HN Valley ಎಫೆಕ್ಟ್! ಜಿಲ್ಲೆಯೆಲ್ಲಾ ಬರ ಇದ್ದರೂ ಚಿಕ್ಕಬಳ್ಳಾಪುರ ತಾಲ್ಲೂಕು ಹಸಿರು ಸಿರಿಸಂಪನ್ನ
ಹಲವು ವರ್ಷಗಳಿಂದ ಬಯಲುಸೀಮೆ ಬರದನಾಡು ಎಂಬ ಕುಖ್ಯಾತಿ ಹೊಂದಿದ್ದ ಚಿಕ್ಕಬಳ್ಳಾಪುರ ತಾಲ್ಲೂಕು, ಈಗ ಮಿರಿ ಮಿರಿ ಮಿಂಚುತಿದೆ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲದ ಕಾರಣ ರಾಜ್ಯ ಸರಕಾರ ಚಿಕ್ಕಬಳ್ಳಾಪುರ ತಾಲ್ಲೂಕನ್ನೂ ಬರಪೀಡಿತ ಎಂದು ಘೋಷಿಸಿದೆ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕು ಹೆಸರಿಗಷ್ಟೇ ಬರಪೀಡಿತ ತಾಲ್ಲೂಕು ವಾಸ್ತವಿಕವಾಗಿ ಫಲಪುಷ್ಪ ಗಿರಿಧಾಮಗಳ ನಾಡಾಗಿ ಕಂಗೊಳಿಸುತ್ತಿದೆ.
ಆ ಜಿಲ್ಲೆಯ ಎಲ್ಲಾ ತಾಲೂಕುಗಳು ತೀವ್ರತರವಾದ ಬರದಿಂದ ನಲುಗಿವೆ. ಆದ್ರೆ ಅದೊಂದು ತಾಲೂಕು ಮಾತ್ರ ಬಯಲು ಸೀಮೆಯಲ್ಲೂ ಮಲೆನಾಡಿನಂತೆ ಕಂಗೊಳಿಸುತ್ತಿದೆ, ಎಲ್ಲಿ ನೋಡಿದ್ರೂ ಎತ್ತ ನೋಡಿದ್ರೂ ಹಚ್ಚ ಹಸಿರಿನ ಹೊದಿಕೆ, ಕಣ್ಣು ಹಾಯಿಸಿದ ಕಡೆ, ಹೂ ಹಣ್ಣು, ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳು ನಳನಳಿಸುತ್ತಿವೆ. ಅಷ್ಟಕ್ಕೂ ಅದೆಲ್ಲಿ ಅದ್ಯಾಕೆ ಅಂತೀರಾ? ಈ ವರದಿ ನೋಡಿ!! ಹೀಗೆ ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವ ಹಚ್ಚ ಹಸಿರಿನ ಹೊದಿಕೆ, ಸುಗಂಧ ಬೀರುತ್ತಿರುವ ಹೂವಿನ ತೋಟಗಳು, ತುಂಬಿ ತುಳುಕುತ್ತಿರುವ ಕೆರೆ ಕುಂಟೆಗಳು ಈ ದೃಶ್ಯಗಳು ಕಂಡುಬಂದಿದ್ದು ಬರಪೀಡಿತ ಜಿಲ್ಲೆಯ ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ.
ಹಲವು ವರ್ಷಗಳಿಂದ ಬಯಲುಸೀಮೆ ಬರದನಾಡು ಎಂಬ ಕುಖ್ಯಾತಿ ಹೊಂದಿದ್ದ ಚಿಕ್ಕಬಳ್ಳಾಪುರ ತಾಲ್ಲೂಕು, ಈಗ ಮಿರಿ ಮಿರಿ ಮಿಂಚುತಿದೆ ,ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲದ ಕಾರಣ ರಾಜ್ಯ ಸರಕಾರ ಚಿಕ್ಕಬಳ್ಳಾಪುರ ತಾಲ್ಲೂಕನ್ನೂ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕು ಹೆಸರಿಗಷ್ಟೇ ಬರಪೀಡಿತ ತಾಲ್ಲೂಕು ವಾಸ್ತವಿಕವಾಗಿ ಚಿಕ್ಕಬಳ್ಳಾಫುರ ತಾಲ್ಲೂಕು ಫಲಪುಷ್ಪ ಗಿರಿಧಾಮಗಳ ನಾಡಾಗಿ ಕಂಗೊಳಿಸುತ್ತಿದೆ.
ಸಹಜವಾಗಿ ಜಿಲ್ಲೆಯ ರೈತರು, ಮಳೆಯನ್ನು ಅವಲಂಬಿಸಿ ಇದುವರೆಗೂ ರಾಗಿ ಜೋಳ, ನೆಲಗಡಲೆ ಸೇರಿದಂತೆ ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಿದ್ರು. ಆದ್ರೆ ಹೆಚ್ ಎನ್ ವ್ಯಾಲಿ ಯೋಜನೆಯ ನೀರಿನಿಂದ ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಿ ಬಹುತೇಕ ಕೆರೆಗಳು ತುಂಬಿದ್ದು ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಇದ್ರಿಂದ ರೈತರು ಸಾಂಪ್ರದಾಯಕ ಬೆಳೆಗಳ ಬದಲು ಹೂ ಹಣ್ಣು ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಜಿಲ್ಲೆಯ ವಿವಿಧೆಡೆ ಎಚ್.ಎನ್ ವ್ಯಾಲಿ ಯೋಜನೆ ನೀರು ಜುಳು ಜುಳು ಹರಿಯುತ್ತಿರುವ ಕಾರಣ ಚಿಕ್ಕಬಳ್ಳಾಪುರ ತಾಲೂಕು ಬಯಲು ಸೀಮೆಯ ಮಲೆನಾಡು ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 pm, Sat, 23 September 23