೀಡುವವರೆಗೂ ಚಿಕಿತ್ಸೆಗೆ ಹಾಗೂ ಡಿಸ್ಚಾರ್ಜ್‍ಗೆ ಮುಂದಾಗಿಲ್ಲ. ಅಂದು ಮಧ್ಯಾಹ್ನ ಬಾಣಂತಿಯ ನೊಂದ ತಂದೆ ಟಿವಿ-9ಗೆ ಕರೆ ಮಾಡಿ, ಲಂಚದ ವಿಚಾರ ಹೇಳಿಕೊಂಡು ಸಹಾಯಕ್ಕೆ ಮೊರೆಹಿಟ್ಟಿದ್ದರು.

ಅಂದು ಟಿವಿ-9 ಪ್ರತಿನಿಧಿ ಭೀಮಪ್ಪ ಪಾಟೀಲ, ಸಾರ್ವಜನಿಕ ಕಳಕಳಿ ಹಾಗೂ ಮಾನವೀಯತೆಯಿಂದ ಆಸ್ಪತ್ರೆಗೆ ತೆರೆಳಿ ಅವರ ಬಳಿ ಮಾಹಿತಿ ಪಡೆಯುತ್ತಿದ್ದಂತೆ, ನಂತರವಷ್ಟೆ ವೈದ್ಯರು ಬಾಣಂತಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ.

ಇದನ್ನೂ ಓದಿ: HN Valley ಎಫೆಕ್ಟ್​! ಜಿಲ್ಲೆಯೆಲ್ಲಾ ಬರ ಇದ್ದರೂ ಚಿಕ್ಕಬಳ್ಳಾಪುರ ತಾಲ್ಲೂಕು ಹಸಿರು ಸಿರಿಸಂಪನ್ನ

ಆಗಲೂ ನೊಂದವರು ವೈದ್ಯರ ಲಂಚಾವತಾರವನ್ನು ಟಿವಿ-9ಗೆ ತಿಳಿಸಿದ ಕಾರಣ, ಬಾಣಂತಿಗೆ ಎದೆಹಾಲು ಬರುವುದಿಲ್ಲವೆಂದು ಆಕೆಗೆ ಭಯ, ಭೀತಿ ಉಂಟು ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೆರಿಗೆಗೆಂದು ದಾಖಲಾದ ಸಮಯದಲ್ಲಿ ದಾದಿಯರು, ವೈದ್ಯರು ಸೇರಿದಂತೆ ಕಡುಬಡವರಿಂದ 24,000 ರೂಪಾಯಿ ಹಣ ವಸೂಲಿ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಆಸ್ಪತ್ರೆಗೆ ಬರುವವರು ಕಡುಬಡವರೆನ್ನದೇ ಮಾನವೀಯತೆ ಇಲ್ಲದೇ, ತಾವು ಸರ್ಕಾರಿ ವೈದ್ಯರೂ ಎನ್ನುವ ಸೌಜನ್ಯವೂ ಇಲ್ಲದೇ ಪ್ರತಿಯೊಂದು ಹೆರಿಗೆಗೂ ಗಂಡು ಮಗುವಿಗಿಷ್ಟು, ಹೆಣ್ಣು ಮಗುವಿಗಿಷ್ಟು ಎಂಬುದಾಗಿ ಲಂಚ ಫಿಕ್ಸ್ ಮಾಡಿರುವ ಆರೋಪ ಹಾಗೂ ದೂರುಗಳು ಕೇಳಿಬಂದಿವೆ.

ಇನ್ನೂ ಇಂದು ನಡೆದ ಜನತಾ ದರ್ಶನದಲ್ಲಿ ಈ ವಿಚಾರವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಗಮನಕ್ಕೆ ತರಲಾಯಿತು. ಸಚಿವರು ಅಯ್ಯೊ ಚಿಕ್ಕಬಳ್ಳಾಪುರ ಅಷ್ಟೆ ಅಲ್ಲಾ ಚಿಂತಾಮಣಿಯಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಈ ಪ್ರಕರಣವನ್ನು ತನಿಖೆ ನಡೆಸಿ ಸೂಕ್ತ ವರದಿ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು