ಚಿಕ್ಕಬಳ್ಳಾಪುರ: ಗ್ರಾಮಸ್ಥರು, ಸ್ಥಳೀಯ ವಕೀಲನ ಮದ್ಯೆ ಮಾರಾಮಾರಿ; ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ
ಗ್ರಾಮಸ್ಥರು ಹಾಗೂ ಸ್ಥಳೀಯ ವಕೀಲನ ಮದ್ಯೆ ಮಾರಾಮಾರಿ ನಡೆದು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಂಡ್ರಗಾನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮಾರಾಮಾರಿ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಬಳ್ಳಾಪುರ, ಸೆ.26: ಖಾಸಗಿ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ವಿವಾದ ವಿಚಾರದಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯ ವಕೀಲನ ಮದ್ಯೆ ಮಾರಾಮಾರಿ ನಡೆದು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಂಡ್ರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಇವರುಗಳ ಮಾರಾಮಾರಿ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ವೈರಲ್ ಆಗಿದೆ.
ಘಟನೆ ವಿವರ
ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹಾಗೂ ಕಡಪ ರಸ್ತೆ, ಗಂಡ್ರಗಾನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸಂಪರ್ಕ ರಸ್ತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ವಕೀಲ ಬಾಸ್ಕರ್ ರೆಡ್ಡಿಗೂ ಹಾಗೂ ಸ್ಥಳಿಯ ಗ್ರಾಮಸ್ಥರ ಮದ್ಯೆ ವಿವಾದ ಇತ್ತು. ಇದರಿಂದ ಪರಸ್ಪರ ಎರಡು ಕಡೆಯವರು ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಸ್ಥಳೀಯ ಕೆಂಚಾರ್ಲಹಳ್ಳಿ ಪೊಲೀಸರು, ಕಂದಾಯ ಹಾಗೂ ಪಿ.ಡ್ಲೂ.ಡಿ ಅಧಿಕಾರಿಗಳು ನಿನ್ನೆ(ಸೆ.25) ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:ಚಿಕ್ಕಮಗಳೂರು: ಗಾಂಜಾ ಮಾರಾಟ ವಿಚಾರವಾಗಿ ಪೆಡ್ಲರ್ಗಳ ನಡುವೆ ಮಾರಾಮಾರಿ: ಲಾಂಗ್, ಡ್ಯಾಗರ್ನಿಂದ ದಾಳಿ
ಈ ವೇಳೆ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಹಾಗೂ ಬಾಸ್ಕರ್ ರೆಡ್ಡಿ ಮದ್ಯೆ ಗಲಾಟೆ ವಿಕೋಪಕ್ಕೆ ತಿರುಗಿದೆ. ಪೊಲೀಸ್ ಬಂದೋಬಸ್ತ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿಯೇ ನಾನಾ, ನೀನಾ ಎಂದು ಬಡಿದಾಡಿಕೊಂಡಿದ್ದಾರೆ. ವಕೀಲ ಬಾಸ್ಕರ್ ರೆಡ್ಡಿ ಮೇಲೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್, ಹಾಗೂ ಶ್ರೀನಿವಾಸ್ ಮತ್ತು ಅವರ ತಂಡದ ಮೇಲೆ ಬಾಸ್ಕರ್ ರೆಡ್ಡಿ ಪರಸ್ಪರ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು- ಪ್ರತಿದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ