ಕೋಟ್ಯಂತರ ರೂ. ಮೌಲ್ಯದ ಷೇರುಗಳ ಒಡೆಯ, ಸಣ್ಣ ಮನೆಯಲ್ಲಿ ಸರಳ ಜೀವನ; ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡ್ತಿದ್ದಾರೆ ಕರ್ನಾಟಕದ ವೃದ್ಧ
ನನ್ನ ಬಳಿ 27,855 ಎಲ್ ಆ್ಯಂಡ್ ಟಿ ಷೇರುಗಳು, 2,475 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 4,000 ಕರ್ನಾಟಕ ಬ್ಯಾಂಕ್ ಷೇರುಗಳಿವೆ. ನಾನು ಪ್ರತಿ ವರ್ಷ ಈ ಷೇರುಗಳಿಂದ 6,15,000 ರೂಪಾಯಿ ಲಾಭಾಂಶವನ್ನು ಗಳಿಸುತ್ತೇನೆ ಎಂದು ಹಿರಿಯ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕದ ಹಿರಿಯ ವ್ಯಕ್ತಿಯೊಬ್ಬರು ಮೂರು ವಿಭಿನ್ನ ಕಂಪನಿಗಳಲ್ಲಿ 10.3 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು (Shares) ಹೊಂದಿದ್ದಾರೆ ಎನ್ನಲಾಗಿದ್ದು, ಆ ಕುರಿತು ಅವರು ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಅಷ್ಟೊಂದು ಮೌಲ್ಯದ ಷೇರುಗಳನ್ನು ಹೊಂದಿದ್ದರೂ ಅತಿ ಸರಳವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ಉಲ್ಲೇಖಿಸಲಾಗಿದೆ. ವಿಡಿಯೋದಲ್ಲಿ ಹೇಳಿರುವ ಪ್ರಕಾರ ಅವರು, 10.3 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಅವುಗಳ ಲಾಭಾಂಶದಿಂದಲೇ ವಾರ್ಷಿಕವಾಗಿ 6 ಲಕ್ಷ ರೂ. ಗಳಿಸುತ್ತಿದ್ದಾರೆ. ಈ ಬಗ್ಗೆ ರಾಜೀವ್ ಮೆಹ್ತಾ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮ ತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಅವರು ಸರಳ ಜೀವನ ನಡೆಸುತ್ತಿರುವುದು ಮತ್ತು ಹಳೆಯ ಮನೆಯಲ್ಲಿ ಹೇಗೆ ವಾಸಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ನನ್ನ ಬಳಿ 27,855 ಎಲ್ ಆ್ಯಂಡ್ ಟಿ ಷೇರುಗಳು, 2,475 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 4,000 ಕರ್ನಾಟಕ ಬ್ಯಾಂಕ್ ಷೇರುಗಳಿವೆ. ನಾನು ಪ್ರತಿ ವರ್ಷ ಈ ಷೇರುಗಳಿಂದ 6,15,000 ರೂಪಾಯಿ ಲಾಭಾಂಶವನ್ನು ಗಳಿಸುತ್ತೇನೆ ಎಂದು ಹಿರಿಯ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ವಹಿವಾಟಿನ ಬೆಲೆಗಳ ಪ್ರಕಾರ, ಅವರು 8.24 ಕೋಟಿ ರೂ. ಮೌಲ್ಯದ ಎಲ್ & ಟಿ ಷೇರುಗಳನ್ನು, 2.04 ಕೋಟಿ ರೂ. ಮೌಲ್ಯದ ಅಲ್ಟ್ರಾಟೆಕ್ ಷೇರುಗಳನ್ನು ಮತ್ತು 9.80 ಲಕ್ಷ ರೂ. ಮೌಲ್ಯದ ಕರ್ನಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ ಎಂದು ರಾಜೀವ್ ಮೆಹ್ತಾ ‘ಎಕ್ಸ್’ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
10.3 ಕೋಟಿ ರೂ. ಮೌಲ್ಯದ ಷೇರುದಾರ ವೃದ್ಧನ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್
As they say, in Investing you have to be lucky once
He is holding shares worth ₹80 crores L&T
₹21 crores worth of Ultrtech cement shares
₹1 crore worth of Karnataka bank shares.
Still leading a simple life#Investing
@connectgurmeet pic.twitter.com/AxP6OsM4Hq
— Rajiv Mehta (@rajivmehta19) September 26, 2023
ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿ ಸರಳ ಜೀವನ ನಡೆಸುತ್ತಿರುವ ಬಗ್ಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ಯಾಪಿಟಲ್ ಮೈಂಡ್ ಸಂಸ್ಥಾಪಕ ದೀಪಕ್ ಶೆಣೈ ಅವರು ಮೆಹ್ತಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ‘ಭಾಯ್ 27,000 L&T ಷೇರುಗಳ ಮೌಲ್ಯ 8 ಕೋಟಯೇ? ಅದೇ ರೀತಿ ಅಲ್ಟ್ರಾಟೆಕ್ನದ್ದು 3.2 ಕೋಟಿ ರೂ, ಮತ್ತು ಕರ್ಣಾಟಕ ಬ್ಯಾಂಕ್ನದ್ದು 10 ಲಕ್ಷ ರೂ. ಆಗುತ್ತದೆ. ಇರಲಿ, ಇದು ಇನ್ನೂ ಯೋಗ್ಯವಾದ ಮೊತ್ತವಾಗಿದೆ. ಅವರಿಗೆ ಇನ್ನಷ್ಟು ಬಲ ಬಂದಿದೆ. ಆದರೆ, ದಯವಿಟ್ಟು ಈ ರೀತಿ ಪೋಸ್ಟ್ ಮಾಡುವಾಗ ಅವರ ಮುಖವನ್ನು ಮಸುಕುಗೊಳಿಸುವುದನ್ನು ಪರಿಗಣಿಸಿ. ಇಂಥ ಪ್ರಚಾರದಿಂದ ಸಾಮಾನ್ಯವಾಗಿ ಸರಳ ಜೀವನ ನಡೆಸುವ ವೃದ್ಧರಿಗೆ ಸಮಸ್ಯೆಯಾಗಬಹುದು’ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ
ಹಲವಾರು ಬಳಕೆದಾರರು ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಅಂತಹ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುವುದು ಅವರು ನಡೆಸುತ್ತಿರುವ ಸರಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಹೆಚ್ಚಿನ ಜನರು ಅವನನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾರೆ ಎಂದು ಅನೇಕರು ಉಲ್ಲೇಖಿಸಿದ್ದಾರೆ.
ಆದರೆ, ಈ ವೃದ್ಧ ಕರ್ನಾಟಕದ ಯಾವ ಪ್ರದೇಶದವರು ಎಂಬ ಮಾಹಿತಿ ಹಾಗೂ ಹೆಚ್ಚಿನ ವಿವರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Wed, 27 September 23