Viral: ಗ್ರೀಸ್; 100 ಕೇಜಿ ಗಾಂಜಾ ತಿಂದ ಕುರಿಹಿಂಡು; ನಗಬೇಕೋ ಅಳಬೇಕೋ ಎಂದ ಕುರುಬ
Cannabis : ಪ್ರವಾಹದಿಂದ ರಕ್ಷಿಸಲು ಕುರಿಯ ಹಿಂಡನ್ನು ಫಾರ್ಮ್ನ ಗ್ರೀನ್ಹೌಸ್ನಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಔಷಧೀಯ ಉಪಯೋಗಕ್ಕೆಂದು ಬೆಳೆಸಿದ್ದ ಗಾಂಜಾ ಕೂಡ ಇತ್ತು. ಹಸಿರು ಕಂಡಿದ್ದೇ ಕುರಿಗಳು ಗಾಂಜಾ ಮೇಯ್ದಿವೆ. ಆನಂತರ ಅವು ವಿಚಿತ್ರವಾಗಿ ವರ್ತಿಸಲು ಶುರುಮಾಡಿವೆ. ಕುರುಬನಿಗೆ ಈ ಸನ್ನಿವೇಶ ನೋಡಿ ನಗಬೇಕೋ ಅಳಬೇಕೋ ಗೊತ್ತಾಗಿಲ್ಲ.
Greece: ಭೂಮಿ ಮೇಲಿರುವ ಯಾವ ಸೊಪ್ಪೂ ನಮ್ಮದೇ ಸ್ವತ್ತು. ಸೊಪ್ಪು ತಿನ್ನುವುದೇ ನಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಬದುಕುತ್ತಿರುವ ಕುರಿಗಳಿಗೆ ಇದನ್ನು ತಿನ್ನಬೇಡ ಇದನ್ನು ತಿನ್ನು ಎಂದು ಹೇಳವುದು ಶಕ್ಯವೆ? ಗ್ರೀಸ್ನಲ್ಲಿರುವ ಕುರಿಹಿಂಡೊಂದು ಇದೂ ನಾವು ತಿನ್ನುವ ಸೊಪ್ಪು ಎಂದುಕೊಂಡು ಗಾಂಜಾ (Cannabis) ತಿಂದುಬಿಟ್ಟಿವೆ. ಗ್ರೀಸ್‌ನ ಥೆಸ್ಸಾಲಿಯ ಅಲ್ಮಿರೋಸ್ ಪಟ್ಟಣದ ಬಳಿ ಕುರಿಗಳ ಹಿಂಡು ಗ್ರೀನ್ಹೌಸ್ನಲ್ಲಿ ಬೆಳೆದ ಬರೋಬ್ಬರು 100 ಕಿ.ಗ್ರಾಂ ಗಾಂಜಾವನ್ನು ಸ್ವಾಹಾ ಮಾಡಿವೆ. ಗ್ರೀಸ್, ಲಿಬಿಯಾ, ಟರ್ಕಿ ಮತ್ತು ಬಲ್ಗೇರಿಯಾವನ್ನು ಡೇನಿಯಲ್ ಚಂಡಮಾರುತವು ಅಪ್ಪಳಿಸಿದ ನಂತರ ಕುರಿಗಳು ಆ ಜಾಗದಲ್ಲಿ ಆಶ್ರಯ ಪಡೆಯುತ್ತಿದ್ದವು. ಈ ಸಂದರ್ಭದಲ್ಲಿ ಇಂಥ ಅಚಾತುರ್ಯ ಘಟಿಸಿದೆ.
ಇದನ್ನೂ ಓದಿ : Viral Video: ‘ನಾನೂ ಊಟ ಮಾಡುತ್ತೇನೆ’ ಕರಡಿಯೊಂದು ಮಗುವಿದ್ದ ಡೈನಿಂಗ್ ಟೇಬಲ್ಗೆ ಬಂದಾಗ
ಗ್ರೀನ್ಹೌಸ್ನಲ್ಲಿದ್ದ ಕುರಿಹಿಂಡು ಯಾಕೋ ವಿಚಿತ್ರವಾಗಿ ವರ್ತಿಸುತ್ತಿದೆಯಲ್ಲ ಎಂದು ಕುರುಬನಿಗೆ ಅನುಮಾನ ಬಂದಿದೆ. ‘ಪ್ರವಾಹದಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇಂಥದ್ದರಲ್ಲಿ ಈ ಕುರಿಗಳು ಹೀಗೆ ಮಾಡಿವೆ. ಇದನ್ನು ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತೇ ಆಗಲಿಲ್ಲ. ಈ ವಿಷಯವಾಗಿ ನಿಜಕ್ಕೂ ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ’ ಎಂದಿದ್ದಾನೆ ಅವನು. ಫಾರ್ಮ್ನ ಮಾಲೀಕ ಯಾನ್ನಿಸ್ ಬೌರೌನಿಸ್, ‘ಹಸಿರು ಕಂಡು ತಕ್ಷಣ ತಿಂದುಬಿಟ್ಟಿವೆ. ಅವು ಮೇಕೆಗಳಿಗಿಂತಲೂ ಎತ್ತರದಲ್ಲಿ ಜಿಗಿಯುತ್ತಿದ್ದವು. ಇಷ್ಟು ಎತ್ತರದಲ್ಲಿ ಜಿಗಿದದ್ದನ್ನು ನಾ ಈತನಕ ನೋಡಿದ್ದೇ ಇಲ್ಲ’ ಎಂದಿದ್ದಾನೆ.
ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?
2017 ರಿಂದ ಔಷಧೀಯ ಉದ್ದೇಶಗಳಿಗಾಗಿ ಗ್ರೀಸ್‌ನಲ್ಲಿ ಗಾಂಜಾ ಕಾನೂನುಬದ್ಧವಾಗಿದೆ. 2023 ರಲ್ಲಿ ಮೊದಲ ಔಷಧೀಯ ಗಾಂಜಾ ಉತ್ಪಾದನಾ ಘಟಕವನ್ನು ಪ್ರಾರಂಭಿಸಿತು. ಔಷಧೀಯ ಬಳಕೆಗಾಗಿ ಗಾಂಜಾ ಬೆಳೆಸುತ್ತಿರುವುದರಿಂದ ದೇಶಕ್ಕೆ ಹೆಚ್ಚೆಚ್ಚು ಆರ್ಥಿಕ ಅವಕಾಶಗಳು ಒದಗಿವೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. 1936 ರಲ್ಲಿ ಇದನ್ನು ನಿಷೇಧಿಸುವ ಮೊದಲು ಕೌಂಟಿಯಲ್ಲಿ ಗಾಂಜಾ ಬೆಳೆಸಿ ಬೆಳೆಸಿತು ಮತ್ತು ರಫ್ತು ಮಾಡಲಾಗುತ್ತಿತ್ತು.
ಇದನ್ನೂ ಓದಿ : Viral Video: ವೈರಲ್ ಆಗುತ್ತಿದೆ ಈ ಡ್ರೈಫ್ರೂಟ್ಸ್ ಪಿಝಾ; ಇಟಲಿಗರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದ ನೆಟ್ಟಿಗರು
ಬ್ರಿಟನ್, ಜರ್ಮನಿ, ಇಟಲಿ ಮತ್ತು ಡೆನ್ಮಾರ್ಕ್ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಗಾಂಜಾ ಉತ್ಪನ್ನಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಉರುಗ್ವೆ ನಂತರ ಕೆನಡಾ 90 ವರ್ಷಗಳ ನಂತರ ಗಾಂಜಾ ನಿಷೇಧವನ್ನು ಹಿಂಪಡೆದು ಸಂಪೂರ್ಣ ಕಾನೂನುಬದ್ಧಗೊಳಿಸಿದ ವಿಶ್ವದ ಎರಡನೇ ದೇಶ ಎನ್ನಿಸಿಕೊಂಡಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ