ಪೌರಕಾರ್ಮಿಕರನ್ನು ಯಾರು ಕೀಳಾಗಿ ಕಾಣಬೇಡಿ; ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಅವರು ಆಗಾಗ ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತ ಸುದ್ದಿಯಲ್ಲಿರುತ್ತಾರೆ. ಇಂದು ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರನ್ನು ಕೂರಿಸಿ ಅವರ ಪಾದಗಳನ್ನು ನೀರಿನಲ್ಲಿ ತೊಳೆದು ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ, ಸೆ.23: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಪೌರಕಾರ್ಮಿಕರ ಪಾದಗಳಿಗೆ ಪೂಜೆ(Pada Puja) ಮಾಡಿ ಗೌರವ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರನ್ನು(Pourakarmikas) ಕೂರಿಸಿ ಅವರ ಪಾದಗಳನ್ನು ನೀರಿನಲ್ಲಿ ತೊಳೆದು ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಪ್ರಾಣದ ಹಂಗು ತೊರೆದು ನಗರ ಸ್ವಚ್ಚತೆ ಮಾಡ್ತಿರುವ ಕಾರ್ಮಿಕರು ಎಂದು ಗೌರವ ಸಮರ್ಪಿಸಿದ್ದಾರೆ. ತಟ್ಟೆಯಲ್ಲಿ ಪಾದಯಿರಿಸಿ ಪಾದಪೂಜೆ ಮಾಡಿ ಪೌರಕಾರ್ಮಿಕರನ್ನು ಯಾರು ಕೀಳಾಗಿ ಕಾಣದಂತೆ ಮನವಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos