Viral Video: ಈ ಹೆಬ್ಬಾವುಗಳು ಸಬ್​ಸ್ಟೇಷನ್​ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ?

Rock Python Rescue: ಇದು ಬಹುಶಃ ಬಿಎಸ್​ಎನ್​ಎಲ್​ ಆಫೀಸಿರಬೇಕು ಎಂದಿದ್ದಾರೆ ನೆಟ್ಟಿಗರು. ಸಬ್​ಸ್ಟೇಷನ್​ನಲ್ಲಿ ಅಡಗಿದ್ದ ಈ ಹಾವುಗಳನ್ನು ಮುರಾರಿ ಲಾಲ್​ ಎನ್ನುವ ವನ್ಯಪ್ರಾಣಿ ರಕ್ಷಕರು ರಕ್ಷಿಸಿದ್ದಾರೆ. ಇವರ ಈ ಅದ್ಭುತ ಕಾರ್ಯವನ್ನು ನೆಟ್ಟಿಗರು ಮನಸಾರೆ ಶ್ಲಾಘಿಸುತ್ತಿದ್ದಾರೆ. ಹಾಗೆಯೇ ನಿಮ್ಮ ಜೀವವೂ ಅಮೂಲ್ಯ, ಆದಷ್ಟು ಜೋಪಾನವಾಗಿರಿ ಎಂದು ಮುರಾರಿಯವರಿಗೆ ಎಚ್ಚರಿಸುತ್ತಿದ್ದಾರೆ.

Viral Video: ಈ ಹೆಬ್ಬಾವುಗಳು ಸಬ್​ಸ್ಟೇಷನ್​ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ?
ಹೆಬ್ಬಾವುಗಳನ್ನು ರಕ್ಷಿಸುತ್ತಿರುವ ಮುರಾರಿ ಲಾಲ್
Follow us
|

Updated on: Sep 29, 2023 | 11:31 AM

Python: ಸಬ್‌ಸ್ಟೇಷನ್‌ನೊಳಗೆ ಎರಡು ದೊಡ್ಡ ಹೆಬ್ಬಾವುಗಳು (Rock Python) ಕಾಣಿಸಿಕೊಂಡಿದೆ. ವಿದ್ಯುತ್ ತಂತಿಗಳೊಳಗೆ ಸಿಕ್ಕಿಹಾಕಿಕೊಂಡಿದ್ದ ಈ ಹೆಬ್ಬಾವುಗಳನ್ನು ಧೈರ್ಯಶಾಲಿಯೊಬ್ಬರ ಸೂಕ್ತ ಮಾರ್ಗದರ್ಶನದಲ್ಲಿ ತಂಡವೊಂದು ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ. ಒಂದು ಹೆಬ್ಬಾವು ಸಬ್​ಸ್ಟೇಷನ್​ನ ವಿದ್ಯುತ್​ ತಂತಿಗಳ ಮೇಲೆ ಇತ್ತು. ಇನ್ನೊಂದು ಲೈವ್​ ವೈರ್​​ಗಳೊಳಗೆ ಇತ್ತು. ವಿದ್ಯುತ್ ತಂತಿಗಳಿಂದ ಹಾವುಗಳು ಅಪಾಯಕ್ಕೆ ಈಡಾಗುವ ಮೊದಲೇ ರಕ್ಷಣಾ ತಂಡವು ಇವುಗಳನ್ನು ರಕ್ಷಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು,  ನೆಟ್ಟಿಗರು ರಕ್ಷಣಾ ತಂಡವನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ವಾಟ್​ ಝುಮ್ಕಾ; ಜೋಡಿಯ ಜಬರ್​ದಸ್ತ್ ನೃತ್ಯ, ಪವರ್​ ಪ್ಯಾಕ್ಡ್ ಡ್ಯಾನ್ಸ್​​ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರಾಣಿ ರಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ ಮುರಾರಿ ಲಾಲ್ ಈ ಹಾವನ್ನು ರಕ್ಷಿಸಿದ್ದಾರೆ. ಈ ಸಮಯದಲ್ಲಿ ಒಂದು ಹೆಬ್ಬಾವು ಇವರ ಹೆಬ್ಬೆರಳು ಕಚ್ಚಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಅದ್ಭುತವಾದ ಕಾರ್ಯ. ಆದರೆ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದಿದ್ದಾರೆ.

ಹೆಬ್ಬಾವುಗಳ ಕಾರ್ಯಾಚರಣೆ

ಈ ವಿಡಿಯೋ ಅನ್ನು ಈತನಕ ಸುಮಾರು 7 ಮಿಲಿಯನ್​ ಜನರು ನೋಡಿದ್ದಾರೆ. 5.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ನಿಮ್ಮ ಈ ಪ್ರಾಣಿಪ್ರೇಮವನ್ನು ಹೊಗಳಲು ಶಬ್ದಗಳೇ ಹೊಮ್ಮುತ್ತಿಲ್ಲ. ನಿಜಕ್ಕೂ ಇದು ಅದ್ಭುತವಾದ ಕಾರ್ಯಾಚರಣೆ ಎಂದಿದ್ದಾರೆ ಅನೇಕರು. ಈ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಧೈರ್ಯಶಾಲಿಗಳು ಮಾತ್ರ ಇದನ್ನು ನಿಭಾಯಿಸಲು ಸಾಧ್ಯ ಎಂದಿದ್ದಾರೆ ಒಬ್ಬರು. ಜಾಗ್ರತೆಯಿಂದ ಇಂಥ ಕೆಲಸಗಳಲ್ಲಿ ತೊಡಗಿಕೊಳ್ಳಿ, ನಿಮ್ಮ ಜೀವವೂ ಅಮೂಲ್ಯ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಮಥುರಾ ರೈಲು ಹಳಿಬಿಟ್ಟು ಪ್ಲ್ಯಾಟ್​ಫಾರ್ಮ್​ ಏರಿದ್ದಕ್ಕೆ ಕಾರಣ ಇಲ್ಲಿದೆ

ಇದು ಬಿಎಸ್​​ಎನ್​ಲ್​ ಆಫೀಸಿರಬೇಕು ಎಂದಿದ್ದಾರೆ ಕೆಲವರು. ಯಾಕೆ ನೀವು ಹೊಸ ಉದ್ಯೋಗಿಗಳಿಗೆ ಕೆಲಸದಿಂದ ತೆಗೆಯುತ್ತಿದ್ದೀರಿ ಎಂದು ಕೇಳಿದ್ದಾರೆ ಒಬ್ಬರು. ಅವರು ರಿಪೇರಿ ಮಾಡಿದ ಮೇಲೆ ನೀವು ಅವರಿಗೆ ಸಂಬಳ ಕೊಡದೇ ಹಾಗೆ ಹೊರಹಾಕುವುದು ಸರಿಯೇ? ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ