AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರೂ ಕುಸಿದಿಲ್ಲ’ ಪ್ರೊ ರಿದ್ಧಿ ರಾಥೋರ್

Inspirational : 'ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅಪ್ಪನೇ ನನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸತೊಡಗಿದ. ಮಲತಾಯಿ ಕಿರುಕುಳ ನೀಡತೊಡಗಿದಳು. ಮನೆಬಿಟ್ಟು ಬಂದು ನನ್ನ ಬದುಕನ್ನು ಒಪ್ಪಗೊಳಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಪಿಎಚ್.ಡಿ ಮುಗಿಸಿದೆ. ಇಂದು ನಾನು ಪ್ರೊಫೆಸರ್​. ಆದರೂ ನನಗಾದ ಗಾಯಗಳು ಸಂಪೂರ್ಣ ಮಾಯವಾಗಿಲ್ಲ. ಆದರೂ ನಾನು ಭರವಸೆ ಕಳೆದುಕೊಂಡಿಲ್ಲ.'

Viral Video: 'ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರೂ ಕುಸಿದಿಲ್ಲ' ಪ್ರೊ ರಿದ್ಧಿ ರಾಥೋರ್
ಪ್ರೊ. ರಿದ್ಧಿ ರಾಥೋರ್
ಶ್ರೀದೇವಿ ಕಳಸದ
|

Updated on:Sep 27, 2023 | 4:55 PM

Share

Viral Video: ‘ನಾನು ಎರಡು ವರ್ಷದವಳಿದ್ಧಾಗ ನನ್ನ ಅಮ್ಮ ನನ್ನನ್ನು ಮನೆಯನ್ನೂ ಬಿಟ್ಟು ಹೊರಟುಹೋದಳು. ಅಪ್ಪ ಮತ್ತೊಂದು ಮದುವೆಯಾದ. ನಾನು ಏಳನೇ ಕ್ಲಾಸಿಗೆ ಬರುತ್ತಿದ್ದಂತೆ ಅಪ್ಪ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾರಂಭಿಸಿದ. ಪ್ರತೀ ರಾತ್ರಿ ನನ್ನ ಕೋಣೆಗೆ ಬರುತ್ತಿದ್ದ. ಇದು ಕೆಲ ಕಾಲ ಹಾಗೆಯೇ ಮುಂದುವರಿಯಿತು. ಕೊನೆಗೆ ನಾನಿದನ್ನು ಕುಟುಂಬದೆದುರು ಹೇಳಬೇಕಾಯಿತು. ಆದರೆ ಆಗ ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ನಂತರ ಮಲತಾಯಿಯೂ (Stepmother) ಕಿರುಕುಳ ಕೊಡಲಾರಂಭಿಸಿದಳು. ಆಗ ನಾನು ಖಿನ್ನತೆಗೆ ಜಾರಿದೆ. ಎರಡು ವರ್ಷಗಳ ನಂತರ ನಾನು ಆ ಮನೆಯನ್ನು ಬಿಟ್ಟು ಹೊರಬಂದೆ. ಛಿದ್ರಗೊಂಡ ನನ್ನ ಬದುಕನ್ನು ಚೆನ್ನಾಗಿ ಕಟ್ಟಿಕೊಳ್ಳಲೇಬೇಕೆಂದು ನಿರ್ಧರಿಸಿ ತಲೆ ಎತ್ತಿ ನಿಂತೆ. ಕಷ್ಟಪಟ್ಟು ಪಿಎಚ್​.ಡಿ ಪದವಿ ಪಡೆದೆ. ನಾನೀಗ ಪ್ರೊಫೆಸರ್. ನನ್ನ ಗೆಳೆಯ ಮಯೂರ ರೂಪೇಶ​ನೊಂದಿಗೆ ಬಾಳಸಂಗಾತಿಯಾಗಲಿದ್ಧಾನೆ.’ ಪ್ರೊ. ರಿದ್ಧಿ ರಾಥೋರ್, ರಾಜಕೋಟ್​

ಇದನ್ನೂ ಓದಿ : Viral Video: ಈ ವಿಡಿಯೋ ಖಂಡಿತ ಮುಂಬೈಯದ್ದೇ! ಎಂದ ನೆಟ್ಟಿಗರು, ನೀವೇನು ಹೇಳುತ್ತೀರಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು officialpeopleofindia ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. 3 ಗಂಟೆಗಳ ಹಿಂದೆ ಮಾಡಿದ ಈ ಪೋಸ್ಟ್​ ಅನ್ನು ಈತನಕ ಸುಮಾರು 42,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ರಿದ್ಧಿಯ ಬದುಕಿನ ಬಗ್ಗೆ ಮರುಕ ಮತ್ತು ಆಕೆಯ ದಿಟ್ಟತನದ ಬಗ್ಗೆ ಶ್ಲಾಘಿಸಿದ್ದಾರೆ.

ಪ್ರೊ. ರಿದ್ಧಿ ರಾಥೋರ್ ಕಥೆ

ನೀವು ಇನ್ನೂ ಅವರನ್ನು “ನನ್ನ ತಂದೆ” ಎಂದು ಕರೆಯುತ್ತೀರಿ! ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ದೇವರೇ, ನಿಮ್ಮನ್ನು ಬಿಗಿಯಾಗಿ ತಬ್ಬಿಕೊಳ್ಳಬೇಕು ಎನ್ನಿಸುತ್ತಿದೆ. ಎಂಥ ಧೈರ್ಯಶಾಲಿ ಮತ್ತು ಬುದ್ಧಿವಂತ ಹುಡುಗಿ ನೀವು. ಇಂಥ ಸಂದರ್ಭದಲ್ಲಿಯೂ ಪಿಎಚ್​.ಡಿ ಪೂರ್ಣಗೊಳಿಸಿದ್ದೀರಿ ಎಂದರೆ! ನಿಮಗೆ ಶುಭವಾಗಲಿ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಆಘಾತವನ್ನು ಮಾಯವಾಗಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಭವಿಸ್ಯ ಉಜ್ವಲವಾಗಿದೆ. ನಿಮ್ಮನ್ನು ಗೌರವಿಸುವ ಪ್ರೀತಿಸುವ ಜನರಿಂದ ನೀವು ಆವರಿಸಲ್ಪಟ್ಟಿದ್ದೀರಿ, ಅದುವೇ ಶ್ರೀರಕ್ಷೆ ನಿಮಗೆ ಎಂದಿದ್ದಾರೆ ಮತ್ತೊಬ್ಬರು.

ಬಾಳಸಂಗಾತಿಯಾಗಲಿರುವ ಮಯೂರನೊಂದಿಗೆ ರಿದ್ಧಿ

ಇದು ತುಂಬಾ ಹೃದಯ ವಿದ್ರಾವಕವಾಗಿದೆ, ಒಬ್ಬ ತಂದೆ ಹೀಗೆ ನಡದುಕೊಳ್ಳಬಲ್ಲರೆ? ಊಹಿಸಿಕೊಳ್ಳಲು ಅಸಾಧ್ಯ. ನಿಮಗೆ ಹೆಚ್ಚು ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ ಒಬ್ಬರು. ನೀವು ಹೀಗೆ ತಲೆ ಎತ್ತಿ ನಿಂತಿದ್ದಕ್ಕೇ ಎಲ್ಲವೂ ಸಾಧ್ಯವಾಯಿತು. ಅನೇಕ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನರಳುತ್ತಿದ್ದಾರೆ. ಅವರಿಗೂ ನಿಮ್ಮಂತೆ ಶಕ್ತಿ ಬರಲಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:50 pm, Wed, 27 September 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು