Viral Video: ವಾಟ್​ ಝುಮ್ಕಾ; ಜೋಡಿಯ ಜಬರ್​ದಸ್ತ್ ನೃತ್ಯ, ಪವರ್​ ಪ್ಯಾಕ್ಡ್ ಡ್ಯಾನ್ಸ್​​ ಎಂದ ನೆಟ್ಟಿಗರು

Aliya Bhat: ಸುಮಾರು ಎರಡು ತಿಂಗಳಿಂದ ಟ್ರೆಂಡಿಂಗ್​​ನಲ್ಲಿರುವ ಈ ಹಾಡಿಗೆ ಅನೇಕರು ರೀಲ್ಸ್ ಮಾಡಿದ್ದಾರೆ. ಆದರೆ ಈ ಜೋಡಿಯಷ್ಟು ಗಮನವನ್ನು ಈತನಕ ಯಾರೂ ಸೆಳೆದಿರಲಿಲ್ಲ. ಇವರು ಅತ್ಯಂತ ಶಕ್ತಿಯುತವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿಜಕ್ಕೂ ಇದು ಅದ್ಭುತವಾದ ಪ್ರದರ್ಶನ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಈ ವಿಡಿಯೋದಡಿ ಹೊಮ್ಮಿಸುತ್ತಿದ್ದಾರೆ. ಈ ಡ್ಯಾನ್ಸ್ ನೋಡಿ.

Viral Video: ವಾಟ್​ ಝುಮ್ಕಾ; ಜೋಡಿಯ ಜಬರ್​ದಸ್ತ್ ನೃತ್ಯ, ಪವರ್​ ಪ್ಯಾಕ್ಡ್ ಡ್ಯಾನ್ಸ್​​ ಎಂದ ನೆಟ್ಟಿಗರು
ವಾಟ್ ಝುಮ್ಕಾ ಹಾಡಿಗೆ ಜೋಡಿಯ ನೃತ್ಯ
Follow us
ಶ್ರೀದೇವಿ ಕಳಸದ
|

Updated on:Sep 29, 2023 | 11:24 AM

Reels: ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನೆಮಾದ ವಾಟ್ ಜುಮ್ಕಾ ಹಾಡು ಸುಮಾರು ಎರಡು ತಿಂಗಳಿನಿಂದ ಟ್ರೆಂಡ್​ನಲ್ಲಿದೆ. ಅನೇಕ ಸಿನೆಮಾ ಕಲಾವಿದರು, ರೂಪದರ್ಶಿಯರು, ರೀಲಿಗರು, ಮಕ್ಕಳಾದಿಯಾಗಿ ವಯಸ್ಸಿನ ಬೇಧವಿಲ್ಲದೆ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಜೋಡಿಯೊಂದು ಭರಪೂರ ಹೆಜ್ಜೆ ಹಾಕಿದೆ. ನೆಟ್ಟಿಗರು ನೃತ್ಯಸಂಯೋಜನೆಯನ್ನು ಮತ್ತು ಈ ಜೋಡಿಯ ಉತ್ಸಾಹವನ್ನೂ ಸಾಕಷ್ಟು ಹೊಗಳುತ್ತಿದ್ದಾರೆ. ಹಾಗಾಗಿ ಈ ರೀಲ್​ ವೈರಲ್ ಆಗುತ್ತಿದೆ. ಹರ್ಷಕುಮಾರ್ ಎನ್ನುವರು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಮಥುರಾ ರೈಲು ಹಳಿಬಿಟ್ಟು ಪ್ಲ್ಯಾಟ್​ಫಾರ್ಮ್​ ಏರಿದ್ದಕ್ಕೆ ಕಾರಣ ಇಲ್ಲಿದೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ಪವರ್​ ಪ್ಯಾಕ್ಡ್​ ಡ್ಯಾನ್ಸ್​ ಎಂದು ನೆಟ್ಟಿಗರು ಇವರನ್ನು ಹುರಿದುಂಬಿಸುತ್ತಿದ್ದಾರೆ. ಜು. 21ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಈತನಕ ಸುಮಾರು 6 ಮಿಲಿಯನ್​ ಜನರು ನೋಡಿದ್ದಾರೆ. 2.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ನಿಮ್ಮ ಈ ಡ್ಯಾನ್ಸ್​ನಿಂದ ನಾವು ಪ್ರಭಾವಿತಗೊಂಡಿದ್ದೇವೆ, ನಿಮಗಿರುವ ಶಕ್ತಿ ನಮಗೂ ಸ್ವಲ್ಪ ಬೇಕು ಎನ್ನುತ್ತಿದ್ದಾರೆ ಅನೇಕರು.

ವಾಟ್ ಝುಮ್ಕಾ

ನಿಮ್ಮ ಭಾವಾಭಿನಯ ಮತ್ತು ನೃತ್ಯವನ್ನು ಪ್ರಸ್ತುಪಡಿಸಿದ ರೀತಿಗೆ ಮನಸೋತೆ ಎಂದಿದ್ದಾರೆ ಒಬ್ಬರು. ಇದು ನಿಜಕ್ಕೂ ಮನಸಿನಿಂದ ಮಾಡಿದ ನೃತ್ಯ, ನಿಮ್ಮ ಶಕ್ತಿ ಅದ್ಭುತ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಈ ಶಕ್ತಿಯೇ ನನ್ನನ್ನು ನೃತ್ಯ ಮಾಡುವಂತೆ ಪ್ರೇರೇಪಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಇಬ್ಬರ ನೃತ್ಯ ಅದ್ಭುತವಾಗಿದೆ ಹಾಗೆ ಜೋಡಿಯೂ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು

ಝುಮ್ಕಾ ಕೂಡ ಗಿರಗಿರ, ಅದರಂತೆ ಇವರೂ ಗಿರಗಿರ, ಇಲ್ಲಿ ನನ್ನ ಕುರ್ಚಿಯೂ ಗಿರಗಿರ ಎಂದಿದ್ದಾರೆ ಒಬ್ಬರು. ಈ ಹಾಡಿಗೆ ಈತನಕ ಡ್ಯಾನ್ಸ್​ ಮಾಡಿದವರಿಗಿಂತ ಈ ಜೋಡಿ ಅತ್ಯಂತ ಉತ್ಸಾಹದಿಂದ ಡ್ಯಾನ್ಸ್ ಮಾಡಿದೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:23 am, Fri, 29 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ