AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು

Sneezing : ಬೆಕ್ಕು, ನಾಯಿ ಸೀನುವುದನ್ನು ನೋಡಿದ್ದೀರಿ. ಆದರೆ ಹುಲಿ? ಹೌದು ಹುಲಿ ಸೀನಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಏಕೆಂದರೆ ಅದು ಸೀನಿದ ಸದ್ದು ಕೂಡ ಅಷ್ಟೇ ಜೋರಾಗಿದೆ. ಆದರೆ ನೆಟ್ಟಿಗರು ಮಾತ್ರ ಈ ಸದ್ದನ್ನು ಬಹಳ ಪ್ರೀತಿಸುತ್ತಿದ್ದಾರೆ. ಏಕೆಂದರೆ ಸೀನುವಾಗ ಹುಲಿ ಬಹಳ ಮುದ್ದಾಗಿ ಕಂಡಿದೆಯಂತೆ. ಈ ವಿಡಿಯೋ ನೋಡಿದ ನಿಮಗೇನು ಅನ್ನಿಸಬಹುದು ಎಂಬ ಕುತೂಹಲ ನಮ್ಮದು.

Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು
ಸಿನುತ್ತಿರುವ ಹುಲಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 28, 2023 | 2:52 PM

Share

Tiger: ಪ್ರಿಯ ಹುಲಿ, ಮಳೆಯಲ್ಲಿ ಬಹಳ ನೆನೆದಿದ್ದ್ಯೋ. ಮೆಣಸಿನಕಾಯಿ ಘಾಟು ಬಂತೋ. ಯಾವ ಅಲರ್ಜಿಯೋ. ಐಸ್​ಕ್ರೀಮ್​ ಜಾಸ್ತಿ ತಿಂದ್ಯೋ. ಯಾರಾದರೂ ಮೂಗಲ್ಲಿ ಕಡ್ಡಿ ಆಡಿಸಿದರೋ. ಏನಾಯ್ತು ಅಂತ ಈ ಪರಿ ಸೀನುತ್ತಾ  (Sneezing) ಕುಳಿತಿದೀಯಾ. ಅಯ್ಯಯ್ಯೋ ಹುಲಿ ಎಂದು ಹೆದರಿ ಓಡುತ್ತಿದ್ದವರೆಲ್ಲ ನಿನ್ನನ್ನು ನೋಡಿ ಸೀನುವಾಗಲೂ ಇದು ಎಂಥಾ ಮುದ್ದು ಎಂದು ಮುಗಿಬಿದ್ದು ಪ್ರೀತಿಸುತ್ತಿದ್ದಾರೆ. ಕೆಲವರು ಝಂಡೂಬಾಮ್​ ಹಿಡಿದುಕೊಂಡು  ಒಂದಿಷ್ಟು ಜನ. ಹಬೆಯ ಪಾತ್ರೆ ಹಿಡಿದು ಇನ್ನೊಂದಿಷ್ಟು ಜನ. ಕಂಬಳಿ ಹಿಡಿದುಕೊಂಡು ಮತ್ತೊಂದಿಷ್ಟು ಜನ. ಔಷಧಿ ಹಿಡಿದುಕೊಂಡು ಇನ್ನೂ ಒಂದಿಷ್ಟು ಜನ ಬರುತ್ತಿದ್ದಾರೆ. ಅಷ್ಟೇ ಯಾಕೆ? ನಿನಗೇ ಅಂತ ಮಾಸ್ಕ್​ ಹೊಲಿಸಿಕೊಂಡು ಬರುತ್ತಿದ್ದಾರೆ ಕೆಲವರು.

ಇದನ್ನೂ ಓದಿ : Viral: ನಾಯಿಯ ಪೋಷಕರನ್ನು ಪತ್ತೆ ಹಚ್ಚಲು ಸಹಾಯ ಕೋರಿದ ರತನ್​ ಟಾಟಾ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 19ರಂದು ಇನ್​ಸ್ಟಾಗ್ರಾಂನ ಟೈಗರ್ಸ್ ವಿಡಿಯೋ ಎಂಬ ಪುಟದಲ್ಲಿ ಅಪರೂಪದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಹುಲಿ ಒಂದೇ ಸಮ ಸೀನುತ್ತಿದೆ. ಈತನಕ 12 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 6.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.

ಹುಲಿಯು ಸೀನುತ್ತಿರುವ ವಿಡಿಯೋ

ನಿಜಕ್ಕೂ ಇದು ನನ್ನಂತೆಯೇ ಸೀನುತ್ತಿದೆ ಎಂದು ಒಬ್ಬರು. ನನ್ನ ಗಂಡ ಹೀಗೆಯೇ ಸೀನುತ್ತಾನೆ ಎಂದು ಇನ್ನೊಬ್ಬರು. ನಶ್ಯ ಬೇಕಾ? ಎಂದು ಮತ್ತೊಬ್ಬರು. ಕರ್ಚೀಫ್​ ಸಾಕಾಗಲ್ಲವಲ್ಲ? ಎಂದು ಮಗದೊಬ್ಬರು… ಹೀಗೆ ಸಾವಿರಾರು ಜನರು ಈ ಹುಲಿಗೆ ಪರಿಪರಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಿನ್ನನ್ನು ದೇವರು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ‘ನಾನೂ ಊಟ ಮಾಡುತ್ತೇನೆ’; ಕರಡಿಯೊಂದು ಮಗುವಿದ್ದ ಡೈನಿಂಗ್​ ಟೇಬಲ್​ಗೆ ಬಂದಾಗ

ನೀನು ಹೀಗೆ ಸೀನುತ್ತ ಅಲ್ಲಿರುವ ಧೂಳನ್ನೆಲ್ಲ ಶುಚಿಗೊಳಿಸುತ್ತಿದ್ದೀ ಎಂದಿದ್ದಾರೆ ಒಬ್ಬರು. ಈತನಕ ನಾನು ನೋಡಿದ ಸೀನಿನ ವಿಡಿಯೋಗಳಲ್ಲಿ ಇದು ಬಹಳ ಮುದ್ದಾಗಿರುವಂಥದ್ದು ಎಂದಿದ್ಧಾರೆ ಇನ್ನೊಬ್ಬರು. ಸೀನಿ ಸೀನಿ ಗಿನ್ನೀಸ್​ ದಾಖಲೆ ಮಾಡಲು ಹೊರಟಿರುವಂತಿದೆ ಈ ಹುಲಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್