ಚಿಕ್ಕಬಳ್ಳಾಪುರ: ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಯತ್ನ: ಅದೃಷ್ಟವಶಾತ್​ ಪಾರಾದ ಇಬ್ಬರು ಯುವಕರು, ಬಂಧನ

Chikkaballapur News: ಇಬ್ಬರು ಯುವಕರ ಮಧ್ಯೆ ಇದ್ದ ವೈಯಕ್ತಿಕ ವೈಶಮ್ಯ, ಲಾಂಗು-ಮಚ್ಚುಗಳಿಂದ ಅಟ್ಟಾಡಿಸಿ ಕೊಲೆ ಯತ್ನ ಮಾಡುವವರೆಗೂ ಹೋಗಿದ್ದು, ಅದೃಷ್ಟವಶಾತ್ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಸದ್ಯ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಯತ್ನ: ಅದೃಷ್ಟವಶಾತ್​ ಪಾರಾದ ಇಬ್ಬರು ಯುವಕರು, ಬಂಧನ
ಬಂಧಿತರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 21, 2023 | 7:59 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 21: ಇಬ್ಬರು ಯುವಕರ ಮಧ್ಯೆ ಇದ್ದ ವೈಯಕ್ತಿಕ ವೈಶಮ್ಯ, ಲಾಂಗು-ಮಚ್ಚುಗಳಿಂದ ಅಟ್ಟಾಡಿಸಿ ಕೊಲೆ ಯತ್ನ ಮಾಡುವವರೆಗೂ ಹೋಗಿದ್ದು, ಅದೃಷ್ಟವಶಾತ್ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ನಡೆದಿದೆ. ಲಾಂಗು, ಮಚ್ಚು ಹಿಡಿದು ಅಟ್ಟಾಡಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೆಲಕಾಲ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಘಟನೆ ಹಿನ್ನಲೆ ಏನು?

ಅಸಲಿಗೆ ಚಿಕ್ಕಬಳ್ಳಾಪುರ ನಗರದ ಡಿವೈನ್ ಸಿಟಿ ನಿವಾಸಿ ಬಿ.ಎನ್.ನರಸಿಂಹಮೂರ್ತಿ ಅಲಿಯಾಸ್ ವಿಕ್ಕಿ, ಜಿಮ್ ಕೋಚರ್ ಹಾಗೂ ಎಲ್.ಎಲ್.ಬಿ. ವಿದ್ಯಾರ್ಥಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಗಾನಹಳ್ಳಿ ಗ್ರಾಮದ ನಿವಾಸಿ ಹೆಚ್.ಪಿ.ಚಂದ್ರಶೇಖರ್ ನಡುವೆ ವೈಯಕ್ತಿಕ ವೈಶಮ್ಯವಿತ್ತಂತೆ. ಕ್ಷುಲ್ಲಕ ಕಾರಣ ಚಂದ್ರಶೇಖರ್ ಹಾಗೂ ಆತನ ತಂಡ ವಿಕ್ಕಿ ತಂಡದ ಇಬ್ಬರು ವಿದ್ಯಾರ್ಥಿಗಳಾದ ನಂದೀಶ್ ಹಾಗೂ ಕಾರ್ತಿಕ ಮೇಲೆ ಹಲ್ಲೆ ಯತ್ನ ಮಾಡಿದ್ದರಂತೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಚಂದ್ರಶೇಖರ್, ನರಸಿಂಹಮೂರ್ತಿ ಮಧ್ಯೆ ವೈಯಕ್ತಿಕ ದ್ವೇಷ, ಪ್ರತಿಷ್ಠೆ ಬೆಳೆದಿದೆ. ಚಂದ್ರಶೇಖರ್, ನರಸಿಂಹಮೂರ್ತಿಗೆ ಕೊಲೆ ಬೆದರಿಕೆ ಹಾಕಿದ್ದನಂತೆ.

ಲಾಂಗು-ಮಚ್ಚುಗಳಿಂದ ಕೊಲೆಗೆ ಯತ್ನ:

ಎಲ್‌ಎಲ್‌ಬಿ ವಿದ್ಯಾರ್ಥಿ ಚಂದ್ರಶೇಖರ್ ಅಂದುಕೊಂಡಂತೆ ತಮ್ಮ ಸಂಗಡಿಗರಾದ ಚೆಂಡೂರು ಗ್ರಾಮದ ಅರವಿಂದ, ಹರೀಶ, ಪೈಯೂರು ಗ್ರಾಮದ ಪ್ರಸಾದ್ ಮತ್ತು ಬೀಚಗಾನಹಳ್ಳಿ ಕ್ರಾಸ್‌ನ ಹರೀಶ 4 ಜನರಿಗೆ ಸುಫಾರಿ ಕೊಟ್ಟು, ಜಿಮ್‌ಕೋಚರ್ ಬಿ.ಎನ್.ನರಸಿಂಹಮೂರ್ತಿ ಕೊಲೆಗೆ ಕಳುಹಿಸಿಕೊಟ್ಟಿದ್ದನಂತೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮೋಜು-ಮಸ್ತಿಗಾಗಿ ರೈತರ ನಿದ್ದೆ ಕೆಡೆಸಿದ್ದ ದಾಳಿಂಬೆ ಕಳ್ಳರು, ಟಿವಿ9 ಡಿಜಿಟಲ್ ವರದಿಯಿಂದ ಎಚ್ಚೆತ್ತ ಪೊಲೀಸರು!

ನಿನ್ನೆ ರಾತ್ರಿ 8-45ರ ಸಮಯದಲ್ಲಿ ವಾಪಸಂದ್ರದಲ್ಲಿರುವ ಗಣೇಶೋತ್ಸವದ ಬಳಿ ಬಂದ 4 ಜನರು, ನರಸಿಂಹಮೂರ್ತಿ ಹಾಗೂ ಆತನ ಜೊತೆಗಿದ್ದ ಮಂಜುನಾಥ್ ಮೇಲೆ ಲಾಂಗು-ಮಚ್ಚು ಬೀಸಿದ್ದಾರೆ. ಇದನ್ನರಿತ ನರಸಿಂಹಮೂರ್ತಿ ಹಾಗೂ ಮಂಜುನಾಥ್ ಪ್ರಾಣಾಪಾಯದಿಂದ ದಿಕ್ಕುಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಅಡ್ಡಬಂದ ಸಾರ್ವಜನಿಕರಿಗೆ ಲಾಂಗು-ಮಚ್ಚನಿಂದ ಬೆದರಿಕೆ

ಆರೋಪಿಗಳಾದ ಅರವಿಂದ, ಹರೀಶ, ಪ್ರಸಾದ್ ಮತ್ತು ಬೀಚಗಾನಹಳ್ಳಿ ಕ್ರಾಸ್‌ನ ಹರೀಶ 4 ಜನ ಕೈಯಲ್ಲಿ ಲಾಂಗು-ಮಚ್ಚು ಹಿಡಿದು ನರಸಿಂಹಮೂರ್ತಿ ಹಾಗೂ ಮಂಜುನಾಥನನ್ನು ಅಟ್ಟಾಡಿಸಿಕೊಂಡು ಓಡಿದ್ದಾರೆ. ಆಗ ರಸ್ತೆಯಲ್ಲಿ ಅಡ್ಡಬಂದ ಸಾರ್ವಜನಿಕರತ್ತ ಲಾಂಗು-ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ.

ಆರೋಪಿಗಳ ಅಟ್ಟಹಾಸ ಸಿಸಿ ಕ್ಯಾಮೆರಾಗಳಲ್ಲಿ ಸೆರೆ

ನರಸಿಂಹಮೂರ್ತಿ ಕೊಲೆಗೆ ಬಂದಿದ್ದ 4 ಜನ ಆರೋಪಿಗಳ ಕೃತ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಯುವಕರು ಮುಂದೆ ಓಡಿಹೋಗುವುದು, ಅವರನ್ನು ಬೆನ್ನಟ್ಟಿ ಲಾಂಗು-ಮಚ್ಚು ಹಿಡಿದು ಓಡುತ್ತಿರುವ ದೃಶ್ಯ ಸ್ಥಳೀಯರ ಮನೆಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಂದ್ರಶೇಖರ್ ಸೇರಿ ಆರೋಪಿಗಳ ಬಂಧನ 

ಜಿಮ್ ಕೋಚರ್ ಬಿ.ಎನ್.ನರಸಿಂಹಮೂರ್ತಿ ಅಲಿಯಾಸ್ ವಿಕ್ಕಿ ಕೊಲೆಗೆ ಬಂದಿದ್ದ ಪ್ರಸಾದ್, ಅರವಿಂದ ಸೇರಿ ಕೊಲೆ ಸುಫಾರಿ ನೀಡಿದ್ದ ಎಲ್‌ಎಲ್‌ಬಿ ವಿದ್ಯಾರ್ಥಿ ಚಂದ್ರಶೇಖರ್‌ನನ್ನು ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 120ಬಿ, 504, 34 ಹಾಗೂ ಆರ್‌ಎಂಸಿ ಆಕ್ಟ್​ 21(1)ರಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:54 pm, Thu, 21 September 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್