Cyber Crime: ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ ವಂಚನೆ, ಪೊಲೀಸರು ಹೇಳಿದ ಕಿವಿ ಮಾತೇನು?

ಇತ್ತೀಚೆಗೆ ಮೈಸೂರಿನ ಮಹಿಳೆಯೊಬ್ಬರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿತ್ತು. ಕರೆ ಮಾಡಿದವರು ಮೊದಲಿಗೆ ಸಹಾಯ ಮಾಡುವಂತೆ ಮಾತನಾಡಿ ಬಳಿಕ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಪರಿಚಿತ ವ್ಯಕ್ತಿಗಳ ಇಂತಹ ಬೆದರಿಕೆಗಳಿಗೆ ಸಾರ್ವಜನಿಕರು ಮಣಿಯಬಾರದು. ಈ ರೀತಿ ಬೆದರಿಕೆ ಅಥವಾ ಹಣಕ್ಕೆ ಬೇಡಿಕೆ ಬಂದರೆ ಸಾರ್ವಜನಿಕರು ಕೂಡಲೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಕಿವಿ ಮಾತು ಹೇಳಿದ್ದಾರೆ.

Cyber Crime: ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ ವಂಚನೆ, ಪೊಲೀಸರು ಹೇಳಿದ ಕಿವಿ ಮಾತೇನು?
ಸಾಂದರ್ಭಿಕ ಚಿತ್ರ
Follow us
|

Updated on: Sep 27, 2023 | 2:52 PM

ಮೈಸೂರು, ಸೆ.2023: ಸೈಬರ್‌ ಕ್ರೈಂ (Cyber Crime) ಖದೀಮರು ಅಮಾಯಕ ಜನರನ್ನು ವಂಚಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರು ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದು ಚಾಲಾಕಿ ವಂಚಕರು (Cheating) ತಾವು ಪೊಲೀಸರೆಂದು ಕರೆ ಮಾಡಿ ಅಮಾಯಕರನ್ನು ನಂಬಿಸಿ ಹಣಕ್ಕೆ ಬೇಡಿಗೆ ಇಟ್ಟು ವಂಚನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಾವು ಪೊಲೀಸರು ನಿಮ್ಮ ಮೇಲೆ ದೂರು ದಾಖಲಾಗಿದೆ. ಸಾಕ್ಷಿ ಇದೆ ಹಣ ಕೊಟ್ಟರೆ ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿ ಮೋಸ ಮಾಡುತ್ತಿದ್ದಾರೆ.

ಇತ್ತೀಚೆಗೆ ನಗರದ ಮಹಿಳೆಯೊಬ್ಬರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿತ್ತು. ಕರೆ ಮಾಡಿದವರು ಮೊದಲಿಗೆ ಸಹಾಯ ಮಾಡುವಂತೆ ಮಾತನಾಡಿ ಬಳಿಕ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ಹೆಸರಿನ ಪಾರ್ಸೆಲ್ ಥಾಯ್ಲೆಂಡ್‌ಗೆ ಹೋಗಿದೆ. ಆ ಪಾರ್ಸಲ್​ನಲ್ಲಿ ಕೆಲವು ಅಕ್ರಮ ವಸ್ತುಗಳಿದ್ದು ಯಾವುದೇ ಕಾನೂನು ಸಮಸ್ಯೆ ಬರಬಹುದು. ಹೀಗಾಗಿ ಅದನ್ನು ಅಲ್ಲೇ ನಮ್ಮ ಏಜೆನ್ಸಿಯವರು ತೆಗೆದುಕೊಳ್ಳುತ್ತಾರೆ ಎಂದು ವಂಚಕರು ಸಹಾಯ ಮಾಡುವ ರೀತಿಯಲ್ಲಿ ಕರೆ ಮಾಡಿ ಮಹಿಳೆಗೆ 40,000 ರೂ. ಡಿಮ್ಯಾಂಡ್ ಮಾಡಿದ್ದರು. ಈ ಬಗ್ಗೆ ಮಹಿಳೆಯ ದೂರಿನ ಆಧಾರದ ಮೇಲೆ, ಮಾಹಿತಿ ತಂತ್ರಜ್ಞಾನದ ಸೆಕ್ಷನ್ 66 (ಡಿ) ಮತ್ತು ಐಪಿಸಿ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಹಾವೇರಿ: ಕಡಿಮೆ ಬೆಲೆಗೆ ಚಿನ್ನದ ಆಸೆ ತೊರಿಸಿ 25 ಲಕ್ಷ ವಂಚನೆ; ಇಲ್ಲಿದೆ ವಿವರ

ಅಪರಿಚಿತ ವ್ಯಕ್ತಿಗಳ ಇಂತಹ ಬೆದರಿಕೆಗಳಿಗೆ ಸಾರ್ವಜನಿಕರು ಮಣಿಯಬಾರದು. ಕೆಲವು ವಾರಗಳ ಹಿಂದೆ, ಪೊಲೀಸ್ ಪ್ರಕರಣ ದಾಖಲಿಸುವ ಹೆಸರಿನಲ್ಲಿ ಮತ್ತೊಬ್ಬ ನಗರದ ನಿವಾಸಿಯನ್ನು ವಂಚಿಸಲಾಗಿದೆ. ಈ ರೀತಿ ಬೆದರಿಕೆ ಅಥವಾ ಹಣಕ್ಕೆ ಬೇಡಿಕೆ ಬಂದರೆ ಸಾರ್ವಜನಿಕರು ಕೂಡಲೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

CEN ಪೋಲೀಸರ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಈ ರೀತಿಯ ಘಟನೆಗಳು ವರದಿಯಾಗುತ್ತಲೇ ಇದೆ. ವಂಚಕರು ತಮ್ಮ ವಂಚನೆಯ ಮಾರ್ಗಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಉಡುಗೊರೆಗಳ ಹೆಸರಿನಲ್ಲಿ ಮೋಸ ಮಾಡುವುದು ಅವರು ಬಳಸುವ ಸಾಮಾನ್ಯ ತಂತ್ರವಾಗಿದೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಈ ರೀತಿಯ ಕರೆಗಳನ್ನು ಪರಿಗಣಿಸಬಾರದು ಎಂದು ಸಿಇಎನ್ ಪೊಲೀಸರು ತಿಳಿಸಿದ್ದಾರೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್