ಚಿಕ್ಕಮಗಳೂರು: ಗಾಂಜಾ ಮಾರಾಟ ವಿಚಾರವಾಗಿ ಪೆಡ್ಲರ್ಗಳ ನಡುವೆ ಮಾರಾಮಾರಿ: ಲಾಂಗ್, ಡ್ಯಾಗರ್ನಿಂದ ದಾಳಿ
ಗಾಂಜಾ ಮಾರಾಟ ವಿಚಾರವಾಗಿ ಪೆಡ್ಲರ್ಗಳ ನಡುವೆ ಮಾರಾಮಾರಿ ನಡೆದಿದ್ದು, ಕುಖ್ಯಾತ ಗಾಂಜಾ ಪೆಡ್ಲರ್ ಇಬ್ರಾಹಿಂ ಮೇಲೆ ಲಾಂಗ್, ಡ್ಯಾಗರ್ನಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ನಗರದ ಗೌರಿಕಾಲುವೆ ಬಳಿ ನಡೆದಿದೆ. ನದೀಂ ಸಹಚರರಾದ ಸಾದಿಕ್, ಜುಲ್ಫಿಕರ್, ಜೀಷಾನ್ ಸೇರಿ ಐವರಿಂದ ಹಲ್ಲೆ ಮಾಡಲಾಗಿದೆ.
ಚಿಕ್ಕಮಗಳೂರು, ಸೆಪ್ಟೆಂಬರ್ 3: ಗಾಂಜಾ ಮಾರಾಟ ವಿಚಾರವಾಗಿ ಪೆಡ್ಲರ್ಗಳ (peddlers) ನಡುವೆ ಮಾರಾಮಾರಿ ನಡೆದಿದ್ದು, ಕುಖ್ಯಾತ ಗಾಂಜಾ ಪೆಡ್ಲರ್ ಇಬ್ರಾಹಿಂ ಮೇಲೆ ಲಾಂಗ್, ಡ್ಯಾಗರ್ನಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ನಗರದ ಗೌರಿಕಾಲುವೆ ಬಳಿ ನಡೆದಿದೆ. ನದೀಂ ಸಹಚರರಾದ ಸಾದಿಕ್, ಜುಲ್ಫಿಕರ್, ಜೀಷಾನ್ ಸೇರಿ ಐವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಗಾಯಾಳು ಇಬ್ರಾಹಿಂನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಜಾ ಮಾರಾಟ ವಿಚಾರವಾಗಿ ಇಬ್ರಾಹಿಂ, ಚಿಟ್ಟು ನದೀಂ ನಡುವೆ ಗಲಾಟೆ ಆಗಿದೆ. ಈ ವೇಳೆ ಇಬ್ರಾಹಿಂ ಮೇಲೆ ಹಲ್ಲೆ ನಡೆಸಿ ಚಿಟ್ಟು ನದೀಂ ಮತ್ತಿತರರು ಪರಾರಿಯಾಗಿದ್ದಾರೆ. ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಯಪುರ ಬಳಿ ಓಮಿನಿಗೆ ಲಾರಿ ಡಿಕ್ಕಿ: ಓರ್ವನ ಸಾವು, ನಾಲ್ವರಿಗೆ ಗಾಯ
ಚಿತ್ರದುರ್ಗ: ಜಯಪುರ ಬಳಿ ಓಮಿನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ. ಓಮಿನಿ ವ್ಯಾನಲ್ಲಿದ್ದ ತಮಟಕಲ್ಲು ಗ್ರಾಮದ ಚಾಮರಾಜ್(45) ಮೃತ ವ್ಯಕ್ತಿ. ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಪರಿಚಿತ ವಾಹನ ಡಿಕ್ಕಿ: ಬೈಕ್ನಲ್ಲಿ ತೆರಳ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವು
ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿರಾ ತಾಲೂಕಿನ ತರೂರು ಗ್ರಾಮದ ಬಳಿ ದುರ್ಘಟನೆ ನಡೆದಿದೆ. ತುಮಕೂರಿನ ಅಂತರಸನಹಳ್ಳಿಯರವರಾದ ಬೈಕ್ ಸವಾರ ಶಶಿಕುಮಾರ್(23), ಮೀನಾಕ್ಷಿ(30) ಮೃತರು.
ಇದನ್ನೂ ಓದಿ: ಶಿವಮೊಗ್ಗ: ಅಕ್ಕನ ಜೊತೆ ಅನೈತಿಕ ಸಂಬಂಧ, ಯುವಕನಿಗೆ ವಾರ್ನಿಂಗ್ ಮಾಡಿದ ತಮ್ಮ; ಮುಂದೆನಾಯ್ತು?
ಆಂಧ್ರಪ್ರದೇಶದ ಅಗಳಿಗೆ ಬೈಕ್ನಲ್ಲಿ ಮದುವೆಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ತುಮಕೂರಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಳೆ ಕೊರತೆ ಹಾಗೂ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ವಿಜಯಪುರ: ಇಂಡಿ ತಾಲೂಕಿನ ಚಿಕ್ಕಬೇವನೂರು ಗ್ರಾಮದಲ್ಲಿ ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಈರಪ್ಪ ಜಂಬಗಿ(48) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ನಲ್ಲಿ 65 ಸಾವಿರ ರೂ. ಸೇರಿದಂತೆ ಖಾಸಗಿ ವ್ಯಕ್ತಿಗಳ ಬಳಿ ಕೈಸಾಲ ಪಡೆದಿದ್ದರು. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.